ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತುತ ದಿನಗಳಲ್ಲಿ ಜಾನಪದ ಸಾಹಿತ್ಯ, ಸಂಸ್ಕಾರ ಕಣ್ಮರೆ

Last Updated 19 ಅಕ್ಟೋಬರ್ 2012, 6:00 IST
ಅಕ್ಷರ ಗಾತ್ರ

ಹಾವೇರಿ: `ಇತ್ತೀಚಿನ ದಿನಗಳಲ್ಲಿ ಜಾನಪದ ಸಾಹಿತ್ಯ ಹಾಗೂ ಅದರಲ್ಲಿನ ಸಂಸ್ಕಾರಗಳನ್ನು ಕಣ್ಮರೆಯಾಗುತ್ತಿರು ವುದು ನೋವಿನ ಸಂಗತಿ~ ಎಂದು ಜಾನ ಪದ ಸಾಹಿತಿ ಡಾ.ಶಂಭು ಬಳಿಗಾರ ಹೇಳಿದರು.

ನಗರದ ಗುರುಭವನದಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ. ಗೋಕಾಕ್ ವೇದಿಕೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕಸಾಪ, ನಾಡಹಬ್ಬ ಉತ್ಸವ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾ ಘಟಕ ಬುಧವಾರ ಏರ್ಪಡಿಸಿದ್ದ ನಾಡಹಬ್ಬ ಉತ್ಸವದಲ್ಲಿ ಅವರು ಕನ್ನಡ, ಕನ್ನಡಗಿ ಹಾಗೂ ಕರ್ನಾಟಕ ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡಿದರು.

ಕನ್ನಡಿಗರು ಸ್ವಾಭಿಮಾನಿಗಳು, ಸಹನಶೀಲರು ಆದರೆ, ಇಂದು ಅದೇ ನಮ್ಮ ದೌರ್ಬಲ್ಯವಾಗಿದೆ. ಕನ್ನಡ ಜಲ, ನೆಲ, ನಾಡು ನುಡಿಗೆ ಕುತ್ತು ಬಂದಾಗ ಕನ್ನಡಿಗರು ಸಿಡಿದೇಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ನೆಹರೂ ಓಲೇಕಾರ ಮಾತನಾಡಿ, ಕನ್ನಡ ನಾಡಹಬ್ಬ ಕನ್ನಡಗರು ಒಗ್ಗೂಡಿರುವ ಸಂಕೇತವಾಗಿ ಆಚರಿಸುವ ಹಬ್ಬವಾಗಿದೆ. ಕನ್ನಡದ ಕುಲಕೋಟಿ ಪ್ರಜೆಗಳು ಕನ್ನಡ ತಾಯಿ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಒಂದು ಅಗಳು ಅನ್ನ ಬೆಳೆಯಲು ರೈತ ಎಷ್ಟು ಶ್ರಮವಹಿಸುತ್ತಾನೆನ್ನುವ ಅರಿವು ಎಲ್ಲರಲ್ಲಿರಬೇಕು, ಆಧುನಿಕತೆಯ ಸೋಗಿನಲ್ಲಿ ಅನ್ನವನ್ನು ತಟ್ಟೆಯಲ್ಲಿ ಉಳಿಸಿ ಚಲ್ಲುವುದು ನಿಲ್ಲಬೇಕು. ಅವಶ್ಯ ವಿದ್ದಷ್ಟನ್ನು ಮಾತ್ರವೇ ನೀಡಿಸಿಕೊಂಡು ಸ್ವೀಕರಿಸುವುದರಿಂದ ದೇಶದ ಆಹಾರ ಭದ್ರತೆಯಲ್ಲೂ ಮಹಿಳೆ ಸಹಕರಿಸ ಬಹುದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕೇತ್ರ ದಲ್ಲಿ ಸಾಧನೆ ಮಾಡಿದ ಭಾನುಪ್ರಕಾಶ ಕುಲಕರ್ಣಿ, ರತ್ನಮಾಲಾ ಜ್ಯೋತಿ ಬಣ್ಣದ, ಪತ್ರಕರ್ತ ಅರವಿಂದ ಪಾಟೀಲ. ಎಂ.ಬಿ.ಅಂಬಿಗೇರ, ಮೇಘಾ ಪಾವಲಿ, ರಬಜ್‌ಸಾಬ್ ಕ್ವಾಟಿನಾಯಕ ಅವರನ್ನು ಸನ್ಮಾನಿಸಲಾಯಿತು.

ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಾನ್ನಿಧ್ಯವನ್ನು ಹೊಸಮಠದ ಬಸವ ಶಾಂತಲಿಂಗ ಶ್ರೀಗಳು ನೇತೃತ್ವವನ್ನು ವಹಿಸಲಿದ್ದರು. ನಾಡಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ ಹೆರೂರ ಅಧ್ಯಕ್ಷತೆ ವಹಿಸಿದ್ದರು.ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಿರೀಶ ತುಪ್ಪದ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಬಿ.ಕೊಡ್ಲಿ, ತಾಲ್ಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ವಿ.ಎಂ.ಪತ್ರಿ, ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ವಾಲಿಶೆಟ್ಟರ, ಡಾ.ಸತೀಶ ಪಂಡಿತ ಪಾಲ್ಗೊಂಡಿದ್ದರು.

ಅಕ್ಕಮಹಾದೇವಿ ಮುದ್ದಿ ಪ್ರಾರ್ಥಿಸಿ ದರು. ಕಸಾಪ ತಾಲ್ಲೂಕು ಅಧ್ಯಕ್ಷ ವೈ.ಬಿ.ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎನ್.ಜಾವೂರ ಸ್ವಾಗತಿಸಿದರು. ನಾಗರಾಜ ದೇಸಳ್ಳಿ ಹಾಗೂ ಮಹಾಂತೇಶ ಮರಿ ಗೂಳಪ್ಪನವರ ನಿರೂಪಿಸಿದರು.

ಇದಕ್ಕೂ ಮುನ್ನ ಕಸಾಪ ಪದಾ ಧಿಕಾರಿಗಳು, ನಾಡಹಬ್ಬ ಉತ್ಸವ ಸಮಿತಿ ಸದಸ್ಯರು ನಗರದಲ್ಲಿ ಬೈಕ್ ರ‌್ಯಾಲಿ ನಡೆಸಿ ನಗರದ ಪ್ರಮುಖ ವೃತ್ತಗಳಲ್ಲಿನ ಗಣ್ಯರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

`ಮಕ್ಕಳ ಬೆಳೆಸುವ ಪದ್ಧತಿ ಬದಲಾಗಲಿ~
ಹಾನಗಲ್:
`ಸಮಾಜದಲ್ಲಿ ಮಕ್ಕಳನ್ನು ಬೆಳೆಸುವ ಪದ್ಧತಿ ಬದಲಾಗಬೇಕಾಗಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಕ್ಕಳಿಗೆ  ಸ್ವತಂತ್ರವಾಗಿ ಯೋಚಿಸುವ ಶಕ್ತಿ ನೀಡುತ್ತಾರೆ. ಆದರೆ ಭಾರತದಲ್ಲಿ ಸಂಪ್ರದಾಯದ ಹೆಸರಿನಲ್ಲಿ ಹಳೆಯ ಪದ್ಧತಿಗಳನ್ನೇ ಮುಂದುವರೆಸಿಕೊಂಡು ಹೋಗುತ್ತಿರುವುದು ಖೇದದ ಸಂಗತಿ~ ಎಂದು ಸಂಸದ ಶಿವಕುಮಾರ ಉದಾಸಿ ವಿಷಾದ ವ್ಯಕ್ತಪಡಿಸಿದರು.

ಹಾನಗಲ್ಲಿನಲ್ಲಿ 75ನೇ ನಾಡಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಮಕ್ಕಳಿಗೆ ಸರಿಯಾದ ಮಾಹಿತಿ ನೀಡಬೇಕು. ಶಿಕ್ಷಣದಲ್ಲಿ ಬದಲಾವಣೆ ಬೇಕಾಗಿದೆ. ನಾವು ಪರಿವರ್ತನೆಯ ಕಾಲಘಟ್ಟದಲ್ಲಿದ್ದೆೀವೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಮೋಹನ ನಾಗಮ್ಮನವರ, ಕರ್ನಾಟಕದಲ್ಲಿ ಅನ್ಯಭಾಷಿಕರನ್ನು ಓಲೈಸುವ ಕಾರ್ಯ ನಡೆಯುತ್ತಿದೆ.  ರಾಜ್ಯದಲ್ಲಿ ಪ್ರಸಕ್ತ ಸರ್ಕಾರ 127 ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಖೇದದ ಸಂಗತಿ ಎಂದರು. ರಂಗಕರ್ಮಿ ಶ್ರೀಶೈಲ ಹುದ್ದಾರ ಉಪನ್ಯಾಸ ನೀಡಿದರು.

ಹಿರೇಕೆರೂರ ಮಾಜಿ ಶಾಸಕ ಯು.ಬಿ.ಬಣಕಾರ, ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಬ್ಯಾಡಗಿಯ ಮುಖಂಡ ಮುರಿಗೆಪ್ಪ ಶೆಟ್ಟರ,  ಗಣ್ಯರಾದ ಎಂ.ಎಸ್.ದೊಡ್ಡಗೌಡ್ರ, ರವಿ ಬೆಲ್ಲದ, ಪ್ರಭು ಹಂಚಿನಾಳ, ಸಮಿತಿಯ ಅಧ್ಯಕ್ಷ  ನಾಗೇಂದ್ರ ತುಮರಿಕೊಪ್ಪ, ಸುರೇಶ ರಾಯ್ಕರ ವೇದಿಕೆಯಲ್ಲಿದ್ದರು.
ಅಮೃತಾ ನಿಂಗೋಜಿ, ರೂಪಾ ಕಿವುಡೆರ ಸ್ವಾಗತಿಸಿದರು. ರಾಜು ಪೇಟಕರ ಕಾರ್ಯಕ್ರಮ ನಿರೂಪಿಸಿದರು. ಡಾ. ಎಂ.ಎಚ್.ಹೊಳೆಣ್ಣನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT