ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಚೀನ ಭಾರತದಲ್ಲಿ ನಿರಂತರ ಶಿಕ್ಷಣ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಇಡೀ ಜಗತ್ತೇ ಕತ್ತಲಲ್ಲಿದ್ದಾಗ ಪ್ರಾಚೀನ ಭಾರತ ತನ್ನ ಜ್ಞಾನದ ಬಲದಿಂದ ಹೊಳೆಯುತ್ತಿತ್ತು. ಇದಕ್ಕೆ ಕಾರಣ, ಜ್ಞಾನವು ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ನಿರಂತರವಾಗಿ ಲಭ್ಯವಾಗುತ್ತಿತ್ತು~ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ನುಡಿದರು.

ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿ.ವಿ.ಯು ನಗರದ ಅರಮನೆ ಮೈದಾದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, `ಜ್ಞಾನದ ಹಸ್ತಾಂತರದಿಂದಾಗಿಯೇ ಭಾರತ ಜ್ಞಾನದ ಸಮಾಜವಾಯಿತು. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಡಾ.ಎಸ್.ರಾಧಾಕೃಷ್ಣನ್ ಪರಂಪರೆಯನ್ನು ಮುಂದುವರೆಸಬೇಕು~ ಎಂದರು.

`ಇತರ ಶಿಕ್ಷಕರಂತೆ ರಾಧಾಕೃಷ್ಣನ್ ಅವರೂ ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿದರು. ಆ ಸಮಸ್ಯೆಗಳನ್ನೆಲ್ಲ ಮೀರಿದ್ದರಿಂದಲೇ ಇತರರಿಗೆ ಮಾದರಿಯಾದರು. ಆದ್ದರಿಂದ ಇಂದಿನ ಶಿಕ್ಷಕರು ತಮಗೆ ಎದುರಾಗುವ ಸಣ್ಣ-ಪುಟ್ಟ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು.

ಮುಂದಿನ ಪೀಳಿಗೆಗೆ ಜ್ಞಾನವನ್ನು ಹಂಚುವಂತಹ ಉನ್ನತ ಗುರಿಯನ್ನು ಇಟ್ಟುಕೊಳ್ಳಬೇಕು~ ಎಂದು ಸಲಹೆ ನೀಡಿದರು. ಕುಲಪತಿ ಡಾ.ಎನ್.ಪ್ರಭುದೇವ್ ಮಾತನಾಡಿ, `ವಿ.ವಿ.ಯ ಪ್ರಾಧ್ಯಾಪಕರು ಹಲವು ಒತ್ತಡಗಳ ನಡುವೆಯೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದರೂ ಸಹ ಇನ್ನೂ ಉತ್ತಮವಾಗಿ ಕೆಲಸ ನಿರ್ವಹಣೆ ಮಾಡುವ ಮೂಲಕ ಬೆಂಗಳೂರು ವಿ.ವಿ.ಯನ್ನು ದೇಶದ ಅತ್ಯುತ್ತಮ ವಿ.ವಿ.ಯನ್ನಾಗಿಸಬೇಕು~ ಎಂದರು.

ಕಾರ್ಯಕ್ರಮದಲ್ಲಿ ವಿಜ್ಞಾನ ನಿಕಾಯದ ಡೀನ್ ಪ್ರೊ.ಜಿ.ಮೋಹನ್‌ಕುಮಾರ್, ಕಾನೂನು ನಿಕಾಯದ ಡೀನ್ ಪ್ರೊ.ಕೆ.ಎಂ.ಹನುಮಂತರಾಯಪ್ಪ, ಕಲಾ ನಿಕಾಯದ ಡೀನ್ ಎನ್.ರಂಗಸ್ವಾಮಿ, ಶಿಕ್ಷಣ ನಿಕಾಯದ ಡೀನ್ ಬಿ.ಎಂ.ಕೀರ್ತಿನಾರಾಯಣಸ್ವಾಮಿ, ವಾಣಿಜ್ಯ ನಿಕಾಯದ ಡೀನ್ ಪ್ರೊ.ರಾಮಚಂದ್ರಗೌಡ, ಎಂಜಿನಿಯರಿಂಗ್ ನಿಕಾಯದ ಡೀನ್ ಪ್ರೊ.ಬಿ.ಆರ್.ನಿರಂಜನ್, ಬೆಂಗಳೂರು ವಿ.ವಿ. ಕಾಲೇಜು ಶಿಕ್ಷಕರ ಸಂಘದ (ಬುಕ್ಟಾ) ಅಧ್ಯಕ್ಷ ಪ್ರೊ.ಮುನಿರಾಜಪ್ಪ ಅವರನ್ನು ಸನ್ಮಾನಿಸಲಾಯಿತು.

ಕುಲಸಚಿವ ಡಾ.ಆರ್.ಎಂ.ರಂಗನಾಥ್, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಆರ್.ಸುಬ್ರಹ್ಮಣ್ಯ, ವಿ.ವಿ.ಸಿಂಡಿಕೇಟ್ ಸದಸ್ಯ ಡಾ.ಕೆ.ಬಿ.ವೇದಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT