ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ ಜಗ ಅರಿವಿನ ಆಗರ

Last Updated 26 ಮೇ 2012, 19:30 IST
ಅಕ್ಷರ ಗಾತ್ರ

1) ಸುಂದರ ಚಿಟ್ಟೆ ಪ್ರಭೇದವೊಂದು ಚಿತ್ರ - 1 ರಲ್ಲಿದೆ. ಚಿಟ್ಟೆ ಒಂದು ಕೀಟ ಹೌದಲ್ಲ? ಈ ಕೆಳಗೆ ಹೆಸರಿಸಿರುವ ಕೀಟಗಳಲ್ಲಿ ಯಾವುದು ಚಿಟ್ಟೆಗಳ ಅತ್ಯಂತ ಹತ್ತಿರದ ಸಂಬಂಧಿ?
ಅ) ಮಿಡತೆ ಬ) ಪತಂಗ
ಕ) ದುಂಬಿ ಡ) ಜೇನ್ನೊಣ
 

2) `ಬೆಕ್ಕು~ಗಳ ವರ್ಗದ ಅತ್ಯಂತ ಪ್ರಸಿದ್ಧ ಸದಸ್ಯ `ಹುಲಿ~ ಚಿತ್ರ - 2 ರಲ್ಲಿದೆ. ಹುಲಿಗಳನ್ನು ಕುರಿತ ಈ ಹೇಳಿಕೆಗಳಲ್ಲಿ ಯಾವುದು ಸರಿಯಲ್ಲ?
ಅ) ಬೆಕ್ಕುಗಳಲ್ಲೆಲ್ಲ ಹುಲಿಯದೇ ಅತ್ಯಂತ ಹೆಚ್ಚಿನ ಗಾತ್ರ
ಬ) ಹುಲಿಗಳ ನೈಸರ್ಗಿಕ ನೆಲೆ ಏಷಿಯ ಖಂಡಕ್ಕಷ್ಟೇ ಸೀಮಿತ
ಕ) ಹುಲಿ ಸಂಘ ಜೀವಿ ಅಲ್ಲ
ಡ) ಹುಲಿಗೆ ವೃಕ್ಷಗಳನ್ನೇರುವ ಸಾಮರ್ಥ್ಯ ಇದೆ
 

3) ಮಂದ ನಡೆಗೆ ಸುಪ್ರಸಿದ್ಧವಾದ ಪ್ರಾಣಿ `ಬಸವನ ಹುಳು~ ಚಿತ್ರ - 3 ರಲ್ಲಿದೆ. ಬಸವನ ಹುಳು ಯಾವ ಜೀವಿವರ್ಗಕ್ಕೆ ಸೇರಿದೆ?

ಅ) ಮೃದ್ವಂಗಿ ಬ) ಕೀಟ
ಕ) ಸಂಧಿಪದಿ ಡ) ಉಭಯವಾಸಿ

4) ಬಲಿಷ್ಠ `ಬೇಟೆಗಾರ ಹಕ್ಕಿ~ಯೊಂದು ಚಿತ್ರ - 4 ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಬೇಟೆಗಾರ ಹಕ್ಕಿ ಅಲ್ಲ?
ಅ) ಆಸ್ಪ್ರೇ ಬ) ಗಿಡುಗ
ಕ) ಗೂಬೆ
 ಡ) ರಣಹದ್ದು

5) ಚಿತ್ರ - 5 ರಲ್ಲಿರುವ ಪ್ರಾಣಿ `ತಿಮಿಂಗಿಲ~ ಹೌದಲ್ಲ? ಸ್ತನಿವರ್ಗಕ್ಕೇ ಸೇರಿರುವ ತಿಮಿಂಗಿಲ ಸಾಗರ ವಾಸಿ ಪ್ರಾಣಿ - ಅತೀ ತಿಮಿಂಗಿಲಗಳ ಒಂದು ವೈಶಿಷ್ಟ್ಯ. ಹಾಗೆಯೇ ಇಲ್ಲಿ ಪಟ್ಟಿಮಾಡಿರುವ ಸ್ತನಿಗಳನ್ನೂ ಅವುಗಳ ವೈಶಿಷ್ಟ್ಯಗಳನ್ನೂ ಸರಿಹೊಂದಿಸಿ.
1) ಕಾಂಗರೂ           ಅ) ಭಾರೀ ಬೆಕ್ಕು
2) ಪ್ರೇರೀ ನಾಯಿ       ಬ) ವಾನರ
3) ಜಾಗ್ವಾರ್           ಕ) ಬಿಲವಾಸಿ
4) ಪ್ಲಾಟಿಪಸ್          ಡ) ಸಂಟಿಸ್ತನಿ
5) ಬೋನೋಬೋ     ಇ) ಮೊಟ್ಟೆ ಇಡುವ ಸ್ತನಿ
 

6) ಭವಿಷ್ಯದ ತನ್ನ ಮರಿಗಾಗಿ ಗೂಡಿಗೆ `ಜೀವಂತ ಆಹಾರ~ ವನ್ನು ತುಂಬುತ್ತಿರುವ `ಕಣಜ~ ಚಿತ್ರ - 6 ರಲ್ಲಿದೆ. ಕಣಜ/ ಕದಿರಿಬ್ಬೆಗಳಿಗಿರುವ ಕಾಲುಗಳ ಸಂಖ್ಯೆ ಎಷ್ಟು?

ಅ) ಸೊನ್ನೆ ಬ) ಎರಡು
ಕ) ನಾಲ್ಕು       ಡ) ಆರು   ಇ) ಎಂಟು

7) ಏಷಿಯ ಖಂಡದ ಬೃಹತ್ ಕೊಕ್ಕಿನ ಪ್ರಸಿದ್ಧ ಪಕ್ಷಿ `ಹಾರ್ನ್‌ಬಿಲ್~ ಚಿತ್ರ - 7 ರಲ್ಲಿದೆ. ಹೀಗೆಯೇ ಬಹುದೊಡ್ಡ ಕೊಕ್ಕಿನ ಮತ್ತೊಂದು ಹಕ್ಕಿ `ಟೌಕಾನ್~ ಯಾವ ಖಂಡದಲ್ಲಿದೆ?
ಅ) ಆಸ್ಟ್ರೇಲಿಯಾ ಬ) ದಕ್ಷಿಣ ಅಮೆರಿಕ
ಕ) ಆಫ್ರಿಕ ಡ) ಯೂರೋಪ್

8) ವಿಶಿಷ್ಟ ಚರ್ಮದ ಗಡಸು ಕವಚ ಪಡೆದ ಪ್ರಸಿದ್ಧ ಪ್ರಾಣಿಯೊಂದು ಚಿತ್ರ - 8 ರಲ್ಲಿದೆ. ಈ ಪ್ರಾಣಿಯ ಹೆಸರೇನು?

ಅ) ಪ್ಯಾಂಗೋಲಿನ್ ಬ) ಮುಳ್ಳುಹಂದಿ
ಕ) ಥಾರ್ನೀ ಡೆವಿಲ್ ಡ) ಮುಂಗುಸಿ

9) ನಮ್ಮ ದೇಶದಲ್ಲೂ ಕಾಣಸಿಗುವ `ವಾನರ~ ಚಿತ್ರ - 9 ರಲ್ಲಿದೆ. ಈ ವಾನರ ಯಾವುದು ಗೊತ್ತೇ?

ಅ) ಗೊರಿಲ್ಲ ಬ) ಗಿಬ್ಬನ್
ಕ) ಒರಾಂಗೊಟಾನ್ ಡ) ಚಿಂಪಾಂಜಿ

10) ಚಿತ್ರ - 10 ರಲ್ಲಿರುವ ಕಣ್ಣನ್ನು ಗಮನಿಸಿ. ಇದು ಯಾವ ಪ್ರಾಣಿಯ ಕಣ್ಣು ಗುರುತಿಸಬಲ್ಲಿರಾ?

ಅ) ಆಮೆ ಬ) ಮೊಸಳೆ
ಕ) ಓತಿ ಡ) ಊಸರವಳ್ಳಿ

11. ಪ್ರಸಿದ್ಧ ಕಡಲಾಮೆ `ಆಲಿವ್ ರಿಡ್ಲೀ~ ಚಿತ್ರ - 11 ರಲ್ಲಿದೆ. ಪ್ರತಿ ವರ್ಷ ಕಡಲ ತೀರದ ಮರಳಲ್ಲಿ ಮೊಟ್ಟೆ ಇಡಲು ಈ ಆಮೆಗಳು ಹಿಂಡು ಹಿಂಡಾಗಿ ನಮ್ಮ ದೇಶದ ಒಂದು ರಾಜ್ಯದ ಕಡಲಂಚಿಗೆ ಬರುತ್ತವೆ. ಆ ರಾಜ್ಯ ಯಾವುದು?

ಅ) ಆಂಧ್ರಪ್ರದೇಶ ಬ) ಕರ್ನಾಟಕ
ಕ) ಒಡಿಶಾ ಡ) ತಮಿಳುನಾಡು

12) ವಿಚಿತ್ರ ರೂಪದ ಮತ್ಸ್ಯವೊಂದು ಚಿತ್ರ - 12 ರಲ್ಲಿದೆ. ಧರೆಯ ಎಲ್ಲ ಜಲಾವಾರಗಳಲ್ಲೂ ಇರುವ ಮತ್ಸ್ಯ ಪ್ರಭೇದಗಳ ಒಟ್ಟು ಸಂಖ್ಯೆ ಇವುಗಳಲ್ಲಿ ಯಾವುದಕ್ಕೆ ಸಮೀಪ?

ಅ) 12000 ಬ) 17000
ಕ)  24000 ಡ)  30000
ಇ)  42000

ಉತ್ತರಗಳು
1) ಬ - ಪತಂಗ

2) ಡ - ಹುಲಿಗೆ ವೃಕ್ಷಗಳನ್ನೇರುವ ಸಾಮರ್ಥ್ಯ ಇದೆ

3) ಅ - ಮೃದ್ವಂಗಿ

4) ಡ - ರಣಹದ್ದು

5) 1- ಡ; 2 - ಕ; 3 - ಅ; 4 - ಇ; 5 - ಬ

6) ಡ - ಆರು

7) ಬ - ದಕ್ಷಿಣ ಅಮೆರಿಕ

8) ಅ - ಪ್ಯಾಂಗೋಲಿನ್

9) ಬ - ಗಿಬ್ಬನ್

10) ಡ - ಊಸರವಳ್ಳಿ

11) ಕ - ಒಡಿಶಾ

12) ಡ - 30,000 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT