ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ

ರಾಷ್ಟ್ರೀಯ ಹೆದ್ದಾರಿ–17 ವಿಸ್ತರಣೆ ಯೋಜನೆ
Last Updated 5 ಡಿಸೆಂಬರ್ 2013, 8:58 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಜನಶಕ್ತಿ ವೇದಿಕೆ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ರಾಷ್ಟ್ರೀಯ ಹೆದ್ದಾರಿ 17 ವಿಸ್ತರಣೆ ಯೋಜನೆಯಿಂದ ಹೆದ್ದಾರಿಗೆ ಒಳಪಡುವ ಪ್ರದೇಶವನ್ನು ಗುರುತಿಸಿ ಪ್ರಾತ್ಯಕ್ಷಿಕೆ ಮೂಲಕ ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೈಯಲ್ಲಿ ಅಳತೆ ಪಟ್ಟಿ ಹಿಡಿದ ಕಾರ್ಯಕರ್ತರು ಹೆದ್ದಾರಿಯ ಆಸು ಪಾಸು 45 ಮೀಟರ್‌ ನಿಂದ 60 ಮೀಟರ್‌ವರೆಗೆ ಅಳತೆ ಮಾಡಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಮಯೂರ ವರ್ಮ ವೇದಿಕೆವರೆಗೆ ಹೆದ್ದಾರಿ ವಿಸ್ತರಣೆಗೆ ಒಳಪಡಬಹು ದಾದ ಸ್ಥಳಗಳನ್ನು ಗುರುತು ಹಾಕಿದರು.
‘ಯೋಜನೆಯಂತೆ ಹೆದ್ದಾರಿಯನ್ನು 45 ಮೀಟರ್‌ ಅಥವಾ 60 ಮೀಟರ್‌ ವಿಸ್ತರಣೆ ಮಾಡಿದರೆ, ರವೀಂದ್ರನಾಥ ಟ್ಯಾಗೋರ್‌ ಕಡಲ ತೀರದ ಅರ್ಧದಷ್ಟು ಪ್ರದೇಶ ನಾಶವಾಗುತ್ತದೆ. ಇದನ್ನು ಜನರಿಗೆ ತಿಳಿಸಲು ಈ ಪ್ರಾತ್ಯಕ್ಷೆಯನ್ನು ಮಾಡಿದ್ದೇವೆ’ ಎಂದು ಮಾಧವ ನಾಯಕ ತಿಳಿಸಿದರು.

ಹೆದ್ದಾರಿಯನ್ನು 45 ಮೀಟರ್‌ ವಿಸ್ತರಣೆ ಮಾಡಿದರೆ ಜಿಲ್ಲಾಧಿಕಾರಿ ಕಚೇರಿಯ ಆವರಣ ಹಾಗೂ ಮಯೂರವರ್ಮ ವೇದಿಕೆಯ ಅಂಚು ಹೆದ್ದಾರಿಗೆ ಸೇರುತ್ತದೆ. 60 ಮೀಟರ್‌ ವಿಸ್ತರಣೆ ಮಾಡಿದರೆ, ಜಿಲ್ಲಾಧಿಕಾರಿ ಕಚೇರಿಯ ಆವರಣದ ಜೊತೆಗೆ ಟ್ಯಾಗೋರ್‌ ಕಡಲತೀರದ ಅರ್ಧ ಭಾಗ ಹಾಗೂ ಮಯೂರ ವರ್ಮ ವೇದಿಕೆ ಸಂಪೂರ್ಣ ಹೆದ್ದಾರಿ ಪಾಲಾಗುತ್ತದೆ ಎಂದು ಅವರು ಹೇಳಿದರು.
ವಕೀಲ ಕೆ.ಆರ್. ದೇಸಾಯಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT