ನವದೆಹಲಿ(ಪಿಟಿಐ): ಕೃಷಿ, ಶಿಕ್ಷಣ, ಸಮಾಜ ಕಲ್ಯಾಣ, ಇಂಧನ, ಇ–ಆಡ ಳಿತ ಸೇರಿದಂತೆ ಹಲವು ವಿಷಯಗಳ ಮಾಹಿತಿ ಒದಗಿಸುವ ಆನ್ಲೈನ್ ತಾಣ ‘ವಿಕಾಸ್ಪೀಡಿಯಕ್ಕೆ’ (http://vikaspedia.gov.in) ಮಂಗಳವಾರ ಇಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಚಾಲನೆ ನೀಡಿದರು.
ಸದ್ಯ ಈ ವೆಬ್ ತಾಣ ಇಂಗ್ಲಿಷ್, ಹಿಂದಿ, ಮರಾಠಿ, ತೆಲುಗು, ಅಸ್ಸಾಮಿ ಭಾಷೆಗಳಲ್ಲಿದೆ. ಮುಂಬರುವ ದಿನಗಳಲ್ಲಿ 22 ಭಾರತೀಯ ಭಾಷೆಗ ಳಿಗೂ ವಿಸ್ತರಿಸಲಾಗುವುದು ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರ ಜ್ಞಾನ ಇಲಾಖೆ ಕಾರ್ಯದರ್ಶಿ ಜೆ.ಸತ್ಯ ನಾರಾಯಣ ತಿಳಿಸಿದರು.