ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಧಿಕಾರ ವ್ಯಾಪ್ತಿಗೆ ಮುಗ್ಧ ಸಂಗಯ್ಯ ಗವಿ ಸೇರ್ಪಡೆ ಉ್ದ್ದದೇಶ

Last Updated 19 ಅಕ್ಟೋಬರ್ 2012, 5:20 IST
ಅಕ್ಷರ ಗಾತ್ರ

ಹುಮನಾಬಾದ್ : ಮುಗ್ಧ ಸಂಗಯ್ಯ ಶರಣರ ಗವಿ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಸೇರ್ಪಡೆ ಮಾಡುವುದೇ ಸಮಿತಿ ಮೂಲ ಉದ್ದೇಶ ಎಂದು ಮುಗ್ಧ ಸಂಗಯ್ಯ ಗವಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ ಪಸಾರಗಿ ತಿಳಿಸಿದರು.

ಅ.21ಕ್ಕೆ ಉದ್ಘಾಟಿಸಲು ನಿರ್ಧರಿಸಲಾದ ಮುಗ್ಧಸಂಗಯ್ಯ ಗೃಂಥಾಲಯದ ಕಾರ್ಯಕ್ರಮ ಪ್ರಯುಕ್ತ ಗುರುವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಬಸವಾದಿಶರಣರ ಸಮಕಾಲಿಕನರ ಬಹುತೇಕ ಶಿಚಶರಣ ಗವಿಗಳು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಸೇರ್ಪಡೆ ಆಗಿರುವುದು ನಿಜಕ್ಕೂ ಸಂತಸದ ಸಂಗತಿ. ಆದರೇ ಗಡವಂತಿ ಗ್ರಾಮದಲ್ಲಿ ಇರುವ ಶಿವಶರಣ ಮುಗ್ಧ ಸಂಗಯ್ಯನವರ ಗವಿ ಅಭಿವೃದ್ಧಿ ಸಂಬಂಧಿಸಿದಂತೆ ವಿವಿಧ ಕಾರಣ ನೀಡಿ ಪ್ರಾಧಿಕಾರ ನಿರ್ಲಕ್ಷ್ಯ ಧೋರಣೆ  ತಾಳುತ್ತಿರುವುದು ತರವಲ್ಲ.
 
ಆದರೇ ಇತ್ತೀಚೆಗೆ ಇ್ಲ್ಲಲಿನ ಹಿರಿಯ ಸಾಹಿತಿ ಬಿ.ಎಸ್.ಖೂಬಾ ಅವರಿಗೆ ವಿಜಾಪೂರ ಜಿಲ್ಲೆ ಉಪ್ಪಲದಿನ್ನಿಯಲ್ಲಿ ಲಭ್ಯವಾದ ಗೃಂಥದಲ್ಲಿ ಆ ಕುರಿತು ಸಾಕ್ಷಿಗಳು ಲಭ್ಯವಾಗಿದ್ದಾಗಿ ತಿಳಿಸಿದ್ದಾರೆ.

ಪ್ರಧಿಕಾರ ಆ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ, ಗವಿ ಅಭಿವೃದ್ಧಿಗೆ ಮುಂದಾಗಬೇಕು ಎನ್ನುವುದೇ ತಮ್ಮ ಮೂಲ   ಉದ್ದೇಶ ಎಂದು ಅವರು ತಿಳಿಸಿದರು. ಸಮಿತಿ ನೇತೃತ್ವದಲ್ಲಿ ಪ್ರತಿ ತಿಂಗಳ 3ನೆಯ ಭಾನುವಾರ ಶರಣಸಂಗಮ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಹೊಸದಾಗಿ ಅಸ್ತಿತ್ವಕ್ಕೆ ತರಲಾದ ಸಮಿತಿ ನೇತೃತ್ವದಲ್ಲಿ ಅಕ್ಟೋಬರ್ 21ಕ್ಕೆ ಮುಗ್ಧಸಂಗಯ್ಯ ಶರಣರ ಹೆಸರಲ್ಲಿ ಆರಂಭಗೊಳ್ಳಲಿರುವ ಗೃಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ಪೂಜ್ಯರು, ಚುನಾಯಿತ ಪ್ರತಿನಿಧಿಗಳು, ಸಾಹಿತಿಗಳು, ವಿದಾಂಸರು ಭಾಗಹಿಸಲಿದ್ದಾರೆ ಎಂದು ಸಮಿತಿ ಪದಾಧಿಕಾರಿಗಳು ವಿವರಿಸಿದರು.

ಸಮಿತಿ ಗೌರವಾಧ್ಯಕ್ಷ ಕರಬಸಯ್ಯ ಮಠಪತಿ, ಅಧ್ಯಕ್ಷ ಶ್ರೀಧರ ಪಸಾರಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಬುಳ್ಳಾ, ಕಾರ್ಯದರ್ಶಿ ಶಶಿಕಾಂತ ಗಂಗಸಿರಿ, ಸಹ ಕಾರ್ಯದರ್ಶಿ ಸಂತೋಷ ಎಸ್.ಭೂಶೆಟ್ಟಿ, ಜಂಟಿ ಕಾರ್ಯದರ್ಶಿ ವಿನೋದಕುಮಾರ ಹೆಮ್ಮಣ್ಣಿ, ಕೋಶಾ ಧ್ಯಕ್ಷ ಮಲ್ಲಿಕಾರ್ಜುನ, ಗ್ರಾಮದ ಪ್ರಮುಖ ಓಂಕಾರ ತುಂಬಾ, ಪ್ರವೀಣ ಕುಮಾರ ಕಲ್ಬುರ್ಗಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT