ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕ ದುಡಿಮೆ ಅಭಿವೃದ್ಧಿಗೆ ಪೂರಕ

Last Updated 16 ಅಕ್ಟೋಬರ್ 2011, 8:55 IST
ಅಕ್ಷರ ಗಾತ್ರ

ಹಿರಿಯೂರು: ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಸಹಕಾರ ತತ್ವದ ಅಡಿಯಲ್ಲಿ ಶ್ರಮಿಸಿದರೆ ಸಹಕಾರಿ ಸಂಘಗಳು ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಜಿಲ್ಲಾ ಸಹಕಾರ ಕೇಂದ್ರಬ್ಯಾಂಕಿನ ನೂತನ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ತಿಳಿಸಿದರು.

ನಗರದ ವಾಸವಿ ಕಲ್ಯಾಣ ಮಂದಿರದಲ್ಲಿ ಶನಿವಾರ ತಾಲ್ಲೂಕು ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಆಡಳಿತ ನಡೆಸುವವರು ಹಾಗೂ ಗ್ರಾಹಕರ ನಡುವೆ ನಂಬಿಕೆ ಬಹಳ ಮುಖ್ಯ. ಪರಸ್ಪರ ಸಹಕಾರ ತತ್ವದ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ಅರ್ಬನ್ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಆರ್. ಮಹಮದ್‌ರಫಿ, ಆಲೂರು ಹನುಮಂತರಾಯಪ್ಪ ಮಾತನಾಡಿದರು. ಡಾ.ಎಂ.ಎನ್. ಶ್ರೀಪತಿ, ಲಕ್ಷ್ಮೀ ಆರ್. ಶೆಟ್ಟಿ, ಎಚ್.ಎಸ್. ಸಿದ್ದನಾಯಕ, ಸಣ್ಣ ತಿಮ್ಮಯ್ಯ, ಬಿ.ಎಸ್. ರಘುನಾಥ್, ವಸಂತಕುಮಾರ್, ವೈ.ಎಸ್. ಅಶ್ವತ್ಥಕುಮಾರ್, ಬಿ. ಸುಧಾಕರ್, ಸಿ. ಸಿದ್ದರಾಮಣ್ಣ, ದೊರೆಸ್ವಾಮಿಖಂಡರ್, ಕೆ.ಆರ್. ವೆಂಕಟೇಶ್, ಆರ್. ಪ್ರಕಾಶ್‌ಕುಮಾರ್, ಸಂ. ರಂಗಯ್ಯ, ಶಿವಣ್ಣ, ಕಾಂತರಾಜ್, ಪಾಂಡುರಂಗಪ್ಪ, ಕೃಷ್ಣಯ್ಯ, ಜಯರಾಮಪ್ಪ, ಜಗನ್ನಾಥ್, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.ಮಹಮದ್‌ರಫಿ ಸ್ವಾಗತಿಸಿದರು. ಸಿದ್ದರಾಮಣ್ಣ ವಂದಿಸಿದರು. ಮಹಾಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.

ಹಲ್ಲೆ ಖಂಡಿಸಿ ವಕೀಲರ ಸಂಘದಿಂದ ಮನವಿ

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಖಂಡಿಸಿ ಶುಕ್ರವಾರ ವಕೀಲರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ಅಧ್ಯಕ್ಷ ಟಿ.ರಂಗನಾಥ್ ಮಾತನಾಡಿ ಕಾಶ್ಮೀರ ರಾಜ್ಯದ ವಿಷಯ ಕುರಿತ ಪ್ರಶಾಂತ್ ಭೂಷಣ್ ಅವರ ಹೇಳಿಕೆ ಯಾರಿಗಾದರೂ ನೋವು ಉಂಟು ಮಾಡುವಂತಿದ್ದರೆ, ಅದನ್ನು ವಿರೋಧಿಸಲು ಪ್ರಜಾಪ್ರಭುತ್ವದಲ್ಲಿ ಹಲವು ಮಾರ್ಗಗಳಿದ್ದವು. ಆದರೆ, ದೈಹಿಕವಾಗಿ ಹಿಂಸೆ ಮಾಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿರುವುದು ಖಂಡನೀಯ ಎಂದರು.

ಕಾರ್ಯದರ್ಶಿ ಎ. ಮಹಾಲಿಂಗಪ್ಪ, ಎಂ.ಆರ್. ಪ್ರಭಾಕರ್, ಎಲ್.ನಾಗರಾಜ್, ಬಿ.ಜಿ. ಶ್ರೀನಿವಾಸ್, ಬಿ. ಕಾಂತರಾಜ್, ಎಚ್. ಶಿವಕುಮಾರ್, ಜಿ.ಪ್ರಭುಶಂಕರ್, ಟಿ. ಸಂಜಯ್, ಬಿ. ತಿರುಮಲೇಶ್, ಜಿ. ಗುಂಡೇಗೌಡ, ಎಸ್. ಜಯಣ್ಣ, ಎಸ್.ಟಿ. ಚಿದಾನಂದಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT