ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮುಖ್ಯತೆ ಪಡೆದ ಉತ್ಸವ

Last Updated 6 ಸೆಪ್ಟೆಂಬರ್ 2011, 6:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ನಗರದ ಸಾರ್ವಜನಿಕ ಗಣೇಶೋತ್ಸವಕ್ಕೆ ಬಹಳ ಪ್ರಾಮುಖ್ಯತೆ ಸಿಕ್ಕಿದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸಂತಸ ವ್ಯಕ್ತಪಡಿಸಿದರು.

ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳವು ನಗರದಲ್ಲಿ ಸೋಮವಾರ ಏರ್ಪಡಿಸಿದ ಬಹುಮಾನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂದಲ್ಲಿ  ಅವರು ಮಾತನಾಡಿದರು.
ಗಣೇಶ ಮೂರ್ತಿಗಳ ವಿಸರ್ಜನೆಯ ದಿನ ಶಾಂತಿ ಕಾಪಾಡಿ ಜೊತೆಗೆ ಬೇಗನೇ ವಿಸರ್ಜನೆ ಕೈಗೊಳ್ಳಿ~ ಎಂದು ಅವರು ಸಲಹೆ ನೀಡಿದರು.

ಇದಕ್ಕೂ ಮೊದಲು ಕವಿ ಜಗದೀಶ ಮಂಗಳೂರಮಠ, ಉದ್ದಿಮೆದಾರ ಜಿತೇಂದ್ರ ಮಜೇಥಿಯಾ, ವೈದ್ಯರಾದ ಡಾ. ಸುರೇಶ ಮೆಣಸಗಿ, ಸಮಾಜ ಸೇವಕ ಬಿ.ಆರ್. ಅಗ್ರವಾಲ್, ಎಸ್‌ಎಸ್‌ಕೆ ಸಮಾಜದ ಧರ್ಮದರ್ಶಿ ಜೀವನ್ ಧೋಂಗಡಿ, ಹಿರಿಯ ಪತ್ರಕರ್ತ ಹನುಮಂತ ಹೂಗಾರ, ರಕ್ತದಾನಿ ಈರಣ್ಣ ಬಿ. ಉಪ್ಪಿನ, ಪರಿಸರವಾದಿ ನಾರಾಯಣ ಝಂಡೆ ಹಾಗೂ ಭಾವೈಕ್ಯ ಸೇವೆ ಸಲ್ಲಿಸಿದ ನವೀದ್ ಮುಲ್ಲಾ ಅವರನ್ನು ಸನ್ಮಾನಿಸಲಾಯಿತು. ನಂತರ ಬಹುಮಾನ ಪಡೆದ ವಿವಿಧ ಮಹಾಮಂಡಳಗಳಿಗೆ ಬಹುಮಾನ ವಿತರಿಸಲಾಯಿತು. 

ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ ಕೆ.ಡಿ. ಕೋಟೆಕರ ಪಾಲ್ಗೊಂಡಿದ್ದರು.

ಮಹಾಮಂಡಳದ ಪದಾಧಿಕಾರಿಗಳಾದ ಶ್ರೀಶೈಲಪ್ಪ ಶೆಟ್ಟರ, ಶ್ಯಾಮಸುಂದರ ಹಬೀಬ, ಪಿ.ಎಂ. ಹೂಲಿ ಹಾಗೂ ಅಲ್ತಾಫ ಕಿತ್ತೂರು ಹಾಜರಿದ್ದರು.ಮದನ ದೇಸಾಯಿ ಸ್ವಾಗತಿಸಿದರು. ಅಮರೇಶ ಹಿಪ್ಪರಗಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT