ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ಹುಟ್ಟುವುದು ಹೃದಯದಿಂದಲ್ಲ...

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಪ್ರೀತಿ ಪ್ರಣಯದ ಭಾವನೆಗಳು ಹೃದಯದಿಂದಲ್ಲ, ಮೆದುಳಿನಿಂದ ಒಡಮೂಡುತ್ತವೆ ಎಂಬುದನ್ನು ನಾವೀಗ ನಂಬಲೇಬೇಕು! ಪ್ರೀತಿ ಮೂಡುವಲ್ಲಿ ಹೃದಯಕ್ಕಿಂತ ಮೆದುಳು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಸಂಗತಿಯನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈಗ ಕಂಡುಕೊಂಡಿದೆ.

ಆಳವಾದ ಪ್ರೀತಿಗೆ ಒಳಗಾದ ಹತ್ತು ಮಹಿಳೆಯರು ಮತ್ತು ಏಳು ಪುರುಷರ ಮೆದುಳಿನ ಅಧ್ಯಯನದಿಂದ ಈ ವಿಷಯ ತಿಳಿದುಬಂದಿದೆ.

ಯಾರಿಗಾದರೂ ಪ್ರಶಸ್ತಿ ಅಥವಾ ಇನ್ನೇನೋ ಖುಷಿಯಾದುದು ಸಿಕ್ಕಾಗ ಮೆದುಳಿನಲ್ಲಿ ಆಗುವ ಕ್ರಿಯೆಯ ರೀತಿಯಲ್ಲೇ, ಈ ಎಲ್ಲರೂ ಅವರು ಪ್ರೀತಿಸುತ್ತಿರುವ ವ್ಯಕ್ತಿಗಳ ಭಾವಚಿತ್ರ ನೋಡಿದ ಕೂಡಲೇ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದು ತಂಡ  ಹೇಳಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT