ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಭಾಷೆ ಸ್ವಾರ್ಥವೇಕೆ?

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ನನ್ನ ಮಗ ಮತ್ತವನ ಫಿಯಾನ್ಸಿ ಬ್ರೇಕ್ಫಾಸ್ಟ್‌ಗೆ ಮ್ಯೋಕ್‌ಡೊನಾಲ್ಡ್‌ಗೆ ಹೋಗಿದ್ದಾರೆ~
`ನಮ್ಮ ಬೀಗರು ಬಹಳ ಮಾಡರ್ನ್. ನನ್ನ ಮಗಳ ಎಂಗೇಜ್ಮೆಂಟ್ ಆದಮೆಲೆ ನಮ್ಮೆಲ್ಲರನ್ನೂ `ಥೀಮ್ ಪಾರ್ಕ್~ಗೆ ಕರೆದುಕೊಂಡು ಹೋಗುತ್ತಾರಂತೆ.~
`ನನ್ನ ಅಣ್ಣನ ಮಗ ಮತ್ತು ಅವನ ಗರ್ಲ್‌ಫ್ರೆಂಡ್ ಡೇಟಿಂಗ್‌ಗೆ ಹೋಗಿದ್ದಾರೆ~

* * *
ಈ ಮಾತನ್ನು ಕೇಳಿದರೆ ನಿಮಗೆ ಬಹುಶಃ ಈ ಸಂಭಾಷಣೆಗಳು ಅಮೆರಿಕೆಯಲ್ಲೋ, ಯೂರೋಪಿನ ದೇಶಗಳಲ್ಲೋ ನಡೆಯುತ್ತಿರುವ ಕಥೆಗಳೆಸಿದರೆ ನೀವು ತಪ್ಪು ಯೋಚಿಸುತ್ತಿದ್ದೀರಿ. ಇದು ನಡೆಯುತ್ತಿರುವುದು ಅಪ್ಪಟ ಭಾರತೀಯ ಪಟ್ಟಣಗಳಲ್ಲಿ! ಈ ಕಥೆಗಳ ನಾಯಕ/ ನಾಯಕಿಯರು ನಮ್ಮ-ನಿಮ್ಮ ಮನೆಯವರೂ ಇರಬಹುದು.
 
ಇಲ್ಲ, ನೆರೆಯವರೂ ಇರಬಹುದು. ಜಾಗತೀಕರಣವೆಂಬುದು ಇಂದು ಎಲ್ಲೆಡೆಯಲ್ಲೂ, ಎಲ್ಲ ಕ್ಷೇತ್ರಗಳನ್ನೂ ಆವರಿಸುತ್ತಿರುವುದು ಕಣ್ಣುಗಳಿಗೆ ರಾಚುವಂತೆ ಕಾಣುತ್ತಿರುವ ಸತ್ಯ.

 `ಸೋಷಿಯಲ್ ನೆಟ್‌ವರ್ಕಿಂಗ್~ ಎಂಬ ಸಂಪರ್ಕ ವ್ಯವಸ್ಥೆ ಭಾರತೀಯ ಸಂಸ್ಕೃತಿಯಲ್ಲಿ ಇನ್ನೂ ದಾಳಿಯಿಡದ ಸಮಯವಾಗಿದ್ದ `ಆ ಕಾಲ~ದಲ್ಲೂ, ಪ್ರೇಮಿಗಳು, ನವವಿವಾಹಿತರು, ಒಟ್ಟಿನಲ್ಲಿ `ಒಲವೇ ಜೀವನ~ವೆಂಬ ಮಂತ್ರವನ್ನು ಜಪಿಸುತ್ತಿದ್ದ ತರುಣ/ಣಿಯರು ಇರುತ್ತಿದ್ದರು.
ಮದುವೆಯ ನಿಶ್ಚಿತಾರ್ಥ ಮುಗಿಸಿಕೊಂಡು ವಿವಾಹದ ದಿನಗಳನ್ನು ಕಾತುರದಿಂದ ಎದುರುನೋಡುತ್ತಿದ್ದ `ಲವರ್ಸ್‌~ಗಳ ನಡುವೆ ಇದ್ದದ್ದು ಮೌನವಾದ ಪತ್ರವ್ಯವಹಾರ. ಈಗ ಪಾಶ್ಚಿಮಾತ್ಯ ಸಂಗೀತದ `ಕ್ರೇಜ~ ಇರುವ ಹಾಗೆಯೇ ಅಂದು ನಮ್ಮ ಅಪ್ಪಟ ಕನ್ನಡ ನಾಡಿನ ಶ್ರೇಷ್ಠ ಕವಿಗಳಾಗಿದ್ದ ಕೆ. ಎಸ್. ನರಸಿಂಹಸ್ವಾಮಿಯವರ ರಮ್ಯ(ರೊಮ್ಯೋಂಟಿಕ್) ಕವಿತೆಗಳನ್ನು ಪತ್ರಗಳಲ್ಲಿ ತುಂಬಿಸಿ ಕಳುಹಿಸುತ್ತಿದ್ದ ಪ್ರೇಮಿಗಳಿರುತ್ತಿದ್ದರು.
 
ದೂರವಾಣಿಯು ಮೆಲ್ಲಮೆಲ್ಲನೆ ಮನೆಮನೆಗಳಲ್ಲಿ ಅವತರಿಸಿದ ದಿನಗಳಲ್ಲಿ `ಲ್ಯಾಂಡ್‌ಲೈನ್ ಫೋನ್~ಗಳು ಪ್ರೀತಿಸುವ ಹೃದಯಗಳ ಮಾತುಗಳನ್ನಲ್ಲದೆ ಅದರ ಬಡಿತವನ್ನೂ ಒಬ್ಬರಿಗೊಬ್ಬರು ಕೇಳುವಂತೆ ಕಮ್ಯುನಿಕೇಟ್ ಮಾಡುತ್ತಿತ್ತು! ಅದೇ ಸಮಯದಲ್ಲಿ ಹೃದಯಗಳೆರಡರ ಮಧ್ಯೆ ಹಾಡುತ್ತಿದ್ದದ್ದು ಭಾರತೀಯ ಸಂಗೀತದೊಂದಿಗೆ ಪಾಶ್ಚಿಮಾತ್ಯದ್ದೂ ಕೂಡಾ!

ಉದಾಹರಣೆಗೆ, ಈಗಿನಂತೆ `ಕಾಲರ್ಸ್‌ ಐಡಿ, ಬೇಕಾದ ರಿಂಗ್‌ಟೋನ್~ಗಳಿಲ್ಲದೆ, `ನಾಸ್ಟಾಲ್ಜಿಯಾ~ದ ರಾಗದಲ್ಲಿ ಗುಣುಗುಣುಗುಡುತ್ತಿದ್ದ ದೂರವಾಣಿ ಕರೆಗಳಿಗೆ ಮೊದಲು ಉತ್ತರಿಸುತ್ತಿದ್ದದ್ದು ಕುಟುಂಬದ ಹಿರಿಯರು. ನಂತರ ಮದುವೆಯ ಮಕ್ಕಳು( ಹಿರಿಯರ ಅನುಮತಿಯೊಡನೆ) ಮಾತನಾಡುತ್ತಿದ್ದರು.
 
ಸ್ಥಿರವಾದ ಆ ಫೋನ್‌ಗಳು ಪ್ರೇಮಿಗಳ ಏಕಾಂತವನ್ನು ಮೊಟಕುಗೊಳಿಸಿದರೂ ಅಥವಾ ಕೆಲವೇ ನಿಮಿಷಗಳವರೆಗೆ ಸಂಭಾಷಣೆಯನ್ನು ನಡೆಸಿದ್ದರೂ ಅವರಲ್ಲಿ ಆಗುತ್ತಿದ್ದ ತೃಪ್ತಿಯ ಆಳ- ಹರವುಗಳು ಅಳೆಯಲಾರದಂತಹವಾಗಿದ್ದವು.

ಸ್ವಲ್ಪ `ಮಾಡರ್ನ್ ಥಿಂಕಿಂಗ್~ ಇರುವ ಕುಟುಂಬದವರು ತಮ್ಮ ಮನೆಗಳಲ್ಲಿ ಮದುವೆಯನ್ನು ಎದುರುನೋಡುತ್ತಿರುವ ಯುವಕ/ತಿಯರಿದ್ದಲ್ಲಿ ಅವರ ಭೇಟಿಯನ್ನು ಒಂದು `ಫ್ಯಾಮಿಲಿ ಗೆಟ್‌ಟುಗೆದರ್~ ನೆಪದಲ್ಲಿ ಹಮ್ಮಿಕೊಂಡು `ನೀವೆಂದರೆ ನಾವೂ ಕೂಡಾ~ ಎಂದು ಅರಿವಾಗುವಂತೆ ಪ್ರೀತಿಯಿಂದ ನಡೆಸುತ್ತಿದ್ದರು.
 
ಪ್ರೇಮಿಗಳಿಗೆ ಅದೃಷ್ಟವಿದ್ದರೆ, ಹಿರಿಯರ ಅನುಮತಿಯೊಡನೆ ಏಕಾಂತದಲ್ಲಿ ಕೆಲವು ರಸನಿಮಿಷಗಳನ್ನು ಕಳೆಯುವ ಅವಕಾಶಗಳನ್ನು ಪಡೆಯುತ್ತಿದ್ದರು. ಒಟ್ಟಿನಲ್ಲಿ ಪ್ರೇಮಿಗಳ ಪ್ರೇಮಾಂಕುರವು ಹಿರಿಯರ ಆಶೀರ್ವಾದ, ಹಾರೈಕೆ ಹಾಗೂ ಕಟ್ಟೆಚ್ಚರಗಳಲ್ಲಿ ಆಗುತ್ತಿತ್ತು.

ಸಾಮಾನ್ಯವಾಗಿ ದಿನನಿತ್ಯದ ಎಲ್ಲಾ ಕಾರ್ಯಕಲಾಪಗಳಲ್ಲೂ ~ನಮ್ಮನ್ನು ನೀವು ಅರ್ಥಮಾಡಿಕೊಳ್ಳುತ್ತಿಲ್ಲ~ ಎಂದು ತಮ್ಮ ಹಿರಿಯರೊಂದಿಗೆ ಎದಿರಾಡುವ ಇಂದಿನ ಯುವಜನತೆಗೆ ಈ ಮೇಲಿನ ರೀತಿಯ ರಸಾನುಭವಗಳುಂಟಾಗುತ್ತದೆ ಎಂದು ನಿಮಗನ್ನಿಸುತ್ತದೆಯೇ?

ಹಾಗಾಗುತ್ತಿದ್ದರೆ ಅದನ್ನು ಪೋಷಕರೂ ಅನುಭವಿಸಲು ಅವಕಾಶ ಕೊಡುತ್ತಿದ್ದಾರೆ ಎನಿಸುತ್ತಿದೆಯೇ? ಪ್ರೇಮ, ಪ್ರೀತಿಗಳೆಂಬ ಭಾವನೆಗಳು ಮನುಷ್ಯರ ಹುಟ್ಟಿನೊಂದಿಗೇ ಬಂದಿರುವಂತಹದ್ದು.

ಆದರೆ ಈ ಕೆಲವೊಂದು ವರುಷಗಳಿಂದ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವು ಅತಿಯಾಗುತ್ತಿರುವುದರಿಂದ ಪ್ರೀತಿಯ ಭಾಷಾಂತರವು ಭಾರತೀಯವಲ್ಲದ್ದಾಗಿದೆಯಷ್ಟೆ! ಭಾರತೀಯ ಸಮಾಜದಲ್ಲಿ ವಿವಾಹವೆಂಬುದು ಒಂದು ಸಂಸ್ಥೆಯಾಗಿರುವುದರಿಂದ ಕುಟುಂಬದವರ `ಪಾಲ್ಗೊಳ್ಳುವಿಕೆ~ ಸಹಜವಾದದ್ದೇ! ಹಿಂದಿನ ಕಾಲದಂತೆ ಕೂಡುಕುಟುಂಬದ ವ್ಯವಸ್ಥೆಯಲ್ಲಿದ್ದಾಗ ಆ ಕುಟುಂಬದ ಯುವಪೀಳಿಗೆಯ ಆಗು-ಹೋಗುಗಳಲ್ಲಿ ಇಡೀ ಕುಟುಂಬದ ಸದಸ್ಯರ ಪಾಲಿರುತ್ತಿತ್ತು.
 
ಆದರೆ ಇಂದು ವಿಭಜಿತ ಕುಟುಂಬದ ವ್ಯವಸ್ಥೆಯಿರುವುದಷ್ಟೇ ಅಲ್ಲ, ಮಕ್ಕಳ ವಿಷಯದಲ್ಲಿ ತಂದೆ-ತಾಯಿಯರ ಪಾಲ್ಗೊಳ್ಳುವಿಕೆಯೇ `ನ್ಯೂಸೆನ್ಸ್~ ಆಗುತ್ತಿದೆ. ತಮಗೆ ಸಂಬಂಧಪಟ್ಟ ಸಾಮಾನುಗಳಂತೆ (ಪರ್ಸನಲ್ ಫೋನ್/ ಕಂಪ್ಯೂಟರ್/ರೂಂ) ತಮ್ಮ ಜೀವನಗಳನ್ನೂ ಕೇವಲ `ಪರ್ಸನಲ್~ ಮಾಡಿಕೊಳ್ಳುತಿದೆ ಸಮಕಾಲೀನ ಯುವಜನತೆ!   

ಈ ಬೆಳವಣಿಗೆಗೆ ಕಾರಣರಾರು?  `ಜಾಗತೀಕರಣ~ದ ಪ್ರಭಾವಗಳಾದ `ಕೊಕಕಾಲೊನೈೇಷನ್~, `ಡಿಸ್ನಿಫಿಕೇಷನ್~, `ವಾಲ್‌ಮಾರ್ಟಿಜಂ~, `ಮ್ಯೋಕ್‌ಡೊನಾಡೈಜೇಷನ್~ (ಸಾಂಸ್ಕೃತಿಕ ವಸಾಹತೀಕರಣ) ಮುಂತಾದವು ಕಾರಣಗಳೆನ್ನಬಹುದು.

ಇವು ತಮ್ಮ ಪ್ರಭಾವವನ್ನು ಎಲ್ಲೋ ಬೀರುತ್ತಿವೆ ಎಂದೆನಿಸುವುದಿಲ್ಲವೆ? `ಲವ್ ಮ್ಯೋರೇಜ್~ ಅನ್ನು ಧಿಕ್ಕರಿಸುತ್ತಿದ್ದ ಕಾಲವೊಂದಿತ್ತು. ತಮ್ಮ ಮನೆಯ ಮಕ್ಕಳು ಆ ರೀತಿ ಮಾಡುತ್ತಾರೆಂದು ತಿಳಿದಾಗ ಎದೆಗುಂದಿದ ಕುಟುಂಬಗಳು ಎಷ್ಟೋ ಇದ್ದವು.
 

ಹೀಗಾದಾಗ ಸೂಕ್ಷ್ಮಮನಸ್ಸಿನ ಪೋಷಕರು ~ತಮ್ಮ ಪೋಷಣೆಯಲ್ಲೇನಾದರೂ ಕೊರತೆಯುಂಟಾಯಿತೇ~ ಎಂದು ಯೋಚಿಸುವುದರ ಜೊತೆಗೆ `ಯಾರದೋ ಮೂರನೆಯವರ ಕುತಂತ್ರವಿರಬಹುದು~ ಎಂದು ಯೋಚಿಸುತ್ತಲೂ ಇದ್ದರಲ್ಲವೆ? ಈಗ ಪ್ರೇಮವಿವಾಹಗಳೇ ಹೆಚ್ಚಾಗಿ ನಡೆಯುತ್ತಿವೆ.

ಸಮಾಜದಲ್ಲಿ, ನಿಧಾನವಾಗಿಯಾದರೂ, ಅದರ ಒಪ್ಪಿಗೆಯಾಗುತ್ತಿದೆ. ಇದರೊಂದಿಗೆ ಪೋಷಕ- ಮಗುವಿನ ಸಂಬಂಧ ಅತೀ ಸೂಕ್ಷ್ಮವಾಗುತ್ತಲೂ ಇದೆ. ಜಾಗತೀಕರಣದ ವಕ್ರದೃಷ್ಟಿ ನೇರವಾಗಿ ಕುಟುಂಬದ ಸದಸ್ಯರ ಮೇಲೆ ಬೀಳುತ್ತಿದೆ.

ಉದಾಹರಣೆಗೆ, ಒಂದೊಮ್ಮೆ ಕಿರಿಯ ಜೀವಗಳ ಪ್ರೇಮದಲ್ಲಿ ಹಿತವಾಗಿ ಭಾಗಿಯಾಗುತ್ತಿದ್ದ ಹಿರಿಯರು ಇಂದು ಅವರಿಂದ ಬಹಳಷ್ಟು ದೂರವಾಗುತ್ತಿದ್ದಾರೆ. ಕುಟುಂಬದ ಯಾವುದೇ ಕಾರ್ಯವಾಗಿರಲಿ ಎಲ್ಲರೂ ಸಂತೋಷದಿಂದ ಒಂದುಗೂಡಿ ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದ ಕಾಲ ಹೋಗಿ, ~ಥೀಮ್‌ಪಾರ್ಕ್~ಗಳಿಗೆ ಹೋಗಿ ~ಆ ಮೂರನೆಯವರು~ ~ಕ್ರಿಯೇಟ್~ ಮಾಡುವ ~ಫ್ಯಾಮಿಲಿ ಟುಗೆದರ‌್ನೆಸ್~ ಎಂಬ ಧ್ಯೇಯದಡಿಯಲ್ಲಿ, ಹಣವನ್ನು ವ್ಯಯಮಾಡಿ, ~ಫ್ಯಾಮಿಲಿ ಗೆಟ್‌ಟುಗೆದರ್~ ಅನ್ನು ಆಚರಿಸುವುದು.

ಹಾಗೆಯೇ, ಸಾಂಪ್ರದಾಯಿಕ ಊಟ-ತಿಂಡಿಗಳಲ್ಲಿ `ಇಂಟರೆಸ್ಟ್~ ಇಲ್ಲದೆ ಬೇರೆ ದೇಶದ ಆಹಾರ ಪದ್ಧತಿಗಳನ್ನು ಬಯಸುವುದು....ಮುಂತಾದವು ಇಂದು ಸರ್ವೇಸಾಮಾನ್ಯವಾಗಿದೆ.

ಕುಟುಂಬದಲ್ಲಿರುವ ಸದಸ್ಯರಲ್ಲಿಯೇ ಭಿನ್ನಾಭಿಪ್ರಾಯಗಳು ಉಂಟಾದಲ್ಲಿ ಕುಟುಂಬದ ಏಕತೆಯ ಸಾಧನೆ ಹೇಗೆ? ಹೀಗಾದಲ್ಲಿ ಆರೋಗ್ಯಕರವಾದ ಸಮಾಜವು ಬೆಳೆಯುವುದೆಂತು? ಯುವಜನತೆಯಲ್ಲಿಂದು ಅಮೆರಿಕೆಯು ಆಸೆ ಪಡುತ್ತಿರುವ `ಮಾನೋಕಲ್ಚರ್~ ಅನ್ನು ಆವೀರ್ಭವಿಸಿಕೊಳ್ಳುವ ಮನಃಸ್ಥಿತಿ ಬೆಳೆಯುತ್ತಿದೆ. ಅವರನ್ನು `ಸಂತೋಷವಾಗಿ~ ಇಟ್ಟುಕೊಳ್ಳಬೇಕೆಂಬ ಹೊಂದಾಣಿಕೆಯ ಮನೋಭಾವ ಹಿರಿಯರಲ್ಲಿ ಬಲವಂತವಾಗಿಯಾದರೂ ಹುಟ್ಟಿಕೊಳ್ಳುತ್ತಿದೆ.
 
ಈ `ಸೂಪರ್‌ಫಿಶಿಯಲ್~ (ಮೇಲುಮೇಲಿನ) ಅಥವಾ `ಡೈಲ್ಯೂಟೆಡ್~  (ನಿಸ್ಸಾರ) ಜೀವನಶೈಲಿಯ ಅನಿವಾರ್ಯತೆಯಿಂದ ಕಿರಿಯರ ಜೀವನವು ಹಿರಿಯರಿಗೆ ಹೊಂದಿಕೊಳ್ಳದಂತಾಗಿ ತಮ್ಮದೇ ಆದ ಪ್ರತ್ಯೇಕವಾದ ಜೀವನಶೈಲಿಯನ್ನು ಪ್ರೇರೇಪಿಸುತ್ತಿದೆ!!
 
ಇಂದು ಆ ಭಿನ್ನಾಭಿಪ್ರಾಯಗಳು ಮತ್ತಷ್ಟು ಹೆಚ್ಚಾಗುತ್ತಾ ಬಂದು ಪೋಷಕರಿಬ್ಬರೇ ಇರುವಂತಾಗುತ್ತಿದೆಯಲ್ಲವೇ? `ಪ್ರೀತಿ/ ಪ್ರೇಮಗಳೆಂದರೆ ಕೇವಲ ನಾವಿಬ್ಬರೇ~ ಎಂದು ಸ್ವಾರ್ಥಿಗಳಾಗುವಂತೆ ಮಾಡುತ್ತಿರುವ ಜಾಗತೀಕರಣವನ್ನು ಮಿತವಾಗಿ ಉಪಯೋಗಿಸಿಕೊಳ್ಳುವ ಜಾಣತನ ಯುವಜನತೆಯಲ್ಲಿ ಬರಬಹುದೆಂದು ಆಶಿಸೋಣವೇ? `ಪ್ರಣಯದ ಭಾಷೆಗೆ  ಅತಿಶಿಷ್ಟತೆ (ಸೋಫೆಸ್ಟಿಕೇಷನ್) ಯ ಲೇಪ ಬೇಡ. ಬದಲಾಗಿ ಪರಂಪರೆ(ಟ್ರೆಡಿಷನ್) ಎನ್ನುವ ಮದ್ದು ಬೇಕು~ ಎಂದು ಪ್ರೇಮಿಗಳು ಅರಿಯುತ್ತಾರೆಂದು ಬಯಸೋಣವೇ?
 ಹ್ಯಾಪಿ ವ್ಯಾಲೆಂಟೈನ್ಸ್ ಡೇ

ಏಕಸಂಸ್ಕೃತಿಯ ದಾಳಿ
ಪಾಶ್ಚಿಮಾತ್ಯ ಸಂಸ್ಕೃತಿಯು ಭಾರತಕ್ಕೆ ಬೇಕೆ ಬೇಡವೆ ಎಂಬ ಚರ್ಚೆ ಈ ಲೇಖನದ ಉದ್ದೇಶವಲ್ಲ! ಬದಲಾಗಿ, ಒಂದು ಕುಟುಂಬದ ಹೊಂದಾಣಿಕೆಯಲ್ಲಿ ಆ ಸಂಸ್ಕೃತಿ ತರುವ ಬದಲಾವಣೆಗಳ ಬಗ್ಗೆ ಅನಿಸಿಕೆಗಳಷ್ಟೇ!

ಬೇರೆಯೇ ದೇಶದ ಸಂಸ್ಕೃತಿ ಭಾರತೀಯತೆಯನ್ನು ಬಿಟ್ಟುಕೊಡುವಷ್ಟು ಮಟ್ಟಿಗೆ ಪ್ರಭಾವ ಬೀರುವುದಾದರೆ ಅದನ್ನು ಒಪ್ಪಿಕೊಳ್ಳುವ ಮುಂಚೆ ಯೋಚಿಸುವುದನ್ನಾದರೂ ಮಾಡಬಹುದಲ್ಲವೆ? ಜಾಗತೀಕರಣದ ಪ್ರಭಾವಗಳು ಇಂದು ಜಗತ್ತಿನಾದ್ಯಂತ ಒಂದೇ ಸಂಸ್ಕೃತಿಯನ್ನು ತರುವ ಪ್ರಯತ್ನಮಾಡುತ್ತಿರುವುದನ್ನು ಎಲ್ಲರೂ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.
 
`ಕೋಕಕೊಲನೈೇಷನ್~, `ಡಿಸ್ನಿಫಿಕೇಷನ್~, `ವಾಲ್‌ಮಾರ್ಟಿಜಂ~, `ಮ್ಯೋಕ್‌ಡೊನಾಡೈಜೇಷನ್~ ಮುಂತಾದವು ಕೇವಲ ವ್ಯಾಪಾರ, ವಾಣಿಜ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲ!! ಅದನ್ನು ತಮ್ಮದನ್ನಾಗಿ ಮಾಡಿಕೊಳ್ಳುವ ಸಮಾಜದ ಪ್ರಮುಖ ಅಂಗವಾಗಿರುವ ಕುಟುಂಬಗಳ ಜೀವನ ಶೈಲಿಯನ್ನು ಮಹತ್ತರವಾಗಿ ಬದಲಾಯಿಸುವ ಗುಣ ಅದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT