ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ಬರಹ

ಪಿಕ್ಚರ್ ಪ್ಯಾಲೆಸ್
Last Updated 13 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಪ್ರೀತಿ ಎಂಬ ಎರಡಕ್ಷರದ ಪದದಲ್ಲಿ ಏನೆಲ್ಲಾ ಇದೆ. ಪ್ರೇಮದ ಸಂಬಂಧದಲ್ಲಿ ಒಲವಿದೆ, ಮಧುವಿದೆ, ನಗುವಿದೆ, ತುಡಿತವಿದೆ. ಹಾಗೆಯೇ, ನೋವೂ ಇದೆ. ಪ್ರೇಮಿಗಳು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಸಾಗುವಾಗ ಅವರ ಮನಸ್ಸು `ದಾರಿ ಮುಗಿಯದಿರಲಿ' ಎಂದು ಪ್ರಾರ್ಥಿಸುತ್ತದೆ.

ಮತ್ತೆ ಕೆಲವು ಪ್ರೇಮಿಗಳು ಪ್ರೀತಿಯನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ತಮ್ಮ ಹೆಸರುಗಳನ್ನು ಬಂಡೆ, ಮರಗಳ ಮೇಲೆ ಹೃದಯದಾಕಾರದಲ್ಲಿ ಕೆತ್ತಿ ಅಜರಾಮರವಾಗಿಸಲು ಪ್ರಯತ್ನಿಸುತ್ತಾರೆ. ಕೆಲವರ ಪ್ರೀತಿ ಹುಟ್ಟುವುದಕ್ಕಿಂತ ಮುನ್ನವೇ ಸಾಯುತ್ತದೆ. ಮನದ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲಾಗದೆ ಒದ್ದಾಡುವ ಪ್ರೇಮಿಗಳೂ ಅಸಂಖ್ಯ. ಪ್ರೇಮದ ಉರಿಯಲ್ಲಿ ಬೇಯುತ್ತಿರುವ ಭಗ್ನ ಪ್ರೇಮಿಗಳಿಗೆ ಮೈಯೊಡ್ಡುತ್ತವೆ ಪಾರ್ಕಿನ ಬಂಡೆಗಳು ಮತ್ತು ಮರಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT