ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ್ ವಾಚು ಪ್ರೇಮ

Last Updated 14 ಮೇ 2012, 19:30 IST
ಅಕ್ಷರ ಗಾತ್ರ

`ಸಣ್ಣ ವಯಸ್ಸಿನಿಂದಲೂ ನನಗೆ ಕೈಗಡಿಯಾರ ಎಂದರೆ ಪ್ರಾಣ. ಆದರೆ ಆಗ ದುಡ್ಡಿಗೆ ತತ್ವಾರವಿತ್ತಲ್ಲ. ಹಾಗಾಗಿ ವಾಚುಗೀಚು ಕಟ್ಟುವ ಕನಸು ನನಸಾಗಲಿಲ್ಲ. ಈಗ ನನ್ನಿಷ್ಟದ ವಾಚು ಕೊಂಡುಕೊಳ್ಳುವ ಶಕ್ತಿ ಬಂದಿದೆ.
 
ಹ್ಹಹ್ಹಹ್ಹ... ಯಾವ ಬ್ರಾಂಡ್ ಬೇಕಾದರೂ ಕಟ್ಟಿ ಮಜಾ ಮಾಡುತ್ತೇನೆ~ ಎಂದು ಬಿಂದಾಸ್ ಆಗಿ ನುಡಿದರು `ನೆನಪಿರಲಿ~ ಪ್ರೇಮ್.

ಮಕ್ಕಳು ಮತ್ತು ಯುವಜನರ ನೆಚ್ಚಿನ ಬ್ರಾಂಡ್ ಆಗಿರುವ `ಫಾಸ್ಟ್ರಾಕ್~ನ ಸನ್‌ಗ್ಲಾಸ್‌ನೊಳಗಿಂದ ನಗುತ್ತಲೇ `ಮೆಟ್ರೊ~ದೊಂದಿಗೆ ಮಾತನಾಡಿದರು.

ಜಯನಗರ ಒಂಬತ್ತನೇ ಬ್ಲಾಕ್‌ನಲ್ಲಿ ಅದಾಗ ತಾನೇ  ಫಾಸ್ಟ್ರಾಕ್ ಮಳಿಗೆಯನ್ನು ಶುಭಾರಂಭ ಮಾಡಿದ ಪ್ರೇಮ್, ಮಳಿಗೆಯೊಳಗೊಂದು ಸುತ್ತುಹೊಡೆದು ಕೈಗಡಿಯಾರಗಳ ಶೋಕೇಸ್ ಮುಂದೆ ಸ್ವಲ್ಪ ಹೆಚ್ಚೇ ಕಾಲ ಕಳೆದರು. ಕ್ಲಿಕ್ ಕ್ಲಿಕ್ ಅಂದ ಕ್ಯಾಮೆರಾಗಳಿಗೆ ಚೂಪುನಗೆಯ ಪೋಸ್ ನೀಡಿದರು.

ಮಾತು ಸಿನಿಮಾದತ್ತ ಹೊರಳಿತು. “ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ಅಭಿನಯಿಸಬೇಕು ಎಂಬ ಆಸೆ ಇದೆ. `ಚಂದ್ರ~ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ” ಎನ್ನುವಾಗ ಕಣ್ಣಲ್ಲಿ ಹೊಳಪು. ಡಬ್ಬಿಂಗ್, ರಿಮೇಕ್ ಇತ್ಯಾದಿ ಪ್ರಸಕ್ತ ವಿದ್ಯಮಾನಗಳ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. `ಡಬ್ಬಿಂಗ್ ಬಗ್ಗೆ ಸಮ್ಮತವಿಲ್ಲ, ರೀಮೇಕ್ ಆದರೆ ಪರವಾಗಿಲ್ಲ~ ಎಂದರು.

`ಟೈಟಾನ್~ನ ಉಪ ಬ್ರಾಂಡ್ ಆಗಿದ್ದ ಫಾಸ್ಟ್ರಾಕ್ 2005ರಲ್ಲಿ ಸ್ವತಂತ್ರವಾಯಿತು. ಯುವಜನತೆಯನ್ನು ಗುರಿಯಾಗಿಸಿಕೊಂಡು ಅವರಿಗೆ ಇಷ್ಟವಾಗುವ ಆದರೆ ಎಲ್ಲ ವರ್ಗದವರಿಗೂ ಕೈಗೆಟುಕುವ ದರದಲ್ಲಿ  ಉತ್ಪನ್ನಗಳನ್ನು ಈಗ ನೀಡುತ್ತಿದ್ದೇವೆ.

ಪ್ರತಿ ತಿಂಗಳು ಹೊಸದೊಂದು ಉತ್ಪನ್ನವನ್ನು ಪರಿಚಯಿಸುವ ಉದ್ದೇಶದಿಂದ ಈ ಮಳಿಗೆ ಆರಂಭಿಸಿದ್ದೇವೆ~ ಎಂದು ಕಂಪೆನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥೆ ಸಿಮ್ರಾನ್ ಭಾಸಿನ್ ಹೇಳಿದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮತ್ತೊಮ್ಮೆ ನೆರೆದವರಿಗೆ ಕೈಬೀಸಿ ತಮ್ಮ ಕಪ್ಪುಬಣ್ಣದ ಕಾರಿನಲ್ಲಿ ಹೊರಟರು ಪ್ರೇಮ್.

ಅಂದಹಾಗೆ, ಫಾಸ್ಟ್ರಾಕ್‌ನ 101ನೇ ಮಳಿಗೆಯಿದು. ಫಾಸ್ಟ್ರಾಕ್ ಬ್ಯಾಗ್ ಹಾಗೂ ಬೆಲ್ಟ್‌ಗಳೂ ಇಲ್ಲಿ ಲಭ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT