ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇರಣಾ, ಜೀವನ್ ಚಾಂಪಿಯನ್

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಯುವ ಆಟಗಾರ್ತಿ ಪ್ರೇರಣಾ ಭಾಂಬ್ರಿ ಹಾಗೂ ಜೀವನ್ ನೆಡುಂಚೆಳಿಯನ್ ಅವರು ಇಲ್ಲಿ ಕೊನೆಗೊಂಡ ಫೆನೆಸ್ತಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದರು.

ಆರ್.ಕೆ. ಖನ್ನಾ ಟೆನಿಸ್ ಸಂಕೀರ್ಣದಲ್ಲಿ ಶನಿವಾರ ನಡೆದ ಮಹಿಳಾ ವಿಭಾಗದ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಪ್ರೇರಣಾ 2-6, 7-6, 4-1ರಲ್ಲಿ ರಿಷಿಕಾ ಸುಂಕರ ಅವರನ್ನು ಮಣಿಸಿ 20 ದಿನಗಳ ಅಂತರದಲ್ಲಿ ಎರಡನೇ ಟ್ರೋಫಿ ಮುಡಿಗೇರಿಸಿಕೊಂಡರು.

ಗುಲ್ಬರ್ಗದಲ್ಲಿ ಇತ್ತೀಚಿಗೆ ನಡೆದ ಐಟಿಎಫ್ ಟೂರ್ನಿಯಲ್ಲೂ ಪ್ರೇರಣಾ ಚಾಂಪಿಯನ್ ಆಗಿದ್ದರು.
ಪುರುಷರ ವಿಭಾಗದ ಸಿಂಗಲ್ಸ್‌ನ ಫೈನಲ್ ಹಣಾಹಣಿಯಲ್ಲಿ ತಮಿಳುನಾಡಿನ ಜೀವನ್ 7-6, 6-1ರಲ್ಲಿ ಮಹಾರಾಷ್ಟ್ರದ ಅರ್ಜುನ್ ಖಾಡೆ ಎದುರು ಗೆಲುವು ಪಡೆದು ಪ್ರಶಸ್ತಿ ಗೆದ್ದುಕೊಂಡರು. ಇಲ್ಲಿ ಜೀವನ್‌ಗೆ ಲಭಿಸಿದ ಚೊಚ್ಚಲ ಪ್ರಶಸ್ತಿ ಇದು.

ನವದೆಹಲಿ: `ರಾಷ್ಟ್ರೀಯ ಟೆನಿಸ್ ಟೂರ್ನಿಗಳ ಪ್ರಶಸ್ತಿ ಮೊತ್ತ ಹೆಚ್ಚಾಗಬೇಕು~ ಎಂದು ಅಂತರರಾಷ್ಟ್ರೀಯ ಆಟಗಾರ್ತಿ ಸಾನಿಯಾ ಮಿರ್ಜಾ ಸಲಹೆ ನೀಡಿದರು.

ಈ ಟೂರ್ನಿಯ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಂಡಿದ್ದರು. ಪುರುಷ ಮತ್ತು ಮಹಿಳಾ ವಿಭಾಗಕ್ಕೂ ಸಮನಾದ ಬಹುಮಾನ ಮೊತ್ತ ಇರಬೇಕು ಎನ್ನುವುದು ನನ್ನ ಸಲಹೆ. ಈ ಸಲಹೆಯನ್ನು ಅಖಿಲ ಭಾರತ ಟೆನಿಸ್ ಸಂಸ್ಥೆ ಅಧ್ಯಕ್ಷ ಅನಿಲ್ ಖನ್ನಾ ಪರಿಗಣಿಸುತ್ತಾರೆ~ ಎಂದು ಭಾವಿಸಿದ್ದೇನೆ ಎಂದು ಸಾನಿಯಾ ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಖನ್ನಾ, `ಸಾನಿಯಾ ಅವರ ಮನವಿಯನ್ನು ಪರಿಗಣಿಸಿದ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳುತ್ತೇನೆ~ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT