ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊಮ್ಯಾಕ್ ತೆಹಿಯೊ ಒಪ್ಪಂದ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಿಮೆಂಟ್ ತಯಾರಿಕೆ ಘಟಕಗಳ ವಿನ್ಯಾಸ ರೂಪಿಸುವ ಮತ್ತು ಸ್ಥಾಪನೆಗೆ ನೆರವಾಗುವ ಯಂತ್ರೋಪಕರಣ ತಯಾರಿಸುವ ಬೆಂಗಳೂರು ಮೂಲದ  ಪ್ರೊಮ್ಯಾಕ್ ಎಂಜಿನಿಯರಿಂಗ್ ಇಂಡಸ್ಟ್ರೀಸ್, ಜಪಾನಿನ ತೆಹಿಯೊ ಎಂಜಿನಿಯರಿಂಗ್ ಕಾರ್ಪೊರೇಷನ್ ಜತೆ  ಒಪ್ಪಂದ ಮಾಡಿಕೊಂಡಿದೆ.

ವಾರ್ಷಿಕ 80 ದಶಲಕ್ಷ ಟನ್‌ಗಳಷ್ಟು ಸಿಮೆಂಟ್ ಉತ್ಪಾದಿಸುವ ಸಾಮರ್ಥ್ಯದ ತೆಹಿಯೊ ಎಂಜಿನಿಯರಿಂಗ್ ಕಾರ್ಪೊರೇಷನ್ ಜತೆಗೆ ತಂತ್ರಜ್ಞಾನ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರೊಮ್ಯಾಕ್‌ನ ಅಧ್ಯಕ್ಷ ಜೆ. ಸುರೇಂದ್ರ ರೆಡ್ಡಿ, ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಾರ್ಷಿಕ 25 ಲಕ್ಷ ಟನ್‌ಗಳಷ್ಟು ಸಿಮೆಂಟ್ ಉತ್ಪಾದಿಸುವ ಘಟಕಗಳಿಗೆ ಅಗತ್ಯವಾದ ಯಂತ್ರೋಪಕರಣಗಳನ್ನು ಪಡೆಯಲು ಈ ಒಪ್ಪಂದ ನೆರವಾಗಲಿದೆ.

ಸಂಯುಕ್ತ ಅರಬ್ ಒಕ್ಕೂಟದ (ಯುಎಇ) ಫುಜೈರಹದಲ್ಲಿ  10 ಲಕ್ಷ ಟನ್ ಸಾಮರ್ಥ್ಯದ ಸಿಮೆಂಟ್ ಘಟಕವನ್ನು ಗುತ್ತಿಗೆ ಆಧಾರದ ಮೇಲೆ ಸಂಸ್ಥೆ ಸ್ಥಾಪಿಸಲಾಗುತ್ತಿದೆ. ಬಿಳಿ ಮತ್ತು ಬೂದು ಬಣ್ಣದ ಸಿಮೆಂಟ್ ತಯಾರಿಸುವ ವಿಶ್ವದ ಮೊಟ್ಟ ಮೊದಲ ಸ್ಥಾವರ ಇದಾಗಿದೆ. ತೆಹಿಯೊ ಜತೆಗಿನ ಒಪ್ಪಂದದ ಫಲವಾಗಿ ಪ್ರೊಮ್ಯಾಕ್‌ಗೆ ಲಭ್ಯವಾಗಿರುವ ವಿಶಿಷ್ಟ ಪರಿಣತಿ ಆಧರಿಸಿ ಈ ಸ್ಥಾವರ ನಿರ್ಮಾಣದಲ್ಲಿ ವಿಶೇಷ ತಂತ್ರಜ್ಞಾನ ಬಳಸಲಾಗುವುದು.

ಪ್ರೊಮ್ಯಾಕ್‌ನ ವಾರ್ಷಿಕ ವಹಿವಾಟು ರೂ. 350 ಕೋಟಿಗಳಷ್ಟಿದ್ದು, ಅದರಲ್ಲಿ ಶೇ 80ರಷ್ಟು (ಅಂದಾಜು ರೂ. 275 ಕೋಟಿ) ವಹಿವಾಟು ರಫ್ತಿನಿಂದ ಬರುತ್ತದೆ. ಸಂಸ್ಥೆಯು ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ವಹಿವಾಟು ಹೊಂದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT