ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಬಳಕೆಯೇ ಅಪಾಯಕಾರಿ

Last Updated 19 ಅಕ್ಟೋಬರ್ 2012, 4:35 IST
ಅಕ್ಷರ ಗಾತ್ರ

ದೇವನಹಳ್ಳಿ: ಪರಿಸರದ ಹಿತ ದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆ ಮತ್ತು ಸುಡುವಿಕೆ ಒಳ್ಳೆಯದಲ್ಲ ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಶ್ರಿನಿವಾಸ್ ಹೇಳಿದರು.

ದೇವನಹಳ್ಳಿ ದೊಡ್ಡಕೆರೆ ಅಂಗಳದಲ್ಲಿ ಭಾರತ ಸೇವಾದಲ ಹಾಗೂ ಲಯನ್ಸ್ ಸಂಸ್ಥೆ ಮತ್ತು ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ವನಮಹೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪರಿಸರ ವಿನಾಶದ ಅಂಚಿನಲ್ಲಿರುವಾಗ ನಾವೆಲ್ಲಾ ಜಾಗೃತರಾಗುತ್ತಿದ್ದೇವೆ. 20 ವರ್ಷಗಳ ಹಿಂದೆಯೇ ಎಚ್ಚೆತ್ತುಕೊಂಡಿದ್ದರೆ ಇಂತಹ ಭೀಕರ ಬರಗಾಲ ಇಂದು ರಾಜ್ಯಕ್ಕೆ ಕಾಡುತ್ತಿರಲಿಲ್ಲ ಎಂದು ಅವರು ಹೇಳಿದರು. 

 ತಾ.ಪಂ.ಅಧ್ಯಕ್ಷ ಬಿ.ಕೆ.ಶಿವಪ್ಪ ಮಾತನಾಡಿ, ಬಯಲು ಸೀಮೆಯಲ್ಲಿ ಕುಸಿಯುತ್ತಿರುವ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಮತ್ತು ನಾಶವಾಗುತ್ತಿರುವ ಅರಣ್ಯ ಸಂರಕ್ಷಿಸಲು ಸಾರ್ವಜನಿಕರು ಸಹಕರಿಸಬೇಕು ಎಂದರು.

ಭೂಮಿ ಬೆಲೆ ಹೆಚ್ಚಾದಂತೆ ಅರಣ್ಯ, ಕೆರೆ ಅಂಗಳ, ಗೋಮಾಳ, ಗುಂಡು ತೋಪುಗಳ ಸರ್ಕಾರಿ ಭೂಮಿಗಳನ್ನು ಯಥೇಚ್ಛವಾಗಿ ಒತ್ತುವರಿ ಮಾಡಲಾಗುತ್ತಿದೆ. ಕೆರೆಗಳಿಗೆ ಹರಿದು ಬರುವ ರಾಜ ಕಾಲುವೆಗಳು ಕಣ್ಮರೆಯಾಗುತ್ತಿವೆ. ಕೆರೆಗಳನ್ನು ಉಳಿಸಿಕೊಳ್ಳಲು ಸ್ಥಳೀಯ ಗ್ರಾಮಸ್ಥರ ಸಹಕಾರ ಅಗತ್ಯವಿದೆ ಎಂದರು.

ತಾಲ್ಲೂಕು ಸೇವಾದಲ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ಸೇವಾದಲ ಸಂಸ್ಥೆ 2004 ರಿಂದ ಪರಿಸರ ರಕ್ಷಣೆಗೆ ಒತ್ತು ನೀಡುತ್ತಿದೆ. ಪ್ರಸ್ತುತ ಕೆರೆ ಅಂಗಳದಲ್ಲಿ 6600 ಸಸಿಗಳನ್ನು ನೆಡಲಾಗಿದೆ. ಅಲ್ಲದೆ ಒಂದು ಲಕ್ಷ ಸಸಿ ನೆಡುವ ಗುರಿ ನಮ್ಮದಾಗಿತ್ತು. ಮಳೆಯ ಅಭಾವದಿಂದಾಗಿ ಈ ಪ್ರಮಾಣವನ್ನು 65 ಸಾವಿರಕ್ಕೆ ಸೀಮಿತಗೊಳಿಸಲಾಗಿದೆ. ತಾಲ್ಲೂಕಿನ ಎಂಬ್ರಾಹಳ್ಳಿ ಬೆಟ್ಟವನ್ನು ದತ್ತು ಪಡೆಯುವ ಯೋಜನೆ ಇದೆ ಎಂದರು.

ಸೇವಾದಲ ಕಾರ್ಯದರ್ಶಿ ಶಿವರಾಮಯ್ಯ, ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಸದಸ್ಯ ವೆಂಕಟರಾಜು, ನಂದೀಶ್, ಲಯನ್ಸ್ ವಲಯ ಮುಖ್ಯಸ್ಥ ಸತೀಶ್ ಕುಮಾರ್, ಸಾಮಾಜಿಕ ಅರಣ್ಯ ಉಪವಲಯಾಧಿಕಾರಿ ಕೃಷ್ಣಪ್ಪ, ಕಾಂಗ್ರೆಸ್ ಮುಖಂಡ ಗೋಪಾಲ ಸ್ವಾಮಿ, ಎಂಪಿಸಿಎಸ್ ಮಾಜಿ ಅಧ್ಯಕ್ಷ ರಾಜಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT