ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಧ್ವಜ ನಿಷೇಧಿಸಲು ಆಗ್ರಹ

Last Updated 7 ಜನವರಿ 2014, 19:50 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯು ಗಣರಾಜ್ಯೋತ್ಸವದ ದಿನಾ­ಚರಣೆ­ಯಲ್ಲಿ ಪ್ಲಾಸ್ಟಿಕ್, ಕಾಗದ, ನೈಲಾನ್‌ ಬಟ್ಟೆ, ಸಾಂವಿಧಾನಿಕ ಅಳತೆ­ಗಳಿಲ್ಲದ ರಾಷ್ಟ್ರಧ್ವಜ ಬಳಕೆಯನ್ನು ನಿಷೇ­ಧಿ­ಸುವಂತೆ  ಒತ್ತಾಯಿಸಿ ಬೆಂಗಳೂರು ನಗರ ಜಿಲ್ಲಾ ಸಹಾಯಕ ಆಯುಕ್ತೆ ಕವಿತಾ ರಾಜಾರಾಮ್‌ ಅವರಿಗೆ  ಮಂಗಳವಾರ ಮನವಿ ಸಲ್ಲಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಸಮನ್ವಯಕಾರ ಚಂದ್ರು ಮೋಗೆರ್‌ ಮಾತನಾಡಿ, ‘ಜ.26 ರಂದು ಅಲ್ಲಲ್ಲಿ ಧ್ವಜವಂದನೆಯ ಕಾರ್ಯಕ್ರಮ­ವನ್ನು ಉತ್ಸಾಹ ಪೂರ್ವಕ­ವಾಗಿ ನೆರವೇರಿ­ಸುತ್ತಾರೆ. ಆದರೆ, ಅದೇ ದಿನ ಮಧ್ಯಾಹ್ನ­ದಿಂದಲೇ ರಸ್ತೆಗಳಲ್ಲಿ, ಚರಂಡಿಗಳಲ್ಲಿ ರಾಷ್ಟ್ರಧ್ವಜ ಬಿದ್ದಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ್‌ನ ಉಪಯೋ­ಗ­ದಿಂದ ತಕ್ಷಣಕ್ಕೆ ನಾಶವಾಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT