ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾತಿಮಾ, ರಾಣಕ್ ಆಯ್ಕೆ

ಹಾರ್ಲಿಕ್ಸ್ ವಿಜ್‌ಕಿಡ್ಸ್ ದಕ್ಷಿಣ ಏಷ್ಯಾ ಮಟ್ಟದ ಸ್ಪರ್ಧೆ
Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ಅಂತರಶಾಲಾ ಸ್ಪರ್ಧೆಗಳಲ್ಲಿ ದಕ್ಷಿಣ ಏಷ್ಯಾ ಮಟ್ಟದಲ್ಲೇ ದೊಡ್ಡ ಪ್ರಮಾಣದ ಸಾಂಸ್ಕೃತಿಕ-ಸಾಹಿತ್ಯಿಕ ಸ್ಪರ್ಧೆಯಾದ `ಹಾರ್ಲಿಕ್ಸ್ ವಿಜ್‌ಕಿಡ್ಸ್ ಸೌತ್ ಏಷ್ಯಾ 2013'ನಲ್ಲಿ ಭಾಗವಹಿಸಲು ನಗರದ ಪ್ರೆಸಿಡೆನ್ಸಿ ಶಾಲೆಯ ಫಾತಿಮಾ ಶಕೀರ್ ಹಾಗೂ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ರಾಣಕ್ ಸಮ್ದಾರಿಯ ಆಯ್ಕೆಯಾಗಿದ್ದಾರೆ.

ಜ್ಞಾನಭಾರತಿ ಸಭಾಂಗಣದಲ್ಲಿ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ನಗರದ 70 ಶಾಲೆಗಳಿಂದ ಸುಮಾರು 4500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಅವರಲ್ಲಿ ಈ ಇಬ್ಬರು ಬೆಂಗಳೂರಿನಿಂದ ಪಾಲ್ಗೊಳ್ಳಲು ಅರ್ಹತೆ ಪಡೆದರು. `ಇದೇ ವರ್ಷ ನವೆಂಬರ್‌ನಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದ್ದು, ಅದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ವಿಜೇತರಾದ ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದ ಶಾಲಾ ಮಕ್ಕಳು ತಮ್ಮ ತಮ್ಮ ನಗರಗಳನ್ನು ಪ್ರತಿನಿಧಿಸಲಿದ್ದಾರೆ.

ಕೊನೆಗೆ ದಕ್ಷಿಣ ಏಷ್ಯಾ ಮಟ್ಟದ ಜಯ ಗಳಿಸಿದ ವಿದ್ಯಾರ್ಥಿಗಳು ವಾರ್ಷಿಕ ಒಂದು ಲಕ್ಷ ಮೊತ್ತದ ವಿದ್ಯಾರ್ಥಿವೇತನ ಹಾಗೂ ಐದು ದಿನಗಳ ಜರ್ಮನಿ ಪ್ರವಾಸದ ಅವಕಾಶ ಪಡೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಹಾರ್ಲಿಕ್ಸ್ ವಿಜ್‌ಕಿಡ್ಸ್ ಸ್ಪರ್ಧೆಯು ಶಾಲೆಗಳ ವಾರ್ಷಿಕ ಚಟುವಟಿಕೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತಿರುವುದು ಸಂತಸ ತಂದಿದೆ' ಎಂದು ಹಾರ್ಲಿಕ್ಸ್ ವಿಜ್‌ಕಿಡ್ಸ್‌ನ ಯೋಜನಾ ನಿರ್ದೇಶಕ ಹಾಗೂ ಎಜುಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಸುಲ್ತಾನ್ ಅಹಮದ್ ಹೇಳಿದರು.

ಗ್ಲಾಕ್ಸೊಸ್ಮಿತ್‌ಲೈನ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಯಂತ್ ಸಿಂಗ್, `ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಹಾರ್ಲಿಕ್ಸ್ ಅತ್ಯುತ್ತಮ ಪೇಯ. ಇದೀಗ ಹಾರ್ಲಿಕ್ಸ್ ವಿಜ್‌ಕಿಡ್ಸ್ ಹೆಸರಿನಲ್ಲಿ ಮಕ್ಕಳು ತಮ್ಮ ಚಿಂತನಾಶಕ್ತಿ, ಸ್ಪರ್ಧಾತ್ಮಕ ಮನೋಭಾವ ಮತ್ತು ಪ್ರತಿಭೆಯನ್ನು ಜಾಹೀರುಪಡಿಸುವ ಅವಕಾಶವಿದ್ದು, ಅದರಲ್ಲಿ ಪ್ರತಿವರ್ಷ ಒಂದರಿಂದ 12ನೇ ತರಗತಿವರೆಗಿನ ಲಕ್ಷಾಂತರ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಕ್ರಯಾನ್ಸ್ ಕಂಪೆನಿಯ ವತಿಯಿಂದ ಚಿತ್ರರಚನೆ, ಸಾಹಿತ್ಯ, ಪಠ್ಯೇತರ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗುತ್ತದೆ' ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT