ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ಮುಲಾ ಒನ್: ನಿಕೊ ಹಕೆನ್‌ಬರ್ಗ್‌ಗೆ ಆರನೇ ಸ್ಥಾನ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಯಾಂಗಮ್, ದಕ್ಷಿಣ ಕೊರಿಯ (ಪಿಟಿಐ): ಫೋರ್ಸ್ ಇಂಡಿಯಾ ತಂಡದ ನಿಕೊ ಹಕೆನ್‌ಬರ್ಗ್ ಭಾನುವಾರ ನಡೆದ ಕೊರಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ಆರನೇ ಸ್ಥಾನ ಪಡೆದರು. ಈ ಮೂಲಕ ತಮ್ಮ ತಂಡಕ್ಕೆ ಎಂಟು ಪಾಯಿಂಟ್ ತಂದುಕೊಟ್ಟರು.

ಇದೇ ತಂಡದ ಇನ್ನೊಬ್ಬ ಚಾಲಕ ಪೌಲ್ ಡಿ ರೆಸ್ಟಾ 12ನೇ ಸ್ಥಾನ ಪಡೆದು ಪಾಯಿಂಟ್ ಗಿಟ್ಟಿಸಲು ವಿಫಲರಾದರು. ಫೋರ್ಸ್ ಇಂಡಿಯಾ ತಂಡ ಒಟ್ಟು 89 ಪಾಯಿಂಟ್‌ಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

ವೆಟೆಲ್‌ಗೆ ಅಗ್ರಸ್ಥಾನ: ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್ ಈ ರೇಸ್ ಗೆದ್ದುಕೊಂಡರು. ಇದೇ ತಂಡದ ಮಾರ್ಕ್ ವೆಬೆರ್‌ಎರಡನೇ ಸ್ಥಾನ ಪಡೆದರೆ, ಫೆರಾರಿ ತಂಡದ ಫೆರ್ನಾಂಡೊ ಅನೊಲ್ಸೊ ಮೂರನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದರು.

ಈ ಗೆಲುವಿನ ಮೂಲಕ ವೆಟೆಲ್ (215 ಪಾಯಿಂಟ್) ಫೆರಾರಿ ತಂಡದ ಅಲೊನ್ಸೊ (209) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. 

ಫೋರ್ಸ್ ಇಂಡಿಯಾ ತೊರೆಯಲಿರುವ ಹಕೆನ್‌ಬರ್ಗ್? (ಐಎಎನ್‌ಎಸ್): ಪ್ರಸಕ್ತ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಕೆನ್‌ಬರ್ಗ್ 2013 ರಲ್ಲಿ ಸೌಬೆರ್ ತಂಡವನ್ನು ಸೇರಲಿದ್ದಾರೆ ಎಂದು ಬಿಸಿಸಿ ವರದಿ ಮಾಡಿದೆ. `ಸೌಬೆರ್ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ ಹಕೆನ್‌ಬರ್ಗ್ ಜೊತೆ ಮಾತುಕತೆ ನಡೆದಿದೆ~ ಎಂದು ವರದಿ ತಿಳಿಸಿದೆ. ಈ ಹಿಂದೆ ಫೋರ್ಸ್ ಇಂಡಿಯಾ ತಂಡದಲ್ಲಿದ್ದ ಅಡ್ರಿಯಾನ್ ಸುಟಿಲ್ ಅವರು ಹಕೆನ್‌ಬರ್ಗ್ ಸ್ಥಾನವನ್ನು ತುಂಬಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT