ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಟ್‌ನೆಸ್‌ನತ್ತ ಮನಿಷಾ ಚಿತ್ತ

Last Updated 28 ಜುಲೈ 2013, 19:59 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೇ ಗರ್ಭಕೋಶದ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾದ ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ತಮ್ಮ ತಂದೆ ಪ್ರಕಾಶ್ ಕೊಯಿರಾಲ ಅವರ ಸಲಹೆಯಂತೆ ಮತ್ತೆ  ಫಿಟ್‌ನೆಸ್‌ನತ್ತ ಚಿತ್ತ ಹರಿಸಿದ್ದಾರಂತೆ.

`ಪ್ರತಿದಿನ ಎಂಟರಿಂದ ಹನ್ನೆರಡು ಕಿಲೋಮೀಟರ್ ವಾಕಿಂಗ್ ಮಾಡುವಂತೆ ಅಪ್ಪ ಹೇಳಿದ್ದಾರೆ. ನಾನು ಅಪ್ಪನ ಮಾತನ್ನು ತಪ್ಪದೇ ಪಾಲಿಸುತ್ತಿದ್ದೇನೆ' ಎಂದು ಮನಿಷಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

`ಇದರ ಜೊತೆಗೆ ಒಂದು ಗಂಟೆ ಪ್ರಾಣಾಯಾಮ ಮಾಡುತ್ತೇನೆ. ಮಲಗುವ ಮುಂಚೆ ಓಶೋ ಅವರ ಕುಂಡಲಿನಿ ಧ್ಯಾನ ಮಾಡುತ್ತೇನೆ. ಇವುಗಳ ಮಧ್ಯೆ ಆಯುರ್ವೇದ ಮಸಾಜ್ ಟ್ರೀಟ್‌ಮೆಂಟ್ ಕೂಡ ಮಾಡಿಸಿಕೊಳ್ಳುತ್ತಿದ್ದೇನೆ' ಎಂದೂ ಅವರು ಬರೆದುಕೊಂಡ್ದ್ದಿದಾರೆ.

ಇದೆಲ್ಲ ನನ್ನ ಪ್ರಾಜೆಕ್ಟ್‌ನ ಭಾಗ ಎಂದಿರುವ 42ರ ಮನಿಷಾ `ಬಾಂಬೆ', `1942- ಎ ಲವ್ ಸ್ಟೋರಿ' ಮತ್ತು `ದಿಲ್ ಸೆ' ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದ್ದಾರೆ.

ಕಳೆದ ವರ್ಷ ನವಂಬರ್‌ನಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ನಂತರ ಅವರು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿದ್ದರು. ಆರು ತಿಂಗಳ ವಿಶ್ರಾಂತಿಯ ನಂತರ ಮನಿಷಾ ಇನ್ನಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT