ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಎಚ್‌ಎಎಲ್- ಚರ್ಚಿಲ್ ಪಂದ್ಯ ಡ್ರಾ

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಡಗಾಂವ್ (ಪಿಟಿಐ):  ಗೆಲ್ಲುವ ಅವಕಾಶ ತಪ್ಪಿಸಿಕೊಂಡ ಹಿಂದುಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡದವರು ಇಲ್ಲಿ ನಡೆದ ಐ ಲೀಗ್ ಫುಟ್‌ಬಾಲ್ ಟೂರ್ನಿಯ 20ನೇ ಸುತ್ತಿನ ಪಂದ್ಯದಲ್ಲಿ ಡ್ರಾಕ್ಕೆ ತೃಪ್ತಿ ಪಟ್ಟರು.

ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಚ್‌ಎಎಎಲ್ ಹಾಗೂ ಚರ್ಚಿಲ್ ಬ್ರದರ್ಸ್‌    ಸ್ಪೋರ್ಟ್ಸ್ ಕ್ಲಬ್ ನಡುವಿನ ಪಂದ್ಯ 1-1ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು. ವಿರಾಮದ ವೇಳೆಗೆ ಎಚ್‌ಎಎಲ್ 1-0ರಲ್ಲಿ ಮುನ್ನಡೆ ಹೊಂದಿತ್ತು. ಈ ಗೋಲನ್ನು ಜಗಬ್ ಹಮ್ಜಾ 8ನೇ ನಿಮಿಷದಲ್ಲಿ ತಂದಿಟ್ಟರು. ಪಂದ್ಯದ ಕೊನೆಯಲ್ಲಿ ಚರ್ಚಿಲ್ ತಂಡದ ರಾಬೆರ್ಟ್ ಮೆಂಡಿಸ್ ಸಿಲ್ವಾ (87ನೇ ನಿಮಿಷ) ಗೋಲು ಗಳಿಸಿ ಎಚ್‌ಎಎಲ್ ಗೆಲುವಿನ ಆಸೆಗೆ ಅಡ್ಡಿಯಾದರು.

ಈ ಋತುವಿನಲ್ಲಿ ಎಚ್‌ಎಎಲ್ ಗಳಿಸಿದ ನಾಲ್ಕನೇ ಡ್ರಾ ಇದಾಗಿದೆ. ಇದರಿಂದ ಒಟ್ಟು ಏಳು ಪಾಯಿಂಟ್‌ಗಳನ್ನು ಹೊಂದಿದೆ.

ರೆಫರಿ ವಿರುದ್ಧ ಅಕ್ರೋಶ: `ರೆಫರಿ ಪಂದ್ಯದ ವೇಳೆ ಪಕ್ಷಪಾತಿ ಧೋರಣೆ ಅನುಸರಿಸಿದ್ದಾರೆ. ಈ ವಿಷಯವನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಎದುರು ಪ್ರಸ್ತಾಪಿಸುತ್ತೇನೆ~ ಎಂದು ಎಚ್‌ಎಎಲ್ ತಂಡದ ಕೋಚ್ ಆರ್. ತ್ಯಾಗರಾಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗೆಲುವು ಸಾಧ್ಯವಿದ್ದ ಪಂದ್ಯದಲ್ಲಿ ರೆಫರಿ ತಪ್ಪು ನಿರ್ಧಾರದಿಂದ ಪಂದ್ಯ ಡ್ರಾ ಆಯಿತು. ಇಲ್ಲವಾಗಿದ್ದರೆ, ಗೆಲುವು ನಮ್ಮದಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT