ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಎಡಿಇ ತಂಡ ಜಯಭೇರಿ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೆಂಗಳೂರು: ಬಿಇಎಂಎಲ್ ಕೆಜಿಎಫ್ ಅಕಾಡೆಮಿ ತಂಡದ ಆಟಗಾರರು ಒಡ್ಡಿದ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತ ಎಡಿಇ ತಂಡದವರು ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಜಯ ಸಾಧಿಸಿದರು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಡಿಇ 3-2 ಗೋಲುಗಳಿಂದ ಗೆಲುವು ತನ್ನದಾಗಿಸಿಕೊಂಡಿತು. ಶ್ರೀಧರನ್ (7ನೇ ನಿಮಿಷ), ಸಂತೋಷ್ (9) ಮತ್ತು ಅ್ಯಂಟೊ ಕ್ಸೇವಿಯರ್ (23) ಆರಂಭದಲ್ಲೇ ಗೋಲು ಗಳಿಸಿ ಎಡಿಇಗೆ 3-0 ಮುನ್ನಡೆ ತಂದಿತ್ತರು.

ಮರು ಹೋರಾಟ ನಡೆಸಿದ ಕೆಜಿಎಫ್ ಪರ ರಾಜೇಶ್ (40) ಮತ್ತು ಟಿಕೆನ್ ಸಿಂಗ್ (59) ಚೆಂಡನ್ನು ಗುರಿ ಸೇರಿಸಿದರು. ಆದರೆ ಕೊನೆಯಲ್ಲಿ ರಕ್ಷಣೆಯನ್ನು ಮತ್ತಷ್ಟು ಬಲಪಡಿಸಿದ ಎಡಿಇ ಗೆಲುವು ಪಡೆಯಿತು.

`ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಎಲ್‌ಆರ್‌ಡಿಇ 4-0 ಗೋಲುಗಳಿಂದ ಜವಾಹರ್ ಯೂನಿಯನ್ ತಂಡವನ್ನು ಮಣಿಸಿತು. ವಿಜಯಿ ತಂಡದ ಎಡ್ವಿನ್ ಜಾರ್ಜ್ (27), ವಿದ್ಯಾಸಾಗರ್ (36), ಚಂದ್ರ ಕುಮಾರ್ (56) ಮತ್ತು ಕಿರಣ್ (82) ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT