ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಎಸ್‌ಎಐಗೆ ಮಣಿದ ಮಾರ್ಸ್‌

ಪೋಸ್ಟಲ್ ತಂಡಕ್ಕೆ ಜಯ
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಪೋಸ್ಟಲ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ರೋಚಕ ಜಯ ಸಾಧಿಸಿದರು.

ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪೋಸ್ಟಲ್ 2-1 ಗೋಲುಗಳಿಂದ ಡಿವೈಎಸ್‌ಎಸ್ ತಂಡವನ್ನು ಮಣಿಸಿ ಪೂರ್ಣ ಪಾಯಿಂಟ್ ತನ್ನದಾಗಿಸಿಕೊಂಡಿತು.

ಕೆನೆತ್ (22ನೇ ನಿಮಿಷ) ಮತ್ತು ವೆಂಕಟೇಶ್ (30ನೇ ನಿ.) ಗೋಲು ಗಳಿಸಿ ಪೋಸ್ಟಲ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಡಿವೈಎಸ್‌ಎಸ್ ತಂಡದ ಏಕೈಕ ಗೋಲನ್ನು ಸುನಿಲ್ 55ನೇ ನಿಮಿಷದಲ್ಲಿ ತಂದಿತ್ತರು.

ಈ ಗೆಲುವಿನ ಮೂಲಕ ಪೋಸ್ಟಲ್ ಮೂರು ಪಂದ್ಯಗಳಿಂದ ತನ್ನ ಪಾಯಿಂಟ್‌ಗಳನ್ನು ಐದಕ್ಕೆ ಹೆಚ್ಚಿಸಿಕೊಂಡಿತು. ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಡಿವೈಎಸ್‌ಎಸ್ ಇನ್ನೂ ಪಾಯಿಂಟ್ ಖಾತೆ ತೆರೆದಿಲ್ಲ.

ಎಸ್‌ಎಐಗೆ ಜಯ: `ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಎಸ್‌ಎಐ ತಂಡ 2-0 ಗೋಲುಗಳಿಂದ ಬೆಂಗಳೂರು ಮಾರ್ಸ್‌ ತಂಡವನ್ನು ಸೋಲಿಸಿತು. ಪಾವೊನಿಯೊ ಹೊಕಿಪ್ (29) ಮತ್ತು ಸರೋಜ್ ರಾಯ್ (73) ವಿಜಯಿ ತಂಡದ ಪರ ಗೋಲು ಗಳಿಸಿದರು.

ಮಂಗಳವಾರ ನಡೆಯುವ ಪಂದ್ಯಗಳಲ್ಲಿ ಎಜಿಒಆರ್‌ಸಿ- ಬೆಂಗಳೂರು ಕಿಕ್ಕರ್ಸ್ ಮತ್ತು ಎಡಿಇ- ಆರ್‌ಡಬ್ಲ್ಯುಎಫ್ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT