ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಜುಪಿಟರ್‌ಗೆ ಜಯ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜುಪಿಟರ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ `ಬಿ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಪಡೆದರು.

ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಜುಪಿಟರ್ ತಂಡ 2-0 ಗೋಲುಗಳಿಂದ ಸನ್ ರೈಸಿಂಗ್ ವಿರುದ್ಧ ಜಯ ಪಡೆಯಿತು. ಅಮರನ್ (2ನೇ ನಿಮಿಷ) ಮತ್ತು ಹರೀಶ್ (40) ಜುಪಿಟರ್ ಪರ ಗೋಲು ಗಳಿಸಿದರು.

ಜವಾಹರ್ ಯೂನಿಯನ್ 6-0 ರಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ತಂಡವನ್ನು ಮಣಿಸಿತು. ವಿಜೇತ ತಂಡದ ರಾಬಿನ್ (13, 24 ಮತ್ತು 43) ಮೂರು ಗೋಲುಗಳನ್ನು ಗಳಿಸಿದರೆ, ಹರ್ದಯ್ (31), ವೇಯ್ನ (52) ಹಾಗೂ ನಿರವ್ (63) ಇತರ ಗೋಲುಗಳನ್ನು ತಂದಿತ್ತರು.

ದಿನದ ಇತರ ಪಂದ್ಯಗಳಲ್ಲಿ ನ್ಯಾಷನಲ್ಸ್ 3-1 ರಲ್ಲಿ ಗೋವನ್ಸ್ ವಿರುದ್ಧವೂ, ರಾಯಲ್ಸ್ 3-2 ರಲ್ಲಿ ಶ್ರೀ ಗಜಾನನ ಮೇಲೂ ಗೆಲುವು ಪಡೆದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT