ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಡ್ರಾ ಸಾಧಿಸಿದ ಯಂಗ್ ಚಾಲೆಂಜರ್ಸ್

Last Updated 2 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸಮಬಲ ಪ್ರದರ್ಶನ ತೋರಿದ ಯಂಗ್ ಚಾಲೆಂಜರ್ಸ್ ಹಾಗೂ ಮುಸ್ಲಿಂ ಹೀರೋಸ್ ತಂಡಗಳು ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಸಿ' ಡಿವಿಷನ್ ಫುಟ್‌ಬಾಲ್ ಲೀಗ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ 1-1ರಲ್ಲಿ ಡ್ರಾ ಸಾಧಿಸಿದವು.

ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯಂಗ್ ಚಾಲೆಂಜರ್ಸ್ ಪರ ಮ್ಯಾಥ್ಯೂ 5ನೇ ನಿಮಿಷದಲ್ಲಿ ಗೋಲು ಗಳಿಸಿ 1-0 ಮುನ್ನಡೆ ಒದಗಿಸಿದರು. ಬಳಿಕ ಅಜಾನ್ (22ನೇ ನಿ.) ತಂದಿತ್ತ ಗೋಲಿನ ಮೂಲಕ ಮುಸ್ಲಿಂ ಹೀರೋಸ್ ತಂಡ ಸಮಬಲ ಸಾಧಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.

ಮತ್ತೊಂದು ಪಂದ್ಯದಲ್ಲಿ ಅಜಯ್ (39ನೇ ನಿ.) ತಂದಿತ್ತ ಗೋಲಿನ ನೆರವಿನಿಂದ ಲಾ ಮಸಿಯಾ ತಂಡ 1-0 ರಲ್ಲಿ ಸೌತ್ ಇಂಡಿಯಾ ವಿರುದ್ಧ ಜಯಿಸಿತು. ಬುಧವಾರದ ಪಂದ್ಯಗಳಲ್ಲಿ ಶೈನಿಂಗ್ ಸ್ಟಾರ್-ಮಿಸಾಕಾ, ಕೊಂಕಣ್- ವೆಟೆರನ್ಸ್ ಹಾಗೂ ಹಿಂದು ಸೋಷಿಯಲ್ಸ್- ಸ್ಪೋರ್ಟಿಂಗ್ ಯೂತ್ಸ್ ತಂಡಗಳು ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT