ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ತಿಲಕ್ ಮುಡಿಗೆ ಪ್ರಶಸ್ತಿ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರದರ್ಶನ' ಪಂದ್ಯದಲ್ಲಿ ಸೋಲು ಕಂಡರೂ ತಿಲಕ್ ಮೆಮೋರಿಯಲ್ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ನಡೆದ `ಬಿ' ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಮಡಿಗೇರಿಸಿಕೊಂಡಿತ್ತು.

ಶನಿವಾರ ನಡೆದ ಪಂದ್ಯದಲ್ಲಿ ತಿಲಕ್ ತಂಡ ಸದರ್ನ್ ಬ್ಲೂಸ್ ಎದುರು ಗೆಲುವು ಪಡೆದಾಗಲೇ ಚಾಂಪಿಯನ್ ಆಗಿತ್ತು. ಆದರೆ, ಪ್ರದರ್ಶನ ಪಂದ್ಯದಲ್ಲಿ ತಿಲಕ್ 0-1 ಗೋಲಿನಿಂದ ಬೆಂಗಳೂರು ಇಂಡಿಪೆಂಡೆಂಟ್ ಎದುರು ಸೋಲು ಕಂಡಿತು. 20ನೇ ನಿಮಿಷದಲ್ಲಿ ಗೋಲು ಗಳಿಸಿದ ಎಡ್ವಿನ್ ಬೆಂಗಳೂರು ತಂಡದ ಗೆಲುವಿನ ರೂವಾರಿ ಎನಿಸಿದರು.

ದಿನದ ಇನ್ನೊಂದು ಪಂದ್ಯದಲ್ಲೂ ಇಂಡಿಪೆಂಡೆಂಟ್ ಗೆಲುವಿನ ಸವಿ ಕಂಡಿತು. ಈ ತಂಡ 2-1 ಗೋಲುಗಳಿಂದ ಸದರ್ನ್ ಬ್ಲೂಸ್ ತಂಡವನ್ನು ಮಣಿಸಿತು. ವಿಜಯಿ ತಂಡದ ಜಬಿಯುಲ್ಲಾ 22ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಎಡ್ವಿನ್ 50ನೇ ನಿಮಿಷದಲ್ಲಿ ಎರಡನೇ ಗೋಲು ತಂದಿತ್ತರು.

ಸದರ್ನ್ ತಂಡದ ಏಕೈಕ ಗೋಲನ್ನು ಕೆ.ವಿ. ಆದಿತ್ಯ 54ನೇ ನಿಮಿಷದಲ್ಲಿ ಕಲೆ ಹಾಕಿದರು. ಭಾನುವಾರದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಇಂಡಿಪೆಂಡೆಂಟ್ ಎರಡನೇ ಸ್ಥಾನ ಪಡೆಯಿತು. ಬಿ ಡಿವಿಷನ್‌ನಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದ ತಿಲಕ್ ಮತ್ತು ಇಂಡಿಪೆಂಡೆಂಟ್ ತಂಡಗಳು `ಎ' ಡಿವಿಷನ್‌ಗೆ ಅರ್ಹತೆ ಪಡೆದುಕೊಂಡವು. ಚಾಂಪಿಯನ್ ತಿಲಕ್ ತಂಡ 25,000 ಬಹುಮಾನ ಪಡೆದರೆ, ಇಂಡಿಪೆಂಡೆಂಟ್ 15,000 ಬಹುಮಾನ ತನ್ನದಾಗಿಸಿಕೊಂಡಿತು.

ನ್ಯಾಷನಲ್, ಹುಬ್ಬಳ್ಳಿ ಸೌತ್ ವೆಸ್ಟರ್ನ್ ರೈಲ್ವೆ ಮತ್ತು ರಾಯಲ್ಸ್ ತಂಡಗಳು ಸಿ ಡಿವಿಷನ್‌ಗೆ ಹಿಂಬಡ್ತಿ ಪಡೆದವು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಅಧ್ಯಕ್ಷ  ಎ.ಆರ್. ಖಲೀಲ್, ಪ್ರಧಾನ ಕಾರ್ಯದರ್ಶಿ ಹಾಗೂ ಬಿಡಿಎಫ್‌ಎ ಚೇರ್‌ಮನ್ ಇ. ಸತ್ಯನಾರಾಯಣ ಉಪಸ್ಥಿತರಿದ್ದರು. ಸಿ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಸೋಮವಾರ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT