ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಭಾರತ-ಬಹರೇನ್ ಮುಖಾಮುಖಿ

Last Updated 14 ಜನವರಿ 2011, 9:35 IST
ಅಕ್ಷರ ಗಾತ್ರ

ದೋಹಾ (ಪಿಟಿಐ): ಆಸ್ಟ್ರೇಲಿಯಾ ಎದುರು ತೀರ ನೀರಸ ಆಟವಾಡಿ ನಿರಾಸೆ ಹೊಂದಿದ ಭಾರತ ತಂಡದವರು ಎಎಫ್‌ಸಿ ಏಷ್ಯನ್ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ‘ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಶುಕ್ರವಾರ ಬಹರೇನ್ ವಿರುದ್ಧ ಸೆಣಸಲಿದ್ದಾರೆ. ಜಸ್ಸಿಮ್ ಬಿನ್ ಹಮಾದ್ ಕ್ರೀಡಾಂಗಣದಲ್ಲಿ ಗುಂಪಿನ ಎರಡನೇ ಲೀಗ್ ಪಂದ್ಯದಲ್ಲಿ ಆಡಲಿರುವ ಭಾರತವು ಗೆಲುವು ಪಡೆಯುವುದು ಅಗತ್ಯವಾಗಿದೆ. ಮತ್ತೊಂದು ನಿರಾಸೆಯು ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿಯುವಂತೆ ಮಾಡಲಿದೆ.

ಕೆಲವು ಸುಲಭದ ಅವಕಾಶಗಳು ಸಿಕ್ಕಾಗಲೂ ಭಾರತದವರು ಚುರುಕಾಗಿ ಪ್ರತಿಕ್ರಿಯಿಸಿರಲಿಲ್ಲ. ಆದ್ದರಿಂದ 0-4 ಗೋಲುಗಳ ಅಂತರದಿಂದ ಪರಾಭವಗೊಳ್ಳ ಬೇಕಾಯಿತು.ಬಹರೇನ್ ತಂಡದವರು ಭಾರತಕ್ಕಿಂತ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದ್ದಾರೆ. ಬಹರೇನ್ ತನ್ನ ಮೊದಲ ಪಂದ್ಯವನ್ನು 2-1 ಗೋಲುಗಳಿಂದ ದಕ್ಷಿಣ ಕೊರಿಯಾ ಎದುರು ಸೋತಿದೆ. ನಾಯಕ ಭುಟಿಯಾ, ಅಭಿಷೇಕ್ ಯಾದವ್, ಸುನಿಲ್ ಚೆಟ್ರಿ ಹಾಗೂ ಮೊಹಮ್ಮದ್ ರಫಿ ಅವರು ಬಹರೇನ್ ವಿರುದ್ಧದ ಪಂದ್ಯದಲ್ಲಿ ತಮ್ಮ ಕಾಲ್ಚಳಕ ತೋರಿದಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT