ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ಶಿಬಿರಕ್ಕೆ ಹಣ ನೀಡಲ್ಲ: ಎಸ್‌ಎಐ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಎಎಫ್‌ಸಿ ಚಾಲೆಂಜ್ ಕಪ್ ಫುಟ್‌ಬಾಲ್ ಟೂರ್ನಿಗೆ ತಯಾರಾಗಲು ದುಬೈನಲ್ಲಿ ನಡೆಯಲಿರುವ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಯಾವುದೇ ಹಣ ನೀಡುವುದಿಲ್ಲ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತಿಳಿಸಿದೆ.

`ಸರ್ಕಾರ  ಈಗ ಒಲಿಂಪಿಕ್ಸ್ ತಯಾರಿಯತ್ತ ಮಾತ್ರ ಗಮನ ಹರಿಸುತ್ತಿದೆ~ ಎಂದು ಎಸ್‌ಎಐ ಪ್ರಧಾನ ನಿರ್ದೇಶಕ ದೇಶ್ ದೀಪಕ್ ವರ್ಮ ನುಡಿದಿದ್ದಾರೆ. ಈ ಮೊದಲು ನಿಗದಿಯಾದಂತೆ ದುಬೈ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ 40 ಲಕ್ಷ ರೂ.ನೀಡಬೇಕಿತ್ತು.

`ಆದರೆ ಈಗ ಹಣ ನೀಡಲು ಸಾಧ್ಯವಿಲ್ಲ. ಏಕೆಂದರೆ ಎಲ್ಲಾ ಹಣವನ್ನು ಒಲಿಂಪಿಕ್ಸ್ ತಯಾರಿಗೆ ಮೀಸಲಿಟ್ಟಿದ್ದೇವೆ. ಈಗ ಇರುವ ಹಣವನ್ನು ಒಲಿಂಪಿಕ್ಸ್ ತಯಾರಿಗೆ ಮಾತ್ರ ವಿನಿಯೋಗಿಸಬೇಕೆಂದು ಸ್ಟೀಯರಿಂಗ್ ಸಮಿತಿ ಕೂಡ ಹೇಳಿದೆ~ ಎಂದು ವರ್ಮ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT