ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.7ರಿಂದ ಗಂಗಾಮತಸ್ಥರ ಬೃಹತ್‌ ಸಮಾವೇಶ

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜ ಅಧ್ಯಯನ ಅಕಾಡೆಮಿಯ ವತಿಯಿಂದ ಫೆ. 7 ರಿಂದ ಮೂರು ದಿನಗಳು ಗಂಗಾಮತಸ್ಥರನ್ನು ಒಂದು­ಗೂಡಿ­ಸಲು ಗುಲ್ಬರ್ಗ ಜಿಲ್ಲೆಯ ಯಾನಾಗುಂದಿಯ ಸುಕ್ಷೇತ್ರದಲ್ಲಿ ರಾಜ್ಯಮಟ್ಟದ ಬೃಹತ್‌ ಸಮಾವೇಶ­ವನ್ನು ಆಯೋಜಿಸಲಾಗಿದೆ’ ಎಂದು ಜವಳಿ, ಬಂದರು ಮತ್ತು ಒಳನಾಡು ಖಾತೆ ಸಚಿವ ಬಾಬುರಾವ್‌ ಚಿಂಚನಸೂರು ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಂದಾಜು 60 ಲಕ್ಷದಷ್ಟಿರುವ ಗಂಗಾಮತಸ್ಥ ಜನಾಂಗವು ಸಾಮಾ­ಜಿಕ­ವಾಗಿ, ಶೈಕ್ಷಣಿಕವಾಗಿ, ರಾಜ­ಕೀಯ­­ವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದದ್ದು, ಟೋಕ್ರೆಕೋಳಿ, ಕೋಲಿ, ಕೋಯ ಇತ್ಯಾದಿ ಹೆಸರು­ಗಳಿಂದ ಕರೆಸಿಕೊಂಡು ಹರಿದು ಹಂಚಿಹೋಗಿದೆ’ ಎಂದರು.

‘ಹರಿದು ಹಂಚಿಹೋಗಿರುವ ಗಂಗಾಮತಸ್ಥ ಸಮಾಜವನ್ನು ಒಂದು­ಗೂಡಿಸಲು ಈ ಸಮಾವೇಶ ಸಹಾಯಕ­ವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಕಾರ್ಯಕ್ರಮವನ್ನು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿ­ಸಲಿದ್ದು, ಕೇಂದ್ರ ಸಚಿವ­ರಾದ ವೀರಪ್ಪ ಮೊಯಿಲಿ, ಮಲ್ಲಿ­ಕಾರ್ಜುನ ಖರ್ಗೆ ಮತ್ತಿತರರು ಭಾಗವಹಿಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT