ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಡ್ ಕಪ್: ಪ್ಲೇ ಆಫ್‌ಗೆ ಅರ್ಹತೆ ಪಡೆದ ಭಾರತ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಶೆನ್‌ಜೆನ್, ಚೀನಾ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಫೆಡ್ ಕಪ್ ಟೆನಿಸ್ ಟೂರ್ನಿಯ ಪ್ಲೇ ಆಫ್ ಹಂತದಲ್ಲಿ ಪೈಪೋಟಿ ನಡೆಸಲು ಅರ್ಹತೆ ಪಡೆದಿದ್ದು, ಏಷ್ಯಾ ಒಸಿನಿಯಾ ಗುಂಪು-1ರಲ್ಲಿ ಆಡಲು ಬಡ್ತಿ ಪಡೆಯುವ ನಿರೀಕ್ಷೆ ಇದೆ.

ಶುಕ್ರವಾರ ನಡೆದ ಕೊನೆಯ ಸುತ್ತಿನ ಪಂದ್ಯದಲ್ಲಿ ಭಾರತ 2-1ರಲ್ಲಿ  ಪಿಲಿಪ್ಪಿನ್ಸ್ ಎದುರು ಗೆಲುವು ಪಡೆಯಿತು. ಈ ಮೂಲಕ `ಬಿ~ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.

ಮೊದಲ ಪಂದ್ಯದಲ್ಲಿ ಋತುಜಾ ಭೋಸಲೆ 6-2, 6-3ರಲ್ಲಿ ತಮಿತಾ ನುಯೆನ್ ಎದುರು ಗೆದ್ದು 1-0 ಮುನ್ನಡೆ ತಂದುಕೊಟ್ಟರು.

ಆದರೆ ಎರಡನೇ ಪಂದ್ಯದಲ್ಲಿ ಪ್ರೇರಣಾ ಭಾಂಬ್ರಿ 6-3, 4-6, 2-6ರಲ್ಲಿ ಅನಾ ಕ್ಲಾರಿಸ್ ಪ್ಯಾಟ್ರಿಮೊನಿಯಾ ಎದುರು ಪರಾಭವಗೊಂಡರು.

ಆದರೆ ನಿರ್ಣಾಯಕ ಪಂದ್ಯದಲ್ಲಿ ಇಶಾ ಲಖಾನಿ ಜೊತೆಗೂಡಿ ಆಡಿದ ಸಾನಿಯಾ ಮಿರ್ಜಾ ಡಬಲ್ಸ್‌ನಲ್ಲಿ 6-0, 6-1ರಲ್ಲಿ ಪ್ಯಾಟ್ರಿಮೊನಿಯಾ ಹಾಗೂ ತಮಿತಾ ಅವರನ್ನು ಸೋಲಿಸಿದರು. ಈ ಪಂದ್ಯವು ಏಕಪಕ್ಷೀಯವಾಗಿ ಕೊನೆಗೊಂಡಿತು.

ಭಾರತ ಮುಂದಿನ ತನ್ನ ಪಂದ್ಯದಲ್ಲಿ `ಎ~ ಗುಂಪಿನ ವಿಜೇತರಾದ ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಕರ್ನಾಟಕದ ಶರ್ಮದಾ ಬಾಲು ಅವರು ಕೂಡ ಈ ತಂಡದಲ್ಲಿದ್ದು ಆಡುವ ಅವಕಾಶಕ್ಕಾಗಿ ಕಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT