ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 2, ಬುಧವಾರ

Last Updated 1 ಫೆಬ್ರುವರಿ 2011, 20:15 IST
ಅಕ್ಷರ ಗಾತ್ರ

 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ: ದಿ ಚಾನ್ಸರಿ ಪೆವಿಲಿಯನ್ ಹೋಟೆಲ್, ರೆಸಿಡೆನ್ಸಿ ರಸ್ತೆ. ಬಸ್ ದಿನಾಚರಣೆಯ ಮೊದಲನೇ ವಾರ್ಷಿಕೋತ್ಸವ ಸಮಾರಂಭ. ಉದ್ಘಾಟನೆ- ಸಚಿವ ಆರ್. ಅಶೋಕ, ಅತಿಥಿಗಳು- ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಕುಲಪತಿ ಡಾ.ಎಚ್. ಮಹೇಶಪ್ಪ, ಅರಣ್ಯ ಮತ್ತು ಪರಿಸರ ವಿಜ್ಞಾನ ಶಾಸ್ತ್ರ ಇಲಾಖೆಯ ನಿಕಟಪೂರ್ವ ಕಾರ್ಯದರ್ಶಿ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ. ಇಕೋವಾಚ್ ಸಂಸ್ಥೆಯ ಅಧ್ಯಕ್ಷ ಸುರೇಶ್ ಹೆಬ್ಳೀಕರ್, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ. ಸಂಜೆ 6.30.

ಸಂಕ್ರಮಣ ಪ್ರಕಾಶನ: ನ್ಯಾಷನಲ್ ಕಾಲೇಜು, ಜಯನಗರ. ಕನ್ನಡ ಸಾಹಿತಿಗಳ ಮಾಹಿತಿ ಕೈಪಿಡಿ ಬಿಡುಗಡೆ- ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ. ಅತಿಥಿಗಳು- ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್, ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, ಸಾಹಿತಿಗಳಾದ ‘ಪುಸ್ತಕಮನೆ’ ಹರಿಹರ ಪ್ರಿಯ.  ಕೈಪಿಡಿ ಸಂಕಲನ- ನೀಲಾ ಪಾಟೀಲ.  ಬೆಳಿಗ್ಗೆ 11.

ಸದ್ಭವನಾ ಪ್ರತಿಷ್ಠಾನ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ವಾಡಿಯಾ ರಸ್ತೆ, ಬಸವನಗುಡಿ. ‘ಸ್ವಯಂ ಸಮ್ಮೋಹನಾ ಚಿಕಿತ್ಸೆಯ ಮೂಲಕ ಒತ್ತಡ ಮುಕ್ತ ಜೀವನ’ ಕುರಿತು ಕಾರ್ಯಾಗಾರ- ಡಾ. ಎಂ.ಕಿರಣ್ ಕುಮಾರ್ ಪ್ರಭೂಜಿ. ಸಂಜೆ 6.15. 

ಐ-ಟೆಕ್‌ಲಾ ಸಂಘ: ತಾಜ್ ವೆಸ್ಟ್ ಎಂಡ್. ರೇಸ್‌ಕೋರ್ಸ್ ರಸ್ತೆ. ಅಂತರರಾಷ್ಟ್ರೀಯ ಸಮ್ಮೇಳನದ ಪ್ರಯುಕ್ತ ಚಿತ್ರಕಲಾ ಪ್ರದರ್ಶನ. ಸಂಜೆ 7.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ: ಸಮ್ಮೇಳನ ಸಭಾಂಗಣ, ಎಫ್‌ಕೆಸಿಸಿಐ, ಕೆ.ಜಿ.ರಸ್ತೆ. ‘ವಿದ್ಯುತ್ ಪೂರೈಕೆಯಲ್ಲಿ ಆಯೋಗದ ಪಾತ್ರ’ ಕುರಿತು ಉಪನ್ಯಾಸ- ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್. ಶ್ರೀನಿವಾಸ ಮೂರ್ತಿ. ಸಂಜೆ 5.

ಶೇಷಾದ್ರಿಪುರ ವಾಣಿಜ್ಯ ಅಧ್ಯಯನ ಅಕಾಡೆಮಿ: ಕೆ.ಎಸ್. ಟೌನ್. ಸಾಂಸ್ಕೃತಿಕ ಮತ್ತು ಮ್ಯಾನೇಜ್‌ಮೆಂಟ್ ಉತ್ಸವದ ಪ್ರಯುಕ್ತ ‘ವ್ಯಕ್ತಿತ್ವ ನಿರ್ಮಾಣ’ ಕುರಿತು ಉಪನ್ಯಾಸ-  ಟ್ರಸ್ಟಿ ಕೆ. ವೀರಭದ್ರಯ್ಯ. ಸಂಜೆ 8.

ಹಿಮಾಲಯನ್ ವ್ಯಾಲಿ ಆಫ್ ಫ್ಲವರ್ಸ್‌: ಯವನಿಕ, ನೃಪತುಂಗ ರಸ್ತೆ. ಡಾ.ಕೆ.ಆರ್. ಕೇಶವಮೂರ್ತಿ ಅವರ ‘ ಫ್ಲೋರಲ್ ಗ್ಯಾಲರಿ ಆಫ್ ದಿ ವ್ಯಾಲಿ ಆಫ್ ಫ್ಲವರ್ಸ್‌’ ಪುಸ್ತಕ ಬಿಡುಗಡೆ- ಬೆಂಗಳೂರು ವಿವಿ ಕುಲಪತಿ ಪ್ರೊ. ಎನ್. ಪ್ರಭುದೇವ್. ಅಧ್ಯಕ್ಷತೆ- ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್. ಸದಾಶಿವಯ್ಯ. ಸಂಜೆ 6.30.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕನ್ನಡ ಭವನ, ಜೆ.ಸಿ.ರಸ್ತೆ. ಯುವ ಸೌರಭ. ಜಾನಪದ ನೃತ್ಯ- ಆರಂಭ ಟ್ರಸ್ಟ್ ವಿದ್ಯಾರ್ಥಿಗಳಿಂದ. ಸಂಜೆ 6.30.

ಶ್ರೀರಾಮ ಲಲಿತ ಕಲಾ ಮಂದಿರ: ಗಾಯನ ಸಮಾಜ, ಕೆ.ಆರ್.ರಸ್ತೆ. ಗಾಯನ-ಆರ್.ಎ.ರಮಾಮಣಿ. ಪಿಟೀಲು- ಸಿ.ಎನ್.ಚಂದ್ರಶೇಖರ್. ಮೃದಂಗ- ಆನೂರು ಅನಂತ ಕೃಷ್ಣ ಶರ್ಮಾ. ಘಟಂ-ಕಾರ್ತಿಕ್ ಮಣಿ. ಸಂಜೆ 5.45.

ಧಾರ್ಮಿಕ  ಕಾರ್ಯಕ್ರಮ
ಶ್ರೀಕೃಷ್ಣ ಮತ್ತು ಶ್ರೀರಾಘವೇಂದ್ರಸ್ವಾಮಿ ಸೇವಾ ಪ್ರತಿಷ್ಠಾನ
: ಗಿರಿನಗರ. ದಾಸವಾಣಿ ಕಾರ್ಯಕ್ರಮ- ಪ್ರಸನ್ನ ಮತ್ತು ದೀಪ್ತಿ ಪ್ರಸನ್ನ . ಬೆಳಿಗ್ಗೆ 9.30.

ರುಕ್ಮಿಣಿ ಸಮೇತ ಅನುಗ್ರಹ ವಿಠಲ ದೇವಸ್ಥಾನ: ಲಕ್ಷ್ಮೀನರಸಿಂಹ ಗುಡ್ಡ, ಬೆಮಲ್ ಬಡಾವಣೆ. 3ನೇ ಹಂತ. ಹರಿದಾಸ ನಗರ. ರಾಜರಾಜೇಶ್ವರಿನಗರ. ಧನ್ವಂತರಿ ಹೋಮ. ಸತ್ಯನಾರಾಯಣ ಪೂಜೆ, ಸಾಮೂಹಿಕ ಶ್ರೀನಿವಾಸ ಕಲ್ಯಾಣೋತ್ಸವ. ಬೆಳಿಗ್ಗೆ 10.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ:  ಬಸವನಗುಡಿ. ಪ್ರೇಮ ಲೀಲಾ ಪತ್ತಿ ಪಾಂಡುರಂಗ ದತ್ತಿಯಡಿ ‘ದಾಸವಾಣಿ’ ಕಾರ್ಯಕ್ರಮ. ಗಾಯನ-ಶಶಿಧರ್ ಕೋಟೆ. ವ್ಯಾಖ್ಯಾನ-ಡಾ. ಗುರುರಾಜ ಕರ್ಜಗಿ.  ಸಂಜೆ 6.

ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ: ಬಿಎಂಎಸ್ ಕಾಲೇಜು ಸಮೀಪ, ಬಸವನಗುಡಿ.  ‘ಮಹಾಭಾರತ’ ಕುರಿತು ಪ್ರವಚನ-ಬನ್ನಂಜೆ ಗೋವಿಂದಾಚಾರ್ಯ. ಸಂಜೆ 6.30.

ರಾಘವೇಂದ್ರ ಸೇವಾ ಸಮಿತಿ: 6ನೇ ಅಡ್ಡರಸ್ತೆ, ಸುಧೀಂದ್ರ ನಗರ, ಮಲ್ಲೇಶ್ವರ. ಮಧ್ವನವರಾತ್ರಿ ಮಹೋತ್ಸವ. ಸಂಜೆ 6.30.

ಕಿಂಕಿಣಿ ನೃತ್ಯಶಾಲೆ: ಜೆಎಸ್‌ಎಸ್ ಸಭಾಂಗಣ, 1ನೇ ಮುಖ್ಯರಸ್ತೆ, ಜಯನಗರ 8ನೇ ಬ್ಲಾಕ್. 27ನೇ ರಾಷ್ಟ್ರೀಯ ಕಿಂಕಿಣಿ ನೃತ್ಯೋತ್ಸವ. ಮೋಹಿನಿಯಾಟ್ಟಂ-ವೀಣಾ ಮತ್ತು ಧನ್ಯ ಸಹೋದರಿಯರಿಂದ. ಭರತನಾಟ್ಯ- ಪ್ರವೀಣ್ ಕುಮಾರ್. ಸಂಜೆ 6.15.

ಪರಮಾರ್ಥ ವಿಚಾರ ಸಂಘ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. ‘ಅಧ್ಯಾಸ ಭಾಷ್ಯಂ’ ಕುರಿತು ಉಪನ್ಯಾಸ- ಕೆ.ಜಿ.ಸುಬ್ರಾಯ ಶರ್ಮಾ. ಬೆಳಿಗ್ಗೆ 7.45.

ರಾಮಕೃಷ್ಣ ಸೇವಾ ಟ್ರಸ್ಟ್: ಗಣೇಶ ದೇವಾಲಯ, ಎಂ.ಸಿ.ಬಡಾವಣೆ, ವಿಜಯನಗರ. ಭಗವದ್ಗೀತೆ ಸಾಂಖ್ಯ ಯೋಗ ಕುರಿತು ಪ್ರವಚನ- ಸ್ವಾಮಿ ಅಭಯ ಚೈತನ್ಯ. ಸಂಜೆ 6.30.

ತ್ರಿವೇಣಿ ಕಲಾ ಸಂಘ ಮತ್ತು ಗುರುಕೃಪಾ ಗಮಕ ಮಂಡಳಿ: ಗಮಕ ಸಪ್ತಾಹ ಮತ್ತು ಕುಮಾರವ್ಯಾಸ ಜಯಂತ್ಯುತ್ಸವದಲ್ಲಿ ದೇವರ ನಾಮ. ಬೆಳಿಗ್ಗೆ 11.30.

ಅಖಿಲ ಭಾರತ ಹರಿದಾಸ ಸಮ್ಮೇಳನ ಟ್ರಸ್ಟ್:
 ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ತರಗುಪ್ಪೆ. ದೇವರನಾಮ-  ಕಿರಣ್ಮಯಿ ಜಿ ವಿಠಲ್.  ‘ಪುರಂದರೋಪನಿಷತ್’ ಕುರಿತು ಉಪನ್ಯಾಸ- ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ. ಸಂಜೆ 5.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT