ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಲಿಕ್ಸ್ ವೇಗದ ದಾಖಲೆ ದೃಢ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್):  ಬಿಸಿಗಾಳಿ ಬಲೂನಿನಲ್ಲಿ 39 ಕಿ.ಮೀ. ಎತ್ತರಕ್ಕೇರಿ ಶಬ್ದದ ವೇಗವನ್ನೂ ಮೀರಿಸಿ ಭೂಮಿಗೆ ಧುಮುಕಿದ ಆಸ್ಟ್ರಿಯಾದ ಸ್ಕೈಡೈವರ್  ಫೆಲಿಕ್ಸ್ ಬಾಮ್‌ಗಾರ್ಟ್ನರ್ ನಿರ್ಮಿಸಿರುವ ಹೊಸ ವಿಶ್ವ ದಾಖಲೆ ದೃಢಪಟ್ಟಿದೆ.

ಶಬ್ದದ ವೇಗ ಗಂಟೆಗೆ 1,236 ಕಿ.ಮೀ. ಇದ್ದರೆ, ಫೆಲಿಕ್ಸ್ ಗಂಟೆಗೆ 1,342 ಕಿ.ಮೀ ವೇಗದಲ್ಲಿ ಭೂಮಿ ತಲುಪಿರುವುದು ಸಾಬೀತಾಗಿದೆ ಎಂದು `ಬಿಬಿಸಿ~ ವರದಿಮಾಡಿದೆ.

1960ರಲ್ಲಿ ಜೋಸೆಫ್ ಕಿಟ್ಟಿಂಜರ್ ಎಂಬ ಸ್ಕೈಡೈವರ್ 1,02,500 ಅಡಿ ಎತ್ತರದಿಂದ ಜಿಗಿದು ದಾಖಲೆ ನಿರ್ಮಿಸಿದ್ದರು. ಅದನ್ನು ಈಗ ಫೆಲಿಕ್ಸ್ ಮುರಿದಿದ್ದಾರೆ.

`ಇಂಥ ವಿಶೇಷ ಸಾಧನೆ ಮಾಡಿದಾಗ ಮನದಲ್ಲಿ ವಿನಮ್ರ ಭಾವ ಮೂಡುತ್ತದೆ. ಇನ್ನೆಂದೂ ದಾಖಲೆ ನಿರ್ಮಿಸುವ ಆಲೋಚನೆ ಬರುವುದೇ ಇಲ್ಲ. ಬದುಕುಳಿದರೆ ಸಾಕು ಎಂಬಂತಾಗುತ್ತದೆ~ ಎಂದು ಬಾಮ್‌ಗಾರ್ಟ್ನರ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT