ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್ ಬುಕ್‌ನಲ್ಲಿ ಹೇಗಿಡಲಿ ಗುಲಾಬಿ ಪಕಳೆ?

ಹೊಸ ವರ್ಷದ ಗ್ರೀಟಿಂಗ್ ಕಾರ್ಡ್ ವಿನಿಮಯ ಮಂಕಾಯಿತೆ!
Last Updated 2 ಜನವರಿ 2014, 9:55 IST
ಅಕ್ಷರ ಗಾತ್ರ

ತುಮಕೂರು: ಹಿಂದೆ ಹೊಸ ವರ್ಷದ ಗ್ರೀಟಿಂಗ್ಸ್‌ ಕಾರ್ಡ್‌ಗಳ ಸುಗ್ಗಿ ಶುರು­ವಾಗುತ್ತಿತ್ತು. ತಿಂಗಳ ಮುಂಚೆಯೇ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದ್ದ ಸಂಸ್ಕೃತಿ ಇಂದು ತೆರೆಗೆ ಸರಿಯುತ್ತಿವೆ.

ಎಸ್‌್ಎಂಎಸ್‌್, ಇ–ಮೇಲ್‌ ಭರಾಟೆ ಮಧ್ಯೆ ಕಳೆದು ಹೋಗುತ್ತಿರುವ ಗ್ರೀಟಿಂಗ್ಸ್‌ ಕಾರ್ಡ್‌ ಉದ್ಯಮದ  ಮಧ್ಯೆ ಶುಭಾಶಯಕ್ಕೆ ‘ಕಾರಣ ನಿಮ್ಮದು– ಕಾಗದ ನಮ್ಮದು’ ಎಂಬ ಧ್ಯೇಯ­ಯೊಂ­ದಿಗೆ ಕಂಪೆನಿಗಳು ಹುಟ್ಟಿ­ಕೊಂಡಿವೆ.

ಶಾಲೆಯ ಮಕ್ಕಳು ತಮ್ಮ ಗೆಳೆಯರಿಗೆ ಶುಭಾಶಯ ಕೋರಲು ತಮ್ಮ ನೆಚ್ಚಿನ ಚಿತ್ರನಟ, ನಟಿಯ ಚಿತ್ರ ಕಲೆ ಹಾಕು­ವುದು ಮಾಮೂಲಿ. ಅವುಗಳ ಬೆಲೆ ಕನಿಷ್ಠ ಎರಡು ರೂಪಾಯಿ ಇರು­ತ್ತಿತ್ತು.

ಅಯ್ಯೋ, ನಾವ್‌ ಚಿಕ್ಕವರಿದ್ದಾಗ ಮನೆಯಲ್ಲಿ ಗಲಾಟೆ ಮಾಡಿ ಹೊಸ ವರ್ಷದ ಗ್ರೀಟಿಂಗ್ಸ್‌್‌ಗೆ ಹಣ ಪಡೆದುಕೊಳ್ಳುತ್ತಿದ್ದೆವು. ತಳ್ಳೊ ಗಾಡಿ­ಯಲ್ಲಿ ನವ ನವೀನ ಗ್ರೀಟಿಂಗ್ಸ್‌ಗಳನ್ನು ಇಟ್ಟು ಮಾರುತ್ತಿದ್ದರು. ಈಗ ಅದೆಲ್ಲವೂ ಮಾಯಾವಾಗಿವೆ. ಗ್ರೀಟಿಂಗ್ಸ್‌ ಜಾಗ­ದಲ್ಲಿ ವಾಟ್ಸ್‌ ಅಪ್‌್, ಫೇಸ್‌ಬುಕ್‌ಗಳು ಬಂದು ಕುಳಿತಿವೆ. ಅನಿಮೇಟೆಡ್‌ ಗ್ರೀಟಿಂಗ್ಸ್‌ ಕಾರ್ಡ್‌ಗಳನ್ನು ಉಚಿತವಾಗಿ ನೀಡುವ ವೆಬ್‌ಸೈಟ್‌ಗಳೂ ಇವೆ.

ಮದುವೆ, ವಾರ್ಷಿಕೋತ್ಸವ, ಹುಟ್ಟು­ಹಬ್ಬ, ಗೃಹ ಪ್ರವೇಶ, ಪ್ರೇಮ ನಿವೇದನೆ ಎಲ್ಲಕ್ಕೂ ಸಿದ್ಧ ಗ್ರೀಟಿಂಗ್ಸ್‌ಗಳು ಸಿಗುತ್ತಿವೆ. ಗ್ರೀಟಿಂಗ್ಸ್‌ನಲ್ಲಿ ನಿಮ್ಮದೇ ಶುಭಾ­ಶಯದ ಪದಗಳನ್ನು ಪೋಣಿಸುವ ಅವಕಾಶವಿದೆ.

ಸಿದ್ಧಗೊಂಡಿರುವ ಗ್ರೀಟಿಂಗ್ಸ್‌ ನಿಮಗೆ ಇಷ್ಟವಾಗದೆ ಹೋದರೆ ನಿಮ್ಮದೇ ಚಿತ್ರವನ್ನು ಉಪಯೋಗಿಸಿಕೊಂಡು ಚೆಂದದ ಪತ್ರ ಸಿದ್ಧಪಡಿಸಲು ಅವಕಾಶ ಇರುವಾಗ ನಾವೇಕೆ ಮಾರುಕಟ್ಟೆಯಲ್ಲಿ ಅಲೆಯಬೇಕು ಎನ್ನುವುದು ಎಂಜನಿ­ಯರಿಂಗ್‌ ವಿದ್ಯಾರ್ಥಿಯೊಬ್ಬರ ಪ್ರಶ್ನೆ.

ಇ–ಮೇಲ್‌, ವಾಟ್ಸ್‌ ಅಪ್‌ನಲ್ಲಿ ಶುಭಾಶಯ ತಿಳಿಸುವುದು ಸುಲಭ­ವಾದರೂ ಅದು ನಮ್ಮತನವನ್ನು ತೋರಿ­ಸುವುದಿಲ್ಲ. ಎಷ್ಟೋ ವರ್ಷಗಳ ಹಿಂದೆ ಗೆಳತಿ ನೀಡಿದ್ದ ಗ್ರೀಟಿಂಗ್ಸ್‌ ಕಾರ್ಡ್‌ ಇನ್ನೂ ನನ್ನ ಬಳಿ ಜೋಪಾನವಾಗಿದೆ. ಅದನ್ನು ನೋಡಿದಾಗಲೆಲ್ಲ ನೆನಪುಗಳು ಕಾಡುತ್ತವೆ, ಚಿಕ್ಕ ವಯಸ್ಸಿನ ತುಂಟಾಟ­ಗಳೆಲ್ಲ ಬರೆದ ಬರಹಕ್ಕೆ ಬೆಲೆ ಕಟ್ಟಲು ಸಾಧ್ಯವೇ... ಎಂದು ಅಮೂಲ್ಯ ನೆನ­ಪಿನ ಬುತ್ತಿಯನ್ನು ತೆರೆದಿಟ್ಟವರು ಇದ್ದಾರೆ.

ಹೊಸವರ್ಷಕ್ಕೆ ಶುಭಾಶಯದ ಗ್ರೀಟಿಂಗ್ಸ್‌ ಕಳುಹಿಸುವುದನ್ನು ಹೈಸ್ಕೂ­ಲ್‌­­ನಲ್ಲೆ ಬಿಟ್ಟೆ, ಆಗ ನೀಡಿದ್ದ­ವನ್ನು ಸಂಗ್ರಹಿಸಬೇಕು ಎನ್ನುವ ಬುದ್ಧಿ ಇರ­ಲಿಲ್ಲ, ಈಗ ಯಾರಾದರೂ ಗ್ರೀಟಿಂಗ್ಸ್‌ ನೀಡಿದರೆ ಅದನ್ನು ಜೋಪಾನ ಮಾಡುವ ಮನಸ್ಸಿದೆ ಆದರೂ ಈಗ ನೀಡು­ವವರೆ ಇಲ್ಲ ಎನ್ನುವುದು ಕಾನೂ­ನು ವಿದ್ಯಾರ್ಥಿ ಶಶಿ ಅವರ ಮಾತು.

ದೂರದಲ್ಲಿರುವ ಗೆಳೆಯರಿಗೆ ಕಳೆದ ನಾಲ್ಕು ವರ್ಷದಿಂದ ಶುಭಾಶಯದ ಕಾಗದ­ಗಳನ್ನು ಕಳುಹಿಸುತ್ತಿದ್ದೇನೆ, ಅವರೂ ನನಗೆ ಶುಭಾಶಯದ ಕಾಗದ ಕಳುಹಿಸುತ್ತಾರೆ. ಎಷ್ಟೋ ವರ್ಷಗಳಿಂದ ದೂರ ಇರುವ ಗೆಳೆಯನ ಮುಖ ಕೊನೆ ದಿನ ನೋಡಿದ್ದ ಹಾಗೆ ಅನ್ನಿಸುತ್ತದೆ. ಅವನೊಂದಿಗಿನ ನೆನೆಪುಗಳೊಂದಿಗೆ ದೂರ ಇದ್ದಾನೆ ಅನ್ನುವ ನೋವು ಕಾಡು­ತ್ತದೆ. ಈಗ ಅವರೊಂದಿಗೆ ಫೇಸ್‌­ಬುಕ್‌ನಲ್ಲಿ ಚಾಟ್‌, ಶೇರ್‌್ ಮಾಡೋದು ನಡೀತಿದೆ.

ಪರೀಕ್ಷೆ ಇರೋ­ದ್ರಿಂದ ಗ್ರೀಟಿಂಗ್ಸ್‌ ಕೊಂಡಿಲ್ಲ, ಪ್ರತಿ ವರ್ಷ ಕಳುಹಿಸುವ ಹಾಗೆ ಈ ವರ್ಷವೂ ಕಳುಹಿಸುತ್ತೇನೆ. ಏನೇ ಬದ­ಲಾದರೂ ನಮ್ಮ ನಡುವಿನ ಬಾಂಧ­ವ್ಯದ ನೆನೆಪಾಗಿ ಉಳಿಯುವುದು ಇದು ಒಂದೇ ತಾನೆ ಎನ್ನುತ್ತಾರೆ ಸಿದ್ಧಾರ್ಥ ಕಾಲೇಜಿನ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿ ವೇದಾನಂದ್‌.

ವಾಟ್ಸ್‌ಅಪ್‌ಗೆ ಹ್ಯಾಟ್ಸ್‌ಆಫ್‌
ಕೈಯಲ್ಲಿ ಅಂಡ್ರಾಯ್ಡ್‌ ಮೊಬೈಲ್‌ ಇದ್ದರೆ ಸಾಕು, ವಾಟ್ಸ್‌ ಅಪ್‌ ಅನ್ನು ನೀವು ಬಳಕೆ ಮಾಡಬಹುದು. ಎಸ್‌ಎಂಎಸ್‌ ಟಾರಿಫ್‌ ಪ್ಲಾನ್‌ ಹೆಚ್ಚಾದ ಮೇಲೆ ಕಂಪೆನಿಗಳ ಹೆಚ್ಚಿನ ಎಸ್‌ಎಸ್‌ಎಂಗಳಿಗಾಗಿ ಕೈಕಟ್ಟಿದ್ದ ಮೊಬೈಲಿಗರು ಈಗ ಫೇಸ್‌ಬುಕ್‌, ವಾಟ್ಸ್‌ ಅಪ್‌ ಬಳಕೆಯಿಂದ ಖುಷಿಯಾಗಿದ್ದಾರೆ. ವಿಡಿಯೊ, ಆಡಿಯೋ, ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು. ಸ್ನೇಹಿತರೊಂದಿಗೆ ಮುಖಾಮುಖಿ ಮಾತನಾಡಿದ ಅನುಭವ ನೀಡುವುದರಿಂದ ಗ್ರೀಟಿಂಗ್ಸ್‌ ಬಳಕೆ ಕಡಿಮೆಯಾಗುತ್ತಿದೆ.
–ಸನೃತ, ವಿದ್ಯಾರ್ಥಿನಿ, ತುಮಕೂರು

ಎಲ್ಲ ಲೆಕ್ಕ ಸರಿಯಿರಲಿ...
ಕಾಡುವ ಭಾವನೆಗಳನ್ನು  ಅಕ್ಷರದಲ್ಲದೆ ಬೇರೆಲ್ಲಿ ವ್ಯಕ್ತಪಡಿಸಲಿ
2+0+1=4 ಹೊಸ ವರ್ಷದಲ್ಲಿ ನಿಮ್ಮ ಎಲ್ಲ ಲೆಕ್ಕ ಸರಿಯಾಗಿರಲಿ
ಅನ್ನುವುದನ್ನು ಬರೆದಿಟ್ಟ ಕಾಗದದ ಸಾಲು ಮರೆಯುವುದು ಹೇಗೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT