ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ಗೆ ಈಗ ಎಂಟರ ಹರೆಯ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹ್ಯೂಸ್ಟನ್ (ಪಿಟಿಐ): ವಿಶ್ವದ ಜನಪ್ರಿಯ ಸಾಮಾಜಿಕ ಸಂವಹನ ತಾಣ ಫೇಸ್ ಬುಕ್‌ಗೆ ಈಗ ಎಂಟರ ಹರೆಯ.
ಜಗತ್ತಿನಾದ್ಯಂತ ಸುಮಾರು 84.5 ಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಆರಂಭಗೊಂಡಿದ್ದು 2004ರ ಫೆಬ್ರುವರಿ 4ರಂದು. ಈ ವರ್ಷದ ಆಗಸ್ಟ್ ವೇಳೆಗೆ ತಾಣದ ಕ್ರಿಯಾಶೀಲ ಬಳಕೆದಾರರ ಸಂಖ್ಯೆ 100 ಕೋಟಿ ತಲುಪುವ ನಿರೀಕ್ಷೆ ಇದೆ.

ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಜುಕರ್‌ಬರ್ಗ್ ಅವರು ತಾಣದ ಸಂಸ್ಥಾಪಕ ಎಂದು ಕರೆಸಿಕೊಂಡರೂ, ಕಂಪೆನಿಗೆ  ಎಡ್ವಾರ್ಡೊ ಸಾವೆರಿನ್, ಡಸ್ಟಿನ್ ಮೊಸ್ಕೊವಿಟ್ಜ್ ಮತ್ತು ಕ್ರಿಸ್ ಹೂಘ್ಸ್ ಎಂಬ ಮೂವರು ಸಹಸಂಸ್ಥಾಪಕರಿದ್ದಾರೆ. ಇವರು ಹಾರ್ವರ್ಡ್ ವಿವಿಯಲ್ಲಿ ಜುಕರ್‌ಬರ್ಗ್ ಅವರ ಸಹಪಾಠಿಗಳಾಗಿದ್ದರು.
ಆರಂಭದಲ್ಲಿ ಈ ನಾಲ್ವರು ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಳಕೆಗಾಗಿ ಮಾತ್ರ ಈ ತಾಣವನ್ನು ಆರಂಭಿಸಿದ್ದರು. ಆದರೆ ಬಳಿಕ ಸೇವೆಯನ್ನು ಇತರ ಕಾಲೇಜುಗಳಿಗೂ ವಿಸ್ತರಿಸಲಾಯಿತು. ಕ್ರಮೇಣ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೂ ತಾಣವನ್ನು ಬಳಸುವ ಅವಕಾಶ ಕಲ್ಪಿಸಲಾಯಿತು.

ಸಾರ್ವಜನಿಕರ ಬಳಕೆಗೆ ಮುಕ್ತವಾಗುವ ಮುನ್ನ ತಾಣವು `ದಿ ಫೇಸ್‌ಬುಕ್. ಕಾಮ್~ ಎಂಬ ಹೆಸರನ್ನು ಹೊಂದಿತ್ತು. 2008ರ ಫೆಬ್ರುವರಿ 4ರಂದು ಮಾರ್ಕ್ ಜುಕರ್‌ಬರ್ಗ್  `ಫೇಸ್‌ಬುಕ್~ ಎಂದು ಮರುನಾಮಕರಣ ಮಾಡಿದರು.
`ಫೇಸ್‌ಬುಕ್~  ಜುಕರ್ ಬರ್ಗ್‌ಗೆ ಖ್ಯಾತಿ ತಂದು ಕೊಡುವುದರ ಜೊತೆಗೆ ಅತಿ ಕಿರಿಯ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಿಸಿದೆ.

ಭಾರತ: ಅತಿ ವೇಗದ ಮಾರುಕಟ್ಟೆ
ನವದೆಹಲಿ (ಐಎಎನ್‌ಎಸ್):
ಫೇಸ್‌ಬುಕ್‌ನ ಆಂತರಿಕ ಅಂಕಿ ಅಂಶ ವಿಶ್ಲೇಷಕರ ಪ್ರಕಾರ, ಅಮೆರಿಕ ಮತ್ತು ಇಂಡೋನೇಷ್ಯಾ ನಂತರ ಭಾರತ ಈ ಸಾಮಾಜಿಕ ಜಾಲತಾಣದ 3ನೇ ಅತಿದೊಡ್ಡ ಮಾರುಕಟ್ಟೆಯಾಗಿದೆಯಂತೆ.  ಪ್ರಸ್ತುತ ಇಲ್ಲಿ 3.46 ಕೋಟಿ ಜನ ಫೇಸ್‌ಬುಕ್ ಬಳಸುತ್ತಿದ್ದಾರಂತೆ.

ಹಾಗೆಯೇ ಭಾರತ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ 2ನೇ ಮಾರುಕಟ್ಟೆಯೂ ಹೌದು. ಈ ದೇಶದಲ್ಲಿ ಫೇಸ್‌ಬುಕ್ ಬಳಕೆದಾರರು ವಾರ್ಷಿಕ ಶೇ 162.4ರ ದರದಲ್ಲಿ ಹೆಚ್ಚುತ್ತಿದ್ದು, ಬ್ರೆಜಿಲ್ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT