ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಬರೆವ ಮುನ್ನ ಯೋಚಿಸಿ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಪಟ್ನಾ:  ನೀವು ಸರ್ಕಾರಿ ನೌಕರರೇ? ಹಾಗಿದ್ದರೆ ಫೇಸ್‌ಬುಕ್‌ನ್ಲ್ಲಲಿ ನಿಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಬರೆಯುವ ಮುನ್ನ ಸಾಕಷ್ಟು ಬಾರಿ ಯೋಚಿಸಿ. ಇಲ್ಲದಿದ್ದಲ್ಲಿ ಬಿಹಾರದ ಅರುಣ್ ನಾರಾಯಣ್ ಮತ್ತು ಮುಸಾಫಿರ್ ಬೈತಾ ಅವರಿಗೆ ಬಂದ ಗತಿಯೇ ನಿಮಗೂ ಬರಬಹುದು.

ಬಿಹಾರ ವಿಧಾನ ಪರಿಷತ್‌ಗೆ ಸೇರಿದ ಹಿಂದಿ ಪ್ರಕಟಣೆ ಇಲಾಖೆಯ ಅಧಿಕಾರಿಗಳಾದ ಇವರು ಫೇಸ್‌ಬುಕ್‌ನಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಅಸಾಂವಿಧಾನಿಕ ಪದಗಳನ್ನು ಬಳಸಿದ್ದರು ಎಂಬ ಆರೋಪದ ಮೇಲೆ ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಜೆಡಿ (ಯು) ಶಾಸಕ ಪ್ರೇಮ್ ಕುಮಾರ್ ಮಣಿ ಅವರನ್ನು ಪರಿಷತ್ ಸದಸ್ಯತ್ವದಿಂದ ಉಚ್ಚಾಟಿಸಿದ  ಪರಿಷತ್ ಅಧ್ಯಕ್ಷ ತಾರಾಕಾಂತ್ ಝಾ ಅವರ ಕ್ರಮವನ್ನು ಅರುಣ್ ಪ್ರಶ್ನಿಸಿದ್ದರು. ಜತೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಯಾರಾದರೂ ನಡೆದುಕೊಂಡರೆ ಖಂಡಿತವಾಗಿಯೂ ಅವರು ತೊಂದರೆಗೆ ಸಿಲುಕುತ್ತಾರೆ ಎಂದು ಬರೆದಿದ್ದರು.

ಇದೇ ವೇಳೆ ಬೈತಾ ಅವರು ರಾಜ್ಯ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆಯ ಬಗ್ಗೆ ಅಸಮಾಧಾವನ್ನು ವ್ಯಕ್ತಪಡಿಸಿದ್ದರು.

ಪ್ರಶಸ್ತಿ ವಿಜೇತ ಬರಹಗಾರರಾದ ಇವರಿಬ್ಬರನ್ನೂ ಅಮಾನತು ಮಾಡುವ ಮುನ್ನ ಶೋಕಾಸ್ ನೋಟಿಸ್‌ನ್ನೂ ಜಾರಿ ಮಾಡಿಲ್ಲ.

`ಪ್ರತಿ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುತ್ತದೆ. ಅದನ್ನು ವ್ಯಕ್ತಪಡಿಸಿದ ಕಾರಣಕ್ಕೆ ಈ ರೀತಿಯ ಬೆಲೆ ತೆರಬೇಕಾಗಿ ಬರಬಹುದೆಂದು ನಾನು ಎಣಿಸಿರಲಿಲ್ಲ~ ಎಂದು ಅರುಣ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT