ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಮುಂಬೈ ಇಂಡಿಯನ್ಸ್

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಸಾಮರ್ಸೆಟ್ ಬೌಲರ್‌ಗಳ ಆರ್ಭಟದ ನಡುವೆ ಕುಂಟುತ್ತಲೇ ಸಾಗಿದ ಮುಂಬೈ ಇಂಡಿಯನ್ಸ್ ತಂಡದವರು ಕಷ್ಟಪಟ್ಟು ನೂರೈವತ್ತಕ್ಕೂ ಹೆಚ್ಚು ರನ್ ಗಳಿಸಿ ನಿಟ್ಟುಸಿರು ಬಿಟ್ಟರು. ಆದರೆ ಲಸಿತ್ ಮಾಲಿಂಗ (20ಕ್ಕೆ4) ಹಾಗೂ ಜೇಮ್ಸ ಫ್ರಾಂಕ್ಲಿನ್ (16ಕ್ಕೆ2) ತೋರಿದ ಕರಾರುವಾಕ್ಕಾದ ದಾಳಿಗೆ ಭಜ್ಜಿ ಪಡೆಗೆ ಇಷ್ಟು ಮೊತ್ತ ಗಳಿಸಿದ್ದು ಸಾಕಾಗಿತ್ತು.

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶನಿವಾರ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರಭಜನ್ ಸಿಂಗ್ ನಾಯಕತ್ವದ ತಂಡ ಆರಂಭದಲ್ಲಿ ಕಷ್ಟ ಪಟ್ಟಿತು. ಪಂದ್ಯ ಆರಂಭಕ್ಕೆ ಮುನ್ನವೇ ಸಚಿನ್ ತೆಂಡೂಲ್ಕರ್ ಜೊತೆಗೆ ಪಿಚ್ ಪರಿಶೀಲಿಸಿದ್ದ ಹರಭಜನ್ ನಾಣ್ಯ ಚಿಮ್ಮುವ ಅದೃಷ್ಟದಾಟದಲ್ಲಿ ಯಶ ಸಿಕ್ಕಿತು.

ಎದುರಾಳಿಗೆ ಗುರಿಯನ್ನು ನೀಡಿ, ಬಿಗುವಿನ ಬೌಲಿಂಗ್ ದಾಳಿಯಿಂದ ಗೆಲುವು ಪಡೆಯುವುದು ಯೋಜನೆ ಹೊಂದಿದ್ದರು ಎನ್ನುವುದನ್ನು ಅವರ ತೆಗೆದುಕೊಂಡ ತೀರ್ಮಾನದಿಂದಲೇ ಸ್ಪಷ್ಟ. ಇದರಲ್ಲಿಯು ಯಶಸ್ಸು ಕಂಡರು.
ಮುಂಬೈನವರು ಮೊದಲು ಬ್ಯಾಟ್ ಮಾಡಿ ಇಪ್ಪತ್ತು ಓವರುಗಳಲ್ಲಿ 160 ರನ್ ಗಳಿಸಿದರು. ಅದು ಐದು ವಿಕೆಟ್ ಕಳೆದುಕೊಂಡಿತು. ಇಂಡಿಯನ್ಸ್ ನೀಡಿದ ಸವಾಲಿಗೆ ತಿರುಗೇಟು ನೀಡುವ ಛಲದೊಂದಿಗೆ ಇನಿಂಗ್ಸ್ ಆರಂಭಿಸಿದ ಸಾಮರ್ಸೆಟ್ ಗುರಿ ಮಟ್ಟಲು ವಿಫಲವಾಯಿತು.

ಈ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 150 ರನ್ ಮಾತ್ರ ಗಳಿಸಿತು. ಮುಂಬೈ ತಂಡ ಈ ಗೆಲುವಿನ ಮೂಲಕ ಫೈನಲ್‌ಗೆ ಪ್ರವೇಶಿಸಿತು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲನ್ನು ಭಜ್ಜಿ ಪಡೆ ಎದುರಿಸಬೇಕಿದೆ. ಸಾಮರ್ಸೆಟ್ ತಂಡವನ್ನು ಗೆಲುವಿನ ಹಾದಿಗೆ ಮುಟ್ಟಿಸಲು ಕ್ರೇಗ್ ಕೀಸ್ವೆಟರ್ (66; 46ಎಸೆತ, 7ಬೌಂ, 1ಸಿಕ್ಸೃರ್) ನಡೆಸಿದ ಯತ್ನ ಸಾಕಾಗಲಿಲ್ಲ.

ಮುಂಬೈ ಇಂಡಿಯನ್ಸ್‌ನ ಆರಂಭಿಕ ಆಟಗಾರ ಐಡೆನ್ ಬ್ಲಿಜಾರ್ಡ್ (54; 39 ಎ., 5 ಬೌಂಡರಿ, 3 ಸಿಕ್ಸರ್) ಹಾಗೂ ಅಂಬಟಿ ರಾಯುಡು ನಡುವಣ ಎರಡನೇ ವಿಕೆಟ್ ಜೊತೆಯಾಟ 43 ರನ್‌ಗಳಿಗೆ ವಿಸ್ತರಿಸಿತು.

ಸ್ಕೋರ್ ವಿವರ:

ಮುಂಬೈ ಇಂಡಿಯನ್ಸ್: 20 ಓವರುಗಳಲ್ಲಿ
5 ವಿಕೆಟ್‌ಗಳ ನಷ್ಟಕ್ಕೆ 160
ಐಡೆನ್ ಬ್ಲಿಜಾರ್ಡ್ ಬಿ ಮುರಳಿ ಕಾರ್ತಿಕ್  54
ಸರುಲ್ ಕನ್ವರ್ ಸಿ ಜೋಸ್ ಬಟ್ಲರ್ ಬಿ ಸ್ಟೀವ್ ಕಿರ್ಬಿ  02
ಅಂಬಟಿ ರಾಯುಡು ಸಿ ಕ್ರೇಗ್ ಕೀಸ್ವೆಟರ್ ಬಿ ಆ್ಯಡಮ್ ಡಿಬ್ಲೆ 19
ಫ್ರಾಂಕ್ಲಿನ್ ಎಲ್‌ಬಿಡಬ್ಲ್ಯು ಬಿ ವಾನ್‌ಡೇರ್ ಮೇರ್ವ್  06
ಕೀರನ್ ಪೊಲಾರ್ಡ್ ಬಿ ಅಲ್ಫಾನ್ಸೊ ಥಾಮಸ್  24
ಸೂರ್ಯಕುಮಾರ್ ಯಾದವ್ ಔಟಾಗದೆ  23
ರಾಜಗೋಪಾಲ್ ಸತೀಶ್ ಔಟಾಗದೆ  25
ಇತರೆ: (ಬೈ-1, ಲೆಗ್‌ಬೈ-3, ವೈಡ್-1, ನೋಬಾಲ್-2) 07
ವಿಕೆಟ್ ಪತನ: 1-19 (ಸರುಲ್ ಕನ್ವರ್; 3.1), 2-62 (ಅಂಬಟಿ ರಾಯುಡು; 7.5), 3-86 (ಜೇಮ್ಸ ಫ್ರಾಂಕ್ಲಿನ್; 11.2), 4-92 (ಐಡೆನ್ ಬ್ಲಿಜಾರ್ಡ್; 12.3), 5-117 (ಕೀರನ್ ಪೊಲಾರ್ಡ್; 16.2).
ಬೌಲಿಂಗ್: ಅಲ್ಫಾನ್ಸೊ ಥಾಮಸ್ 4-0-34-1, ಸ್ಟೀವ್ ಕಿರ್ಬಿ 3-0-31-1 (ನೋಬಾಲ್-2, ವೈಡ್-1), ಆ್ಯಡಮ್ ಡಿಬ್ಲೆ 4-0-20-1, ಮುರಳಿ ಕಾರ್ತಿಕ್ 4-0-30-1, ವಾನ್‌ಡೇರ್ ಮೇರ್ವ್ , ಪೀಟರ್ ಟ್ರೆಗೊ 1-0-9-0
ಸಾಮರ್ಸೆಟ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 150
ಪೀಟರ್ ಟ್ರೆಗೊ ಬಿ ಮಾಲಿಂಗ  00
ಕ್ರೇಗ್ ಕೀಸ್ವೆಟರ್ ಸಿ ಪೋಲಾರ್ಡ್ ಬಿ ಫ್ರಾಂಕ್ಲಿನ್  62
ರಾಲ್ಫ್ ವಾನ್‌ಡೇರ್ ಮೇರ್ವ್ ಬಿ ಮಾಲಿಂಗ  10
ಜೇಮ್ಸ ಹಿಲ್ಡ್‌ರೆತ್ ಬಿ ಹರಭಜನ್ ಸಿಂಗ್  39
 ಜೋಸ್ ಬಟ್ಲರ್ ಬಿ ಫ್ರಾಂಕ್ಲಿನ್  19
ನಿಕ್ ಕಾಂಪ್ಟನ್ ಬಿ ಮಾಲಿಂಗ  05
ಅರುಲ್ ಸುಪ್ಪಯ್ಯ ಔಟಾಗದೆ  00
ಮುರಳಿ ಕಾರ್ತಿಕ್  ಬಿ ಮಾಲಿಂಗ  00
 ಅಲ್ಫಾನ್ಸೊ ಥಾಮಸ್  ಔಟಾಗದೆ  03
ಇತರೆ: ಬೈ-7, ಲೆಗ್ ಬೈ-2, ವೈಡ್-3    12
ವಿಕೆಟ್ ಪತನ: 1-0 (ಟ್ರೆಗೊ; 0.2), 2-17 (ರಾಲ್ಫ್ ವಾನ್ ಡೇರ್; 2.6), 3-100 (ಹಿಲ್ಡ್ ರೆತ್; 13.3), 4-141 (ಬಟ್ಲರ್; 18.3), 5-142 (ಕೀಸ್ವೆಟರ್; 18.5), 6-147 (ಕಾಂಪ್ಟನ್; 19.2), 7- 147 (ಕಾರ್ತಿಕ್; 19.3).
ಬೌಲಿಂಗ್ ವಿವರ: ಲಸಿತ್ ಮಾಲಿಂಗ   4-0-20-4, ಅಬು ನಾಚಿಮ್ 4-0-31-0, ಯಜುವೇಂದ್ರ ಚಹಾಲ್ 3-0-26-0, ಹರಭಜನ್ ಸಿಂಗ್ 3-0-25-1, ಕೀರನ್ ಪೊಲಾರ್ಡ್ 2-0-10-0, ಆರ್. ಸತೀಶ್ 1-0-13-0, ಜೇಮ್ಸ ಫ್ರಾಂಕ್ಲಿನ್ 3-0-16-2.
ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 10 ರನ್ ಜಯ
ಪಂದ್ಯ ಶ್ರೇಷ್ಠ: ಲಸಿತ್ ಮಾಲಿಂಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT