ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಶಿರಸಿ, ಹಾವೇರಿ ತಂಡ

ಬೆಳಗಾವಿ ವಿಭಾಗಮಟ್ಟದ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿ
Last Updated 17 ಡಿಸೆಂಬರ್ 2013, 5:36 IST
ಅಕ್ಷರ ಗಾತ್ರ

ಕಾರವಾರ: ಶಿರಸಿ ಮತ್ತು ಹಾವೇರಿ ತಂಡದವರು ಇಲ್ಲಿ ಸೋಮವಾರ ಆರಂಭಗೊಂಡ ಬೆಳಗಾವಿ ವಿಭಾಗಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಬಾಲಕಿ­ಯರ ವಿಭಾಗದ ಫೈನಲ್‌ ಪ್ರವೇಶಿಸಿದರು.

ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯ ಬಾಲಕಿಯರ ಮೊದಲ ಸೆಮಿಫೈನಲ್‌ ಪಂದ್ಯಗಳಲ್ಲಿ ಶಿರಸಿ ತಂಡ ಬೆಳಗಾವಿ ತಂಡವನ್ನು ಮಣಿಸಿತು. ಎರಡನೇ ಸೆಮಿಫೈನಲ್‌ನಲ್ಲಿ ಹಾವೇರಿ ತಂಡ ವಿಜಾಪುರ ತಂಡವನ್ನು ಸೋಲಿಸಿತು.

ಬಾಲಕರ ವಿಭಾಗದಲ್ಲಿ ಕಾರವಾರ ಮತ್ತು ಬಾಗಲಕೋಟೆ ತಂಡಗಳು ಮೊದಲ ಸೆಮಿಫೈನಲ್‌ನಲ್ಲಿ ಸೆಣಸಲಿದ್ದು ಶಿರಸಿ ಮತ್ತು ಹಾವೇರಿ ತಂಡಗಳು ಎರಡನೇ ಸೆಮಿಫೈನಲ್‌ನಲ್ಲಿ ಎದುರಾಗಲಿವೆ. ಮಂಗಳವಾರ ಈ ಪಂದ್ಯಗಳು ನಡೆಯಲಿವೆ.

ಅವ್ಯವಸ್ಥೆಯ ಗೂಡಾದ ಕ್ರೀಡಾಕೂಟ:  ಪಂದ್ಯದ ವೇಳೆ ಬಾಲಕಿಯೊಬ್ಬಳು ತಲೆ ಸುತ್ತು ಬಂದು ಕುಸಿದು ಬಿದ್ದಳು. ಕ್ರೀಡಾಂಗಣದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಯಾವುದೇ ಸೌಲಭ್ಯ ಕಲ್ಪಿಸಿರಲಿಲ್ಲ. ಕ್ರೀಡಾಪಟುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇರಲಿಲ್ಲ.

ಅವ್ಯವಸ್ಥೆಗಳ ಬಗ್ಗೆ ಆಯಾ ವಿಭಾಗದಿಂದ ಬಂದಿದ್ದ ದೈಹಿಕ ಶಿಕ್ಷಣ ಶಿಕ್ಷಕರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೃಷ್ಣ ನಾರಾಯಣ ಗೌಡ ಅವರ ಬಳಿ ದೂರಿದರು.

ವಿಭಾಗ ಮಟ್ಟದಲ್ಲಿ ಕನಿಷ್ಠ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ದೈಹಿಕ ಶಿಕ್ಷಣ ಶಿಕ್ಷಕರು ಕಿಡಿ ಕಾರಿದರು.

ಕೊನೆಗೆ ಎಚ್ಚೆತ್ತುಕೊಂಡ ಆಯೋಜಕರು ಕ್ರೀಡಾಪಟುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು. ‘ನಮ್ಮ ಊರಿನಿಂದ ಕಾರವಾರಕ್ಕೆ ಬಂದು ಹಿಂದಿರುಗಲು ಪ್ರತಿಯೊಬ್ಬರಿಗೆ ₨ 512 ಪ್ರಯಾಣ ವೆಚ್ಚವಿದೆ. ಅದನ್ನು ಶಿಕ್ಷಕ ಹಾಗೂ ವಿದ್ಯಾರ್ಥಿಗಳೇ ಭರಿಸಿದ್ದಾರೆ.

ವಿಭಾಗ ಮಟ್ಟದ ಕ್ರೀಡಾಕೂಟ ಆಯೋಜಿಸಿ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನು ಇಲಾಖೆ ಮಾಡಿಲ್ಲ. ಪ್ರಥಮ ಚಿಕಿತ್ಸೆಗೂ ಅವಕಾಶವಿಲ್ಲ’ ಎಂದು ಬಾಗಲಕೋಟೆಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT