ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊಗ್ರಫಿ ಕಾರ್ಯಾಗಾರ

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ಅವಿನಾಶ್ ಪಸ್ರೀಚಾ ದೇಶದ ಖ್ಯಾತ ಛಾಯಾಗ್ರಾಹಕರಲ್ಲಿ ಒಬ್ಬರು. 27 ವರ್ಷಗಳ ಕಾಲ `ಸ್ಪಾನ್~ ಪತ್ರಿಕೆಯ ಫೋಟೋ ಸಂಪಾದಕರಾಗಿದ್ದರು. ಗಣ್ಯ ವ್ಯಕ್ತಿಗಳ ಕಲಾವಿದರ ಭಾವಚಿತ್ರ ಸೆರೆ ಹಿಡಿಯುವುದರ ಜೊತೆಗೆ ಫ್ಯಾಷನ್, ಜಾಹೀರಾತು, ಔದ್ಯಮಿಕ ಛಾಯಾಗ್ರಹಣದಲ್ಲೂ ಪರಿಣತಿ ಸಾಧಿಸಿದ್ದಾರೆ. ನ್ಯಾಷನಲ್ ಜಿಯಾಗ್ರಾಫಿಕ್ ಮತ್ತು ಲೈಫ್ ಪತ್ರಿಕೆಗಳಲ್ಲಿ ಅವರ ಹಲವು ಚಿತ್ರಗಳು ಪ್ರಕಟಗೊಂಡಿವೆ.

ಲಲಿತ ಕಲೆಗಳ ಛಾಯಾಗ್ರಹಣದಲ್ಲಿ ಅವರದ್ದು ಎತ್ತಿದ್ದ ಕೈ. ವಿಭಿನ್ನ ಭಾರತೀಯ ನೃತ್ಯ ಪ್ರಕಾರಗಳನ್ನು ಹಾಗೂ  ಬಡೇ ಗುಲಾಮ್ ಅಲಿ ಖಾನ್, ಬೇಗಂ ಅಖ್ತರ್ ಮತ್ತು ಕುಮಾರ ಗಂಧರ್ವ ಅವರಂತಹ ಮಹಾನ್ ಕಲಾವಿದರ ಜೀವನ, ಸಾಧನೆಯನ್ನು ದೃಶ್ಯ- ಶ್ರಾವ್ಯ ಮಾಧ್ಯಮದಲ್ಲಿ ಬಿಂಬಿಸಿದ್ದಾರೆ.

ಯುವ ಛಾಯಾಗ್ರಾಹಕರಿಗಾಗಿ ಪಸ್ರೀಚಾ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಈ ಕಾರ್ಯಾಗಾರ ಆರಂಭ.
ಸ್ಥಳ: ಅಲಯನ್ಸ್ ಫ್ರಾನ್ಸೆ, ವಸಂತನಗರ.  ಮಾಹಿತಿ ಮತ್ತು ನೋಂದಣಿಗೆ: 6532 8535. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT