ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋರ್ಟಿಸ್ ದೀದಿಯರಿಗೆ ಪ್ರಶಸ್ತಿ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ರೋಗಿಗಳ ಆರೋಗ್ಯ ಪಾಲನೆ ವಿಷಯದಲ್ಲಿ ವೈದ್ಯರಷ್ಟೇ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಾರೆ ದಾದಿಯರು. ನರ್ಸಿಂಗ್ ಕ್ಷೇತ್ರ ತನ್ನ ವಿಶಿಷ್ಟ ಸೇವಾ ಮನೋಭಾವದಿಂದಾಗಿಯೇ ವಿಶ್ವ ಮನ್ನಣೆ ಪಡೆದುಕೊಂಡಿದೆ. ಅದಕ್ಕಾಗಿಯೇ ಇರಬೇಕು ನರ್ಸ್‌ಗಳನ್ನು ಎಲ್ಲರೂ ಪ್ರೀತಿಯಿಂದ `ಸಿಸ್ಟರ್~ ಎಂದು ಸಂಬೋಧಿಸುತ್ತಾರೆ.

ತಮ್ಮ ಮನಸ್ಸಿನೊಳಗೆ ಯಾವುದೇ ಅಸಹ್ಯ ಭಾವನೆಯನ್ನು ಇರಿಸಿಕೊಳ್ಳದೇ ರೋಗಿಗಳ ಸೇವೆಯಲ್ಲಿ ತೊಡಗುವ ದಾದಿಯರ ನಿಸ್ವಾರ್ಥ ಮನೋಭಾವ ತಾಯಿಯ ಪ್ರೀತಿಯನ್ನು ನೆನಪಿಸುತ್ತದೆ.

ರೋಗಿಗಳ ಸೇವೆಯಲ್ಲಿ ತೊಡಗಿದ್ದ ಫ್ಲಾರೆನ್ಸ್ ನೈಟಿಂಗೆಲ್, ಮದರ್ ತೆರೆಸಾ ಅವರಂತಹವರು ಇವರಿಗೆ ಮಾದರಿ. ಈ ಮಹನೀಯರು ಹಾಕಿಕೊಟ್ಟ ಸೇವಾ ಪಥದಲ್ಲಿ ಸಾಗುತ್ತಿರುವ ದಾದಿಯರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಫೋರ್ಟಿಸ್ ಆಸ್ಪತ್ರೆ ಪ್ರತಿ ವರ್ಷ ಪ್ರಶಸ್ತಿ ನೀಡುತ್ತಾ ಬರುತ್ತಿದೆ. ನರ್ಸಿಂಗ್ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿದೆ, ಅವರಲ್ಲಿ ಉತ್ಸಾಹ ತುಂಬುತ್ತಿದೆ.

ಫೋರ್ಟಿಸ್ `ವಿನ್ ನರ್ಸ್ ಅವಾರ್ಡ್ಸ್ 2011~, ದೇಶದ ವಿವಿಧೆಡೆಯ ಫೋರ್ಟಿಸ್ ಆಸ್ಪತ್ರೆಗಳ ನರ್ಸ್‌ಗಳಿಗೆ ಮೀಸಲು. ಇದಕ್ಕೆ ಅವರ ಸೇವಾ ಮನೋಭಾವವೇ ಪ್ರಮುಖ ಮಾನದಂಡ. ಇವರನ್ನು ಆಯ್ಕೆ ಮಾಡವವರು ಬಾಹ್ಯ ತೀರ್ಪುಗಾರರು.

ತಾಂತ್ರಿಕ ಕೌಶಲ್ಯ, ಸೇವೆ ಹಾಗೂ ತಂಡದ ಉತ್ಸಾಹ ಗಮನದಲ್ಲಿ ಇಟ್ಟುಕೊಂಡು ಮೂರು ವರ್ಗದಲ್ಲಿ ಈ ಸಲದ ಶ್ರೇಷ್ಠರನ್ನು ಗುರುತಿಸಿ ಗೌರವಿಸಲಾಯಿತು.

ದಾದಿಯರಿಗೆ ಬೆಸ್ಟ್ ನರ್ಸ್, ಬೆಸ್ಟ್ ನರ್ಸ್ ಸೂಪರ್‌ವೈಸರ್ಸ್‌ ನೀಡಲಾಯಿತು. ಜನಪ್ರಿಯತೆ ಆಧರಿಸಿದ ಪ್ರಶಸ್ತಿ ವಿಭಾಗದಲ್ಲಿ `ಫೋರ್ಟಿಸ್ ಹೆಲ್ಪ್‌ಪುಲ್ ಹ್ಯಾಂಡ್ಸ್, `ಫೋರ್ಟಿಸ್ ನೈಟಿಂಗೇಲ್, `ಫೋರ್ಟಿಸ್ ಎ  ಒನ್ ನರ್ಸ್ ಪ್ರಶಸ್ತಿ ಹಾಗೂ ಬೆಸ್ಟ್ ಟೀಂ ಫರ್ಮಾನೆನ್ಸ್~ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಫೋರ್ಟಿಸ್ ಹಾಸ್ಪಿಟಲ್‌ನ ಸಿಒಒ ಲಾಯ್ಡ ನಜರತ್, ಫೋರ್ಟಿಸ್ ಹೆಲ್ತ್‌ಕೇರ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಿಂದರ್ ಸಿಂಗ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT