ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಷನ್ ಡಿಸೈನ್: ಪ್ರಗ್ಯಾನ್‌ಗೆ ಪ್ರಶಸ್ತಿ

Last Updated 27 ಜೂನ್ 2011, 19:30 IST
ಅಕ್ಷರ ಗಾತ್ರ

ಹೊಲಿಗೆ ಯಂತ್ರಗಳಿಗೆ `ಉಷಾ~ ಹೆಸರುವಾಸಿ. ಅದು ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ ಸಹಯೋಗದಲ್ಲಿ ಫ್ಯಾಷನ್ ಉಡುಪು ವಿನ್ಯಾಸ ಸ್ಪರ್ಧೆ ನಡೆಸಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದೆ.

ಈ ವರ್ಷದ ಉಷಾ ನಿಫ್ಟ್ `ಬೆಸ್ಟ್ ಕನ್‌ಸ್ಟ್ರಕ್ಟೆಡ್ ಡಿಸೈನ್ ಕಲೆಕ್ಷನ್~ ಪ್ರಶಸ್ತಿಗೆ ಪಾತ್ರರಾದವರು ಬೆಂಗಳೂರು ನಿಫ್ಟ್ ವಿದ್ಯಾರ್ಥಿ ಪ್ರಗ್ಯಾನ್ ಹೈದರ್. ಅವರಿಗೆ 10 ಸಾವಿರ ರೂ ನಗದು, ಉಷಾ ಜನೋಮ್ ಸ್ವಯಂಚಾಲಿತ ಹೊಲಿಗೆ ಯಂತ್ರ, ಟ್ರೋಫಿ ಮತ್ತು ಪ್ರಮಾಣಪತ್ರವನ್ನು ಉಷಾ ಇಂಟರ್‌ನ್ಯಾಷನಲ್‌ನ ... ಪ್ರದಾನ ಮಾಡಿದರು.

1936ರಿಂದ ಅಸ್ತಿತ್ವದಲ್ಲಿರುವ ಉಷಾ, ಜಪಾನ್ ತಂತ್ರಜ್ಞಾನದ `ಜನೋಮ್ ಆಟೋಮೇಟಿಕ್ ಜಿಗ್‌ಜ್ಯಾಗ್ ಮತ್ತು ಕಂಪ್ಯೂಟರೈಸ್ಡ್ ಕಸೂತಿ ಯಂತ್ರ~ಗಳು, ಸ್ಟ್ರೈಟ್ ಸ್ಟ್ರಿಚ್ ಮತ್ತು ಕೈಗಾರಿಕಾ ಹೊಲಿಗೆ ಯಂತ್ರಗಳನ್ನು ಪೂರೈಸುತ್ತಿದೆ. ನಿಫ್ಟ್ ಜತೆಗೂಡಿ ಪ್ರತಿಭಾಶಾಲಿ ವಿನ್ಯಾಸಕರನ್ನು ಪ್ರೋತ್ಸಾಹಿಸಲು ಉಷಾ ನಿಫ್ಟ್ ಬೆಸ್ಟ್ ಕನ್‌ಸ್ಟ್ರಕ್ಟಡ್ ಡಿಸೈನ್ ಕಲೆಕ್ಷನ್  ಪ್ರಶಸ್ತಿಯನ್ನು 1998ರಲ್ಲಿ ಸ್ಥಾಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT