ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೂಟ್‌ ಸಲಾಡ್‌

Last Updated 26 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೇಕಾಗುವ ಸಾಮಾಗ್ರಿಗಳು: ಕಲ್ಲಂಗಡಿ ಹಣ್ಣು 100ಗ್ರಾಂ, ಕರ್ಬೂಜು ಹಣ್ಣು 100ಗ್ರಾಂ, ಕಪ್ಪು ದ್ರಾಕ್ಷಿ 50 ಗ್ರಾಂ, ಹಸಿರು ದ್ರಾಕ್ಷಿ 50 ಗ್ರಾಂ, ದಾಳಿಂಬೆ 50 ಗ್ರಾಂ, ನಿಂಬೆಹಣ್ಣು, ಕಲ್ಲು ಉಪ್ಪು, ಶುಂಠಿ ಪುಡಿ, ಪುದೀನ.

ಮಾಡುವ ವಿಧಾನ: ಕಲ್ಲಂಗಡಿ ಹಣ್ಣನ್ನು ಸಣ್ಣಗೆ ತುಂಡುಗಳನ್ನಾಗಿ ಮಾಡಿ, ದಾಳಿಂಬೆ, ಕಪ್ಪು ಮತ್ತು ಹಸಿರು ದ್ರಾಕ್ಷಿ ( ದ್ರಾಕ್ಷಿ ಬಳಸುವ ಮುನ್ನ ಉಪ್ಪು ನೀರಿನಲ್ಲಿ ತೊಳೆಯಿರಿ) ಸೇರಿಸಿ, ನಂತರ ಶುಂಠಿ ಪುಡಿ, ಪುದಿನಾ ಎಲೆಯನ್ನು ಸಣ್ಣಗೆ ಕತ್ತರಿಸಿ ಹಾಕಿ, ನಂತರ ರುಚಿಗೆ ತಕ್ಕಷ್ಟು ಕಲ್ಲುಉಪ್ಪು ಹಾಕಿ ಮಿಶ್ರಣ ಮಾಡಿ.

ಹೇರಳವಾಗಿ ನೀರಿನ ಅಂಶವನ್ನು ಹೊಂದಿರುವ ಈ ಹಣ್ಣುಗಳು ದೇಹದಲ್ಲಿನ ನೀರಿನಾಂಶವನ್ನು ಕಾಪಾಡುವಲ್ಲಿ ಉಪಯೋಗಕಾರಿಯಾದವು. ಕಲ್ಲಂಗಡಿ, ಮತ್ತು ದ್ರಾಕ್ಷಿಯಲ್ಲಿ ಹಣ್ಣಿನಲ್ಲಿ ಆ್ಯಂಟಿ ಆಕ್ಸೈಡ್ಸ್‌ ಇದ್ದು ಚರ್ಮದ ಸೌಂದರ್ಯ, ತೇವಾಂಶ ಕಾಪಾಡುತ್ತವೆ.

ಉಪವಾಸದಂದು ಹೊಸ ರೆಸಿಪಿ ಅಡುಗೆ ರುಚಿಯೊಂದಿಗೆ ಈ ಮಾಗಿಕಾಲದ ಶಿವರಾತ್ರಿಯನ್ನು ಪೋಷಕಾಂಶಗಳೊಂದಿಗೆ ಆಚರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT