ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಚರ್ ಏನು ಮಾಡುತ್ತಿದ್ದಾರೆ?

ಇತ್ತೀಚಿನ 16 ಟೆಸ್ಟ್‌ಗಳಲ್ಲಿ 10ರಲ್ಲಿ ಸೋಲು
Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಕೋಲ್ಕತ್ತ: `ಭಾರತ ತಂಡಕ್ಕೆ ಈ ರೀತಿ ಆಘಾತ ಎದುರಾಗುತ್ತಿದೆಯಲ್ಲ, ಕೋಚ್ ಡಂಕನ್ ಫ್ಲೆಚರ್ ಪಾತ್ರವೇನು? ಅವರು ಏನು ಮಾಡುತ್ತಿದ್ದಾರೆ'
-ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡನೇ ಸೋಲು ಎದುರಾದ ಬಳಿಕ ಪತ್ರಿಕಾಗೋಷ್ಠಿಗೆ ಆಗಮಿಸಿದ ನಾಯಕ ದೋನಿ ಅವರತ್ತ ತೂರಿಬಂದ ಪ್ರಶ್ನೆಗಳು.

`ಕೋಚ್ ಡಂಕನ್ ಫ್ಲೆಚರ್ ಅಂಗಳಕ್ಕಿಳಿದು ಬ್ಯಾಟ್ ಮಾಡಲು ಸಾಧ್ಯವೇ?' ಎಂಬುದು ನಾಯಕನ ಉತ್ತರ. `ಕೋಚ್ ಏನು ಮಾಡಬೇಕು ಆ ಕೆಲಸವನ್ನು ಫ್ಲೆಚರ್ ಮಾಡುತ್ತಿದ್ದಾರೆ. ಬ್ಯಾಟಿಂಗ್ ಬಗ್ಗೆ ಅವರಲ್ಲಿ ಅದ್ಭುತ ತಾಂತ್ರಿಕ ಜ್ಞಾನವಿದೆ. ಆದರೆ ಅಂಗಳಕ್ಕಿಳಿದ ಮೇಲೆ ನಾವು ಬ್ಯಾಟ್ ಮಾಡಬೇಕು. ನಮ್ಮ ತಪ್ಪನ್ನು ಅವರ ಮೇಲೆ ಏಕೆ ಹೊರಿಸಬೇಕು' ಎಂದರು.

ಆದರೆ ಮಾಜಿ ಆಟಗಾರರಾದ ಸುನಿಲ್ ಗಾವಸ್ಕರ್, ಮಣಿಂದರ್ ಸಿಂಗ್ ಸೇರಿದಂತೆ ಹೆಚ್ಚಿನವರು ಕೋಚ್ ಫ್ಲೆಚರ್ ತಲೆದಂಡ ಬಯಸುತ್ತಿದ್ದಾರೆ. ಆಟಗಾರರ ಮೇಲೆ ನಿಯಂತ್ರಣವಿಲ್ಲದ ಅವರು ಕೋಚ್ ಆಗಿ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಿದ್ದಾರೆ. `ಕೋಚ್ ಡಂಕನ್ ಫ್ಲೆಚರ್‌ಗೆ ತಮ್ಮ ಪಾತ್ರ ಏನು ಎಂಬುದು ಸರಿಯಾಗಿ ಗೊತ್ತಾಗುತ್ತಿಲ್ಲ. ಆಟಗಾರರ ಮೇಲೆ ಅವರಿಗೆ ನಿಯಂತ್ರಣವಿಲ್ಲ. ಕೋಲ್ಕತ್ತದ ಪಂದ್ಯಕ್ಕೆ ತಡ ಮಾಡಿ ಬಂದರೂ ಅವರು ಆಟಗಾರರಿಗೆ ಏನನ್ನೂ ಹೇಳಿಲ್ಲ' ಎಂದು ಗಾವಸ್ಕರ್ ಈ ಟೆಸ್ಟ್ ಪಂದ್ಯದ ವಿಶ್ಲೇಷಣೆ ವೇಳೆ ಟೀಕಿಸಿದ್ದಾರೆ.

ವಿಶ್ವಕಪ್ ಗೆದ್ದುಕೊಟ್ಟ ಗ್ಯಾರಿ ಕರ್ಸ್ಟನ್ ಬಳಿಕ ಭಾರತ ತಂಡದ ಕೋಚ್ ಆಗಿ ನೇಮಕವಾಗಿರುವ ಫ್ಲೆಚರ್ ಅವಧಿಯಲ್ಲಿ ಭಾರತ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಅವರು ಮಾರ್ಗದರ್ಶಕರಾದ ಬಳಿಕ ಭಾರತ ತಂಡ ಆಡಿದ 16 ಟೆಸ್ಟ್‌ಗಳಲ್ಲಿ 10ರಲ್ಲಿ ಸೋತಿರುವುದೇ ಅದಕ್ಕೆ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT