ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೈಯಿಂಗ್ ವಿರುದ್ಧ ಪೋಸ್ಟಲ್‌ಗೆ ಜಯ

ಹಾಕಿ: ರೈಲು ಗಾಲಿ ಕಾರ್ಖಾನೆಗೆ ಮತ್ತೊಂದು ಜಯ
Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಮೇಶ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಪೋಸ್ಟಲ್ ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಎ' ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಶನಿವಾರದ ಪಂದ್ಯದಲ್ಲಿ  3-0 ಗೋಲುಗಳಿಂದ ಫ್ಲೈಯಿಂಗ್ ಹಾಕಿ ಕ್ಲಬ್ ಎದುರು ಗೆಲುವು ಸಾಧಿಸಿತು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಮೇಶ್ ಏಳನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದು, 25ನೇ ನಿಮಿಷದಲ್ಲಿ ಮತ್ತೊಂದು ಗೋಲು ತಂದಿತ್ತರು. ಈ ತಂಡದ ಇನ್ನೊಂದು ಗೋಲನ್ನು ನವೀನ್ ಶೇಖರ್ 14ನೇ ನಿಮಿಷದಲ್ಲಿ ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಆರ್‌ಡಬ್ಲ್ಯುಎಫ್‌ಗೆ ಮತ್ತೊಂದು ಜಯ: ತನ್ನ ಹಿಂದಿನ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ ಎದುರು ಜಯ ಪಡೆದಿದ್ದ ರೈಲು ಗಾಲಿ ಕಾರ್ಖಾನೆ (ಆರ್‌ಡಬ್ಲ್ಯುಎಫ್) ತಂಡ ದಿನದ ಇನ್ನೊಂದು ಪಂದ್ಯದಲ್ಲಿ ಅಯ್ಯಪ್ಪ ಹಾಕಿ ಅಕಾಡೆಮಿ ಎದುರು 2-1ಗೋಲುಗಳಿಗೆ ಗೆಲುವು ಸಾಧಿಸಿತು.

ಮಹಮ್ಮದ್ ಇಮ್ರಾನ್ ಮತ್ತು ಅರುಣ್ ರವಿ ಕ್ರಮವಾಗಿ ಎಂಟು ಹಾಗೂ 56ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿ ಆರ್‌ಡಬ್ಲ್ಯುಎಫ್ ಗೆಲುವಿನ ರೂವಾರಿ ಎನಿಸಿದರು. ಅಯ್ಯಪ್ಪ ಅಕಾಡೆಮಿಯ ಏಕೈಕ ಗೋಲನ್ನು ಅಯ್ಯಣ್ಣ 57ನೇ ನಿಮಿಷದಲ್ಲಿ ತಂದಿತ್ತರು.

ಡಿವೈಎಸ್‌ಎಸ್ ತಂಡಕ್ಕೆ ನಿರಾಸೆ: ಹುಬ್ಬಳ್ಳಿಯ ಸದರ್ನ್ ವೆಸ್ಟರ್ನ್ ರೈಲ್ವೆ ತಂಡದ ಚುರುಕಾದ ಪ್ರದರ್ಶನದ ಮುಂದೆ ಮಂಕಾದ ಡಿವೈಎಸ್‌ಎಸ್ `ಬಿ' ತಂಡ 1-6 ಗೋಲುಗಳಿಂದ ಸೋಲು ಕಂಡಿತು.

ರೈಲ್ವೆ ತಂಡದ ಭರತ್ (16ನೇ ನಿಮಿಷ), ಹಸನ್ ಅಲಿ (23ನೇ ನಿ.), ಗಿರೀಶ್ ಗಣಪತಿ (48ನೇ ನಿ.), ಎಂ. ಪಾಂಡೆ (51ನೇ ನಿ.), ಮಂಜುನಾಥ್ ಯಾದವ್ (53ನೇ ನಿ.) ಮತ್ತು ನಾಗೇಶ್ ಬೊಯಾರ್ (55ನೇ ನಿ.) ಗೋಲು ತಂದಿತ್ತರು.\

ಭಾನುವಾರದ ಪಂದ್ಯಗಳು: ಎಂಇಜಿ ಬಾಯ್ಸ-ಕೂರ್ಗ್ ಬ್ಲೂಸ್ ಹಾಕಿ ಕ್ಲಬ್ (ಮಧ್ಯಾಹ್ನ 3ಕ್ಕೆ), ಡಿವೈಎಸ್‌ಎಸ್ `ಬಿ'-ಫ್ಲೈಯಿಂಗ್ ಹಾಕಿ ಕ್ಲಬ್ (ಸಂಜೆ 4.30).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT