ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರ ಗೆದ್ದರೆ ಚಿನ್ನದ ಗಟ್ಟಿ!

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ಕ್ವಾಲಾಲಂಪುರ:  ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ, ಆಯಾ ದೇಶದ ಸ್ಪರ್ಧಿಗಳಿಗೆ ಸಾಕಷ್ಟು ಬಹುಮಾನದ ಹೊಳೆ ಹರಿದು ಬರುತ್ತದೆ. ಅದರ ಜೊತೆಗೆ ಶ್ಲಾಘನೆಯೂ ಕೂಡಾ. ಆದರೆ, ಈ ಸಲದ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಂಗಾರದ ಪದಕ ಗೆದ್ದ ಮಲೇಷ್ಯಾದ ಕ್ರೀಡಾಪಟುವಿಗೆ ಸಾಕಷ್ಟು ದುಬಾರಿ ಬೆಲೆಯ ಚಿನ್ನದ ಗಟ್ಟಿ ಲಭಿಸಲಿದೆ.

ಈ ಚಿನ್ನದ ಗಟ್ಟಿ ಸಾಮಾನ್ಯವಾದದ್ದೇನಲ್ಲ. ಇದು ಸುಮಾರು ಮೂರು ಕೋಟಿ 46 ಲಕ್ಷ ರೂಪಾಯಿ ಮೌಲ್ಯ ಒಳಗೊಂಡಿದೆ. ತಮ್ಮ ದೇಶದ ಸ್ಪರ್ಧಿಗಳು ಉತ್ತಮ ಸಾಧನೆ ಮಾಡಬೇಕು ಹಾಗೂ ಬ್ಯಾಡ್ಮಿಂಟನ್ ತಂಡಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದ ಸಲುವಾಗಿ ಮಲೇಷ್ಯಾ ಈ ಯೋಜನೆಯನ್ನು ರೂಪಿಸಿದೆ.

ಬ್ಯಾಡ್ಮಿಂಟನ್ ಆಟಗಾರ್ತಿ ಲೀ ಚಾಂಗ್ ವೀ ಕ್ವಾಲಾಲಂಪುರದಲ್ಲಿ ಮಂಗಳವಾರ ರಾತ್ರಿ ಮಾಧ್ಯಮದವರ ಎದುರು ಚಿನ್ನದ ಗಟ್ಟಿಯನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT