ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜರಾಗಲಿದೆ ತುಂಗಭದ್ರೆ ಭೂಮಿ

Last Updated 9 ಜುಲೈ 2012, 19:30 IST
ಅಕ್ಷರ ಗಾತ್ರ

ತುಂಗಭದ್ರಾ ನದಿ ಹೈದರಾಬಾದ್ ಕರ್ನಾಟಕದ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಜೀವನಾಡಿ. ಅದರ ನೀರು ಈ ಭಾಗದ ಲಕ್ಷಾಂತರ ರೈತರ ಬದುಕಿನಲ್ಲಿ ಸಂತಸ ತುಂಬಿದೆ.

ನದಿಗುಂಟ ಮತ್ತು ಹೊಸಪೇಟೆ ಬಳಿಯ ತುಂಗಭದ್ರಾ ಅಣೆಕಟ್ಟೆಯ ನೀರಾವರಿ ಬಳಸಿಕೊಂಡು ಹೇರಳವಾಗಿ ಭತ್ತ ಬೆಳೆಯುತ್ತಾರೆ. ಭತ್ತ ಸಿ-3 ಗುಂಪಿನ ಸಸ್ಯವರ್ಗಕ್ಕೆ ಸೇರಿದೆ.

ವೈವಿಧ್ಯಮಯ ಹವಾಮಾನ ಮತ್ತು ನೈಸರ್ಗಿಕ ಸನ್ನಿವೇಶಗಳಿಗೆ ಒಗ್ಗಿಕೊಂಡು ಬೆಳೆಯುವ ಸಾಮರ್ಥ್ಯ ಹೊಂದಿದೆ. ಇಲ್ಲಿಯ ಸೋನಾ ಮಸೂರಿ ಭತ್ತದ ಗುಣಮಟ್ಟ ಮತ್ತು ಸ್ವಾದವಂತೂ ವಿಶ್ವವಿಖ್ಯಾತ ಎಂದರೆ ಅತಿಶಯೋಕ್ತಿಯಲ್ಲ. ಹೀಗಾಗಿಯೇ ವಿದೇಶದಲ್ಲೂ ಅದಕ್ಕೆ ಬೇಡಿಕೆ.

ಈ ಭಾಗದಲ್ಲಿ ಭತ್ತದ ಇಳುವರಿ ಉತ್ತಮವಾಗಿದ್ದರೂ ಅನೇಕ ಕಾರಣಗಳಿಂದ ಉತ್ಪಾದನಾ ಖರ್ಚು ದುಬಾರಿಯಾಗಿದೆ. ಇದರ ನಡುವೆಯೂ ಇತ್ತೀಚಿನ ದಿನಗಳಲ್ಲಿ ರೈತರು ವರ್ಷಕ್ಕೆ ಎರಡು ಭತ್ತದ ಬೆಳೆ ತೆಗೆಯುತ್ತಿದ್ದಾರೆ. ಅದಕ್ಕೆ ನಿರಂತರವಾಗಿ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಸುತ್ತಾರೆ.

ಹೀಗಾಗಿ ಭೂಮಿಯ ಗುಣಮಟ್ಟ ದಿನೇದಿನೇ ಕೆಡುತ್ತಿದೆ, ಅದು ಫಲವತ್ತತೆ ಕಳೆದುಕೊಳ್ಳುತ್ತಿದೆ. ಸದಾ ನೀರು ನಿಲ್ಲಿಸುವುದರಿಂದ ಜೌಗು ಸಮಸ್ಯೆ ಹೆಚ್ಚುತ್ತಿದೆ. ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ.

ಆದ್ದರಿಂದ ರೈತರು ಪರ್ಯಾಯ ಬೆಳೆ ಪದ್ಧತಿ ಅನುಸರಿಸಿ, ಸಾವಯವ ಅಥವಾ ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಆಗ ಮಾತ್ರ ತಮ್ಮ ಭೂಮಿ ವಿಷಮಯ ಮತ್ತು ಬಂಜರಾಗುವುದನ್ನು ತಡೆಯಬಹುದು. ಇದರ ಜತೆಗೇ ಅನಗತ್ಯ ಖರ್ಚು ಕಡಿಮೆ ಮಾಡುವ ಮತ್ತು ಇಳುವರಿ ಹೆಚ್ಚಿಸುವ ಬೇಸಾಯ ಕ್ರಮಗಳನ್ನು ಅನುಸರಿಸಬೇಕು.
ನಿಯಮಿತವಾಗಿ ಮಣ್ಣು ಪರೀಕ್ಷೆ ಮಾಡಿಸುವುದು, ತಜ್ಞರ ಸಲಹೆ ಪಡೆಯುವುದು, ಹಸಿರೆಲೆ ಮತ್ತು ಕೊಟ್ಟಿಗೆ ಗೊಬ್ಬರಗಳ ಬಳಕೆ ಹೆಚ್ಚಿಸುವುದು ಮುಂತಾದ ವಿಷಯಗಳತ್ತ ಗಮನ ಕೊಡಬೇಕು.

 (ಲೇಖಕರ ಮೊಬೈಲ್ 98804 47031)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT