ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೂರಿ ನಾಲಾ ಪ್ರದೇಶ ವೀಕ್ಷಣೆ

ಮಹಾದಾಯಿ ನ್ಯಾಯಮಂಡಳಿ ತಂಡದಿಂದ
Last Updated 20 ಡಿಸೆಂಬರ್ 2013, 5:51 IST
ಅಕ್ಷರ ಗಾತ್ರ

ಖಾನಾಪುರ: ಬಂಡೂರಿ ನಾಲಾದಿಂದ ಮಲಪ್ರಭಾ ನದಿಗೆ ನೀರು ಹರಿಸುವ ಯೋಜನೆಯ ಉದ್ದೇಶಿತ ಕಾಮಗಾರಿ ಸ್ಥಳಕ್ಕೆ ಮಹಾದಾಯಿ ಜಲವಿವಾದ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ನೇತೃತ್ವದ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.

ತಾಲ್ಲೂಕಿನ ನೇರಸಾ ಗ್ರಾಮದಿಂದ ಎರಡು ಕಿ.ಮೀ ದೂರವಿರುವ, ನೇರಸಾ–-ಕೊಂಗಳಾ ಗ್ರಾಮಗಳ ನಡುವಿನ ಭೀಮಗಡ ಅರಣ್ಯ ಪ್ರದೇಶದಲ್ಲಿ ಹರಿಯುವ ಬಂಡೂರಿ ನಾಲಾ ಪ್ರದೇಶಕ್ಕೆ ನ್ಯಾಯಮಂಡಳಿಯ ತಂಡ ಹಾಗೂ ನೀರಾವರಿ ನಿಗಮದ ಅಧಿಕಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ನೇರಸಾ ಹಾಗೂ ಅಶೋಕ ನಗರ ಗ್ರಾಮಸ್ಥರು ಮಹಾದಾಯಿ ನ್ಯಾಯ­ಮಂಡಳಿಗೆ ತಮ್ಮ ಊರುಗಳಿಗೂ  ಕುಡಿಯುವ ನೀರು ಪೂರೈಕೆಗೆ ಅವಕಾಶ ಕಲ್ಪಿಸಬೇಕು ಎಂಬ ಮನವಿಯನ್ನು ನೀಡಲು ಬಯಸಿದ್ದರು. ಪೊಲೀಸ್ ಹಾಗೂ ಅರಣ್ಯ ಇಲಾ­ಖೆಯ ನಿರ್ಬಂಧದಿಂದ ಗ್ರಾಮಸ್ಥರು ತಂಡವನ್ನು ಭೇಟಿ ಮಾಡಲು ಪರದಾಡಬೇಕಾಯಿತು.

ಸ್ಥಳ ಪರಿಶೀಲನೆಯ ನಂತರ ನೀರಾವರಿ ನಿಗಮ, ಅರಣ್ಯ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಬಂಡೂರಿ ತಿರುವು ಯೋಜನೆಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿಯನ್ನು ನ್ಯಾಯ­ಮಂಡಳಿ ತಂಡ ಪಡೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT