ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದರು ಖಾಸಗೀಕರಣಕ್ಕೆ ವಿರೋಧ: ಪ್ರತಿಭಟನೆ

Last Updated 21 ಜನವರಿ 2012, 8:15 IST
ಅಕ್ಷರ ಗಾತ್ರ

ಸುರತ್ಕಲ್: ಬಂದರು ಖಾಸಗಿಕರಣ ವಿರೋಧಿಸಿ ಎನ್‌ಎಂಪಿಟಿ ಕಾರ್ಮಿಕರು ಎಚ್‌ಎಂಎಸ್, ಇಂಟಕ್, ಬಿಎಂಎಸ್ ಸಂಘಟನೆಗಳ ಬೆಂಬಲದೊಂದಿಗೆ ಶುಕ್ರವಾರ ಧಿಡೀರ್ ಪ್ರತಿಭಟನೆ ನಡೆಸಿದರು.

ಲಾಭದಲ್ಲಿರುವ ಬಂದರನ್ನು ಖಾಸಗಿಯವರಿಗೆ ಹಸ್ತಾಂತರಿಸುವುದನ್ನು ಕಾರ್ಮಿಕರು ವಿರೋಧಿಸಿದರು. ಇದರಿಂದ ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆಯುಂಟಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಕಾರ್ಮಿಕ ಸಂಘಟನೆಗಳು ವಿರೋಧಿಸಿದರೂ ಸರ್ಕಾರ ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿವೆ ಎಂದು ಅವರು ದೂರಿದ್ದಾರೆ

ಎನ್‌ಎಂಪಿಟಿ, ತೂತುಕುಡಿ, ಗೋವಾ ಸೇರಿದಂತೆ ಪ್ರಮುಖ ಬಂದರುಗಳ ಕಾರ್ಮಿಕರು ಖಾಸಗಿಕರಣಕ್ಕೆ ಬಲವಾಗಿ ವಿರೋಧಿಸಿದ್ದಾರೆ. ಈ ಬಗ್ಗೆ ನವದೆಹಲಿಯಲ್ಲಿ ನಡೆದ ನೌಕಾಯಾನ ಇಲಾಖೆ ಸಭೆಯಲ್ಲೂ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿತ್ತು. ಆದರೂ ಸರ್ಕಾರ ಕಾರ್ಮಿಕರ ವಿರೋಧದ ನಡುವೆಯೂ ಖಾಸಗಿರಕರಣಕ್ಕೆ ಮುಂದಾಗಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಶುಕ್ರವಾರ ಕೇಂದ್ರ ನೌಕಾಯಾನ ಕಾರ್ಯದರ್ಶಿ ಕೆ.ಮೋಹನದಾಸ್ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತಾ ದರೂ ಕೊನೆ ಕ್ಷಣದಲ್ಲಿ ರದ್ದು ಗೊಂಡಿರು ವುದರಿಂದ ಕಾರ್ಮಿಕ ಸಂಘಟನೆಗಳು ಮನವಿ ನೀಡುವ ನಿರ್ಧಾರದಿಂದ ಹಿಂದೆ ಸರಿಯ ಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT