ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದಾರು: ಶ್ರಮದಾನ, ರಸ್ತೆ ನಿರ್ಮಾಣ

Last Updated 17 ಸೆಪ್ಟೆಂಬರ್ 2011, 9:15 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಸಮೀಪದ ಬಂದಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗ್ರು ಗ್ರಾಮದ ದಪ್ಪದಪಲ್ಕೆ- ಉಳಿಯ- ಪೊಯ್ಯ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಹೊಸ ರಸ್ತೆಯಲ್ಲಿ ಸುಮಾರು 1 ಕಿಮೀ ದೂರದ ಹೊಸ ರಸ್ತೆಯನ್ನು ಮೊಗ್ರು ಅಪ್ನಾ ದೇಶ್ ಗ್ರಾಮ ಸಮೃದ್ಧಿ ಸಮಿತಿ ವತಿಯಿಂದ ಗ್ರಾಮಸ್ಥರು ಗುರುವಾರ ಶ್ರಮದಾನದ ಮೂಲಕ ನಿರ್ಮಿಸಿದರು.

ಬಂದಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಪ್ಪದಪಲ್ಕೆ-ಕಂಚಿನಡ್ಕ ಸಂಪರ್ಕ ರಸ್ತೆಯನ್ನು 2010ರಲ್ಲಿ ಗ್ರಾಮ ಸಭೆಯ ನಿರ್ಣಯದಂತೆ ಗ್ರಾಮ ಪಂಚಾಯಿತಿ ರಸ್ತೆಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು. ಈ ಮಧ್ಯೆ ದಪ್ಪದಪಲ್ಕೆ ಎಂಬಲ್ಲಿಂದ ಉಳಿಯ ಮೂಲಕ ಪೊಯ್ಯ ಪ್ರದೇಶದವರೆಗಿನ ಸುಮಾರು 5 ಕಿಮೀ ದೂರದ ರಸ್ತೆಯಲ್ಲಿ ಸುಮಾರು 1.5 ಕಿಮೀ ದೂರ ಗುಡ್ಡಗಾಡು ಪ್ರದೇಶವಾಗಿದ್ದು, ಜನಸಂಚಾರಕ್ಕೆ ಹಾಗೂ ವಾಹನ ಓಡಾಟಕ್ಕೆ ಯೋಗ್ಯವೆನಿಸುವ ಪೂರ್ಣ ರಸ್ತೆಯಾಗದೆ ಗ್ರಾಮಸ್ಥರಿಗೆ ತೊಂದರೆಯಾಗಿತ್ತು. 

 ಈ ರೀತಿಯಾಗಿ ಸಂಪರ್ಕಕ್ಕೆ ಅಡ್ಡಿಯಾಗಿದ್ದ ಅಪೂರ್ಣ ರಸ್ತೆಯನ್ನು ಶಾಶ್ವತ ಸಂಪರ್ಕ ಯೋಗ್ಯ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಊರವರೇ ಮುಂದಾಗಿದ್ದು ಗ್ರಾಪಂ ಸದಸ್ಯ ದಿನಕರ ಗೌಡ ನೇತೃತ್ವದಲ್ಲಿ ಗ್ರಾಮಸ್ಥರು ಶ್ರಮದಾನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT