ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್: ಶಾಲಾ ಕಾಲೇಜುಗಳಿಗೆ ಬೀಗ

Last Updated 6 ಅಕ್ಟೋಬರ್ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಬಂದ್‌ನಿಂದಾಗಿ ನಗರದ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿತ್ತು. ಇದರಿಂದ ಶಾಲಾ-ಕಾಲೇಜುಗಳ ಪ್ರವೇಶ ದ್ವಾರಗಳಿಗೆ ಬೀಗ ಹಾಕಿದ್ದ ದೃಶ್ಯ ನಗರದಲ್ಲಿ ಸಾಮಾನ್ಯವಾಗಿತ್ತು.

ಬಂದ್‌ನಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಶಾಲೆಗಳಲಿಗೆ ರಜೆ ನೀಡಿದ್ದರಿಂದ ಖಾಲಿಯಾಗಿದ್ದ ರಸ್ತೆಗಳನ್ನು ವಿದ್ಯಾರ್ಥಿಗಳು ಕ್ರಿಕೆಟ್ ಮೈದಾನವಾಗಿಸಿಕೊಂಡರು. ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದ ದೃಶ್ಯ ಕಂಡುಬಂತು.

`ಮಕ್ಕಳಿಗೆ ಶಾಲೆ ಇಲ್ಲ ಎಂದರೆ ಇವರನ್ನು ನಿಭಾಯಿಸುವುದೇ ದೊಡ್ಡ ತಲೆ ನೋವು. ಟಿವಿಯಲ್ಲಿ ಯಾವುದೇ ಮನರಂಜನಾ ಕಾರ್ಯಕ್ರಮಗಳಿಲ್ಲದೇ ಬೇಸರವಾಗುತ್ತಿದೆ. ಹೊರಗೆ ಹೋದರೆ ಗಲಾಟೆ ನಡೆಯುತ್ತದೆ ಎಂಬ ಭಯ. ಹೀಗಾಗಿ ಮಕ್ಕಳನ್ನು ಮನೆಯಲ್ಲೇ ಕೂಡಿಹಾಕುವುದು ಅನಿವಾರ್ಯವಾಗಿದೆ~
-ಶೈಲಜಾ, ಇಂದಿರಾನಗರದ ನಿವಾಸಿ

`ಮನೆಯಲ್ಲಿರಲು ಇಷ್ಟಪಡದ ಮಕ್ಕಳು ರಸ್ತೆಯಲ್ಲಿ ಆಟವಾಡಲು ಹೋಗುತ್ತೇವೆ ಎಂದು ಹಠ ಹಿಡಿಯುತ್ತಾರೆ. ರಸ್ತೆಯಲ್ಲಿ ಏನಾದರೂ ಗಲಾಟೆ ಆಗುತ್ತದೆಯೋ ಎಂಬ ಆತಂಕವಿದೆ. ಹೀಗಾಗಿ ಮಕ್ಕಳನ್ನು ಮನೆಯಿಂದ ಆಚೆಗೆ ಬಿಡಲಿಲ್ಲ~
-ಶಮಾ, ವಿಜಯನಗರದ ನಿವಾಸಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT