ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಹರಿಯದ ‘ಮೈತ್ರಿ’ ಬಿಕ್ಕಟ್ಟು

ಮಹಾರಾಷ್ಟ್ರ: ಅಧಿಸೂಚನೆ ಹೊರಬಿದ್ದರೂ ಮೂಡದ ಒಮ್ಮತ
Last Updated 20 ಸೆಪ್ಟೆಂಬರ್ 2014, 20:15 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಕುತೂಹಲ ಕೆರಳಿಸಿ­ರುವ ಮಹಾರಾಷ್ಟ್ರ ವಿಧಾನ­ಸಭಾ ಚುನಾವಣೆಗೆ ಶನಿವಾರ ಚುನಾವಣಾ ಆಯೋಗದ ಅಧಿಸೂಚನೆ ಹೊರಬಿದ್ದಿ­ದ್ದರೂ ಮೈತ್ರಿಕೂಟಗಳಾದ ಶಿವಸೇನೆ– ಬಿಜೆಪಿ ಹಾಗೂ ಕಾಂಗ್ರೆಸ್‌– ಎನ್‌ಸಿಪಿ­ಗಳ ನಡುವೆ ಕ್ಷೇತ್ರ ಹೊಂದಾಣಿಕೆ ಹಗ್ಗಜಗ್ಗಾಟ ಇನ್ನೂ ಮುಂದುವರೆದಿದೆ.

ಎರಡು– ಮೂರು ದಿನಗಳಲ್ಲಿ ಸಕಾ­ರಾ­­ತ್ಮಕವಾಗಿ ಸ್ಪಂದಿಸದಿದ್ದರೆ ಎನ್‌ಸಿಪಿ ಜತೆ ಮೈತ್ರಿ ಕೊನೆಗೊಳಿಸುವ ಎಚ್ಚರಿಕೆ­ಯನ್ನು ಕಾಂಗ್ರೆಸ್‌ ಶನಿವಾರ ನೀಡಿದೆ.

ಮತ್ತೊಂದೆಡೆ ಯಾವುದೇ ಕಾರ­ಣಕ್ಕೂ  ಕ್ಷೇತ್ರ ಹೊಂದಾಣಿಕೆಯಂತಹ  ಕ್ಷುಲ್ಲಕ ಕಾರಣಕ್ಕೆ ಶಿವಸೇನೆ ಜತೆ 25 ವರ್ಷಗಳ ಮೈತ್ರಿ ಕಡಿದುಕೊಳ್ಳದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ತಾಕೀತು ಮಾಡಿದ್ದಾರೆ.

ಬಿಜೆಪಿ ಬಿಗಿಪಟ್ಟು ಸಡಿಲಿಸಿದ ಕಾರಣ ಸ್ಥಾನ ಹೊಂದಾಣಿಕೆ ಬಿಕ್ಕಟ್ಟು ಶನಿವಾರ ಕೊನೆಗಾಣಬಹುದು ಎಂದು ಭಾವಿಸ­ಲಾ­ಗಿತ್ತು. ಆದರೆ, ಎರಡೂ ಪಕ್ಷಗಳ ನಾಯಕರ ಸಭೆ ಒಮ್ಮತಕ್ಕೆ ಬರಲು ವಿಫಲವಾಗಿದೆ. ಈ  ಮಧ್ಯೆ ಸ್ಥಾನ ಹೊಂದಾ­­ಣಿಕೆ ಬಿಕ್ಕಟ್ಟು ಬಗೆಹರಿಸಲು ಇನ್ನೂ ಎರಡು ಸುತ್ತಿನ ಮಾತುಕತೆ ನಡೆ­ಸಲು ಬಿಜೆಪಿ ನಿರ್ಧರಿಸಿದೆ.

ಭಾನುವಾರ ನಡೆಯುವ ಶಿವ­ಸೇನಾ ಕಾರ್ಯಕಾರಿಣಿಯಲ್ಲಿ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಬಿಜೆಪಿ ಜತೆ ಮೈತ್ರಿ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಪಕ್ಷದ ವಕ್ತಾರ ಹಾಗೂ ಸಂಸದ ಸಂಜಯ್ ರಾವತ್‌ ತಿಳಿಸಿದ್ದಾರೆ. 288 ವಿಧಾನಸಭಾ ಕ್ಷೇತ್ರಗ­ಳಲ್ಲಿ  ತನಗೆ 155 ಸ್ಥಾನಗಳನ್ನು ಇಟ್ಟು­ಕೊಂಡು ಬಿಜೆಪಿಗೆ 125 ಕ್ಷೇತ್ರ ಬಿಟ್ಟು ಕೊಡುವ ಸೂತ್ರವನ್ನು ಬಿಜೆಪಿ ಮುಂದಿ­ಟ್ಟಿದೆ. ಶಿವಸೇನೆಯ ಸೂತ್ರವನ್ನು ಬಿಜೆಪಿತಳ್ಳಿಹಾಕಿದೆ. ಇದೇ ವೇಳೆ, ಮುಂದಿನ 24 ಗಂಟೆಯೊಳಗೆ ಸ್ಥಾನ ಹೊಂದಾಣಿಕೆ ಸ್ಪಷ್ಟ ಚಿತ್ರಣ ದೊರೆಯ­ಲಿದೆ  ಎಂದು ಮಹಾರಾಷ್ಟ್ರ ಬಿಜೆಪಿ  ನಾಯಕ ವಿನೋದ್‌ ತಾವಡೆ ಹೇಳಿದ್ದಾರೆ.

ಕಾಂಗ್ರೆಸ್‌ ಬೆದರಿಕೆ: ಇನ್ನೂ ಎರಡು ಅಥವಾ ಮೂರು ದಿನಗಳಲ್ಲಿ ಎನ್‌ಸಿಪಿ­ಯಿಂದ ಪೂರಕ ಪ್ರತಿಕ್ರಿಯೆ ದೊರೆಯ­ದಿದ್ದಲ್ಲಿ ಎಲ್ಲಾ  288 ಸ್ಥಾನಗಳಲ್ಲೂ ಸ್ಪರ್ಧಿಸಲು ಸಜ್ಜಾಗಿರುವುದಾಗಿ  ಮಹಾ­ರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಮಾಣಿಕ್‌ ರಾವ್ ಠಾಕ್ರೆ ತಿಳಿಸಿದ್ದಾರೆ.

ಕಾಂಗ್ರೆಸ್‌ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಬಳಿಕ ಈ ವಿಷಯ ತಿಳಿಸಿದ ಅವರು, ಕಳೆದ ವಿಧಾನಸಭಾ ಚುನಾ­ವ­ಣೆ­ಯಲ್ಲಿ ಪಕ್ಷ ಸ್ಪರ್ಧಿಸಿದ್ದ 174 ಕ್ಷೇತ್ರ­ಗಳ ಸಂಭಾವ್ಯ ಹುರಿಯಾಳುಗಳ  ಆಯ್ಕೆ ಬಗ್ಗೆ ಚರ್ಚಿಸಲಾಯಿತು ಎಂದರು.

ಎನ್‌ಸಿಪಿಗೆ 126 ಕ್ಷೇತ್ರ ಬಿಟ್ಟು ಕೊಡುವ ಪ್ರಸ್ತಾವವನ್ನು ಕಾಂಗ್ರೆಸ್‌ ಮುಂದಿಟ್ಟಿದೆ. ಆದರೆ, ಎನ್‌ಸಿಪಿ ಪ್ರತಿಕ್ರಿ­ಯಿ­ಸಿಲ್ಲ. ಕಳೆದ ಚುನಾವಣೆಯಲ್ಲಿ ಸ್ಪರ್ಧಿ­ಸಿದ್ದ ಎಲ್ಲ 144 ಸ್ಥಾನಗಳನ್ನು ಬಿಟ್ಟುಕೊಡುವಂತೆ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಪಟ್ಟು ಹಿಡಿದಿದೆ.

ಒಂದು ವೇಳೆ ಎನ್‌ಸಿಪಿ ಬಿಗಿಪಟ್ಟು ಸಡಿ­ಲಿಸದಿದ್ದರೆ ಏಕಾಂಗಿಯಾಗಿ ಚುನಾವಣೆ ಎದುರಿಸುವುದಾಗಿ ಕಾಂಗ್ರೆಸ್‌ ಹೇಳಿದೆ.
ಅ.15ರ ವಿಧಾನಸಭಾ ಚುನಾವಣೆಗೆ  ನಾಮಪತ್ರ ಸಲ್ಲಿಸಲು ಸೆ. 27 ಕೊನೆಯ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT