ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಾಜ್ ಆಟೊ: ಲಾಭ ರೂ.740 ಕೋಟಿ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಎರಡನೆಯ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಬಜಾಜ್ ಆಟೊ ಲಿಮಿಟೆಡ್ (ಬಿಎಎಲ್) ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ರೂ.740.67 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ (ರೂ.725.80 ಕೋಟಿ) ನಿವ್ವಳ ಲಾಭ ಶೇ 2.05ರಷ್ಟು ಹೆಚ್ಚಿದೆ. ಆದರೆ, ಒಟ್ಟು ವರಮಾನ ಶೇ 4.11ರಷ್ಟು ಕುಸಿದಿದ್ದು, ರೂ.4,972 ಕೋಟಿಗಳಷ್ಟಾಗಿದೆ. ಹಿಂದಿನ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ರೂ.5,185.36 ಕೋಟಿ ವರಮಾನ ದಾಖಲಾಗಿತ್ತು.

ಹಣದುಬ್ಬರ ಹೆಚ್ಚಳ, ಗರಿಷ್ಠ ಬಡ್ಡಿ ದರ, ರೂಪಾಯಿ ಅಪಮೌಲ್ಯ ಇತ್ಯಾದಿ ಸಂಗತಿಗಳಿಂದ ಮಾರಾಟದಲ್ಲಿ ಕುಸಿತವಾಗಿರುವುದೇ ನಿವ್ವಳ ಲಾಭದ ಪ್ರಮಾಣ ತಗ್ಗಲು ಪ್ರಮುಖ ಕಾರಣ ಎಂದು ಕಂಪೆನಿ ಹೇಳಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT